ವಿಶ್ವ ಕ್ಯಾನ್ಸರ್ ದಿನದಂದು ಜನಜಾಗೃತಿ

ಲೋಕದರ್ಶನ ವರದಿ

ಕಾಗವಾಡ 05:  ಇಡಿ ವಿಶ್ವದಲ್ಲಿ ಕ್ಯಾನ್ಸರ್ ರೋಗ ಹೆಬ್ಬುತ್ತಿದೆ. ಅಮೇರಿಕಾ ದೇಶದಲ್ಲಿ 1 ಲಕ್ಷ ಜನರಲ್ಲಿ ಸುಮಾರು 350 ಜನ ಕ್ಯಾನ್ಸರ್ ರೋಗಿಗಳಾಗಿದ್ದಾರೆ. ಅದೇ ಭಾರತ ದೇಶದಲ್ಲಿಯ ಪ್ರಮಾಣ 1 ಲಕ್ಷಕ್ಕೆ 150 ಜನ ಇದ್ದಾರೆ. ಈಗ ಪ್ರಮಾಣ ಹೆಚ್ಚಿಸುತ್ತಿದ್ದರಿಂದ ಚಿಂತೆಯ ವಿಷಯವಾಗಿದೆ. ಅದರಲ್ಲಿ ಕನರ್ಾಟಕದ ವಿಜಯಪುರ, ಬೆಳಗಾವಿ ಜಿಲ್ಲೆಯ ಮತ್ತು ಶಿರೋಳ ತಾಲೂಕಿನ ರೋಗಿಗಳ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳಾಗಿದ್ದಾರೆ. ಇದನ್ನು ತಡೆಗಟ್ಟಲು ತಜ್ಞರು ಎಚ್ಚೆತ್ತುಗೊಳ್ಳಿರಿ ಎಂದು ಮಿರಜದ ಖ್ಯಾತ ಕ್ಯಾನ್ಸರ್ ರೋಗ ತಜ್ಞ ಡಾ. ರವೀಂದ್ರ ಜೋಶಿ ಮಿರಜದಲ್ಲಿ ಹೇಳಿದರು.

ದಿ.4ರಂದು ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ರೋಗ ತಡೆಗಟ್ಟಲು ಜೋಶಿಜ್ ಕ್ಯಾನ್ಸರ್ ಆಸ್ಪತ್ರೆಯಿಂದ 2 ತಂಡಗಳು ರಚಿಸಿ ಮಿರಜ ಆಸ್ಪತ್ರೆಯಿಂದ ಮೈಸಾಳ ಮಾರ್ಗವಾಗಿ ಕಾಗವಾಡ, ಶಿರಗುಪ್ಪಿ, ಮಾಂಜರಿ, ಅಂಕಲಿ ಗ್ರಾಮಗಳ ವರೆಗೆ ಮತ್ತು ನೆರೆಯ ಶಿರೋಳ ತಾಲೂಕಿನಲ್ಲಿ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸಿದರು.

ಪ್ರತಿವರ್ಷ ಶೇ. 6ರಷ್ಟು ಜನರು ಕ್ಯಾನ್ಸರ್ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಈಗಲೂ ತಂಬಾಕು ಸೇವನೆ ಹಾಗೂ ಸೇದುವರ ಯುವಕರ ಸಂಖ್ಯೆ ದಿನ-ದಿನ ಹೆಚ್ಚಿಸುತ್ತಿದೆ.ಅದರೊಂದಿಗೆ ದಿನನಿತ್ಯ ಸೇವಿಸುವ ಆಹಾರದ ಬೆಳೆಗಳ ಮೇಲೆ ಸಿಂಪರಿಸುವ ವಿಶಕಾರಿ ರಸಾಯಣಗಳ ಹೆಚ್ಚಿನ ಬಳಿಕೆಯಿಂದ ತಿನ್ನುವ ಆಹಾರಗಳು ವಿಶಕರಿವಾಗಿವೆ. ಇದರಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಿಸುತ್ತಿದೆ. ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನಲ್ಲಿ ಹಳ್ಳಿಗಳಲ್ಲಿ ಪ್ರಮಾಣ ಕಂಡರೆ ಭಯವಾಗುತ್ತದೆ. ಇದರಂತೆ ಕನರ್ಾಟಕದ ಗಡಿ ಜಿಲ್ಲೆಯ ಗ್ರಾಮಗಳಲ್ಲಿ ಕಾಣುತ್ತಿದೆ ಎಂದು ಡಾ. ರವೀಂದ್ರ ಜೋಶಿ ಹೇಳಿದರು.

ಇದನ್ನು ತಡೆಗಟ್ಟಲು ಯುವಕರು ಧುಮ್ರಪಾಣ, ಪಾನ ನಿಶೇಧ ಮಾಡಲೆಬೇಕು. ಅದರೊಂದಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು, ಈಗ ಸೇವಿಸುತ್ತಿರುವ ವಿಷಭರೀತ ಆಹಾರ ತಡೆಗಟ್ಟಲು ಪ್ರಯತ್ನಿಸಬೇಕೆಂದು ಜೋಶಿಜ್ಕ್ಯಾನ್ಸರ್ ಆಸ್ಪತ್ರೆಯ ಡಾ. ರವೀಂದ್ರ ಜೋಶಿ ಮತ್ತು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಶಿವಯೋಗಿ ವಿಜಾಪುರ ಜನರಿಗೆ ಕರೆ ನೀಡಿದ್ದಾರೆ. ಜನ ಜಾಗೃತಿ ತಂಡದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕರಾದ ಚಂದ್ರಕಾಂತ ಕಿತ್ತೂರೆ, ಇಮರಾನ ಮುಶ್ರೀಫ್, ಶೀತಲ ಖೋಲಪ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.