ಶಾಸಕ ವಿಠ್ಠಲ ಹಲಗೇಕರ ಜನ್ಮದಿನ: ಉಚಿತ ಆರೋಗ್ಯ ತಪಾಸನಾ ಶಿಬಿರ

Birthday of MLA Vitthala Halagekar: Free health checkup camp

ಶಾಸಕ ವಿಠ್ಠಲ ಹಲಗೇಕರ ಜನ್ಮದಿನ: ಉಚಿತ ಆರೋಗ್ಯ ತಪಾಸನಾ ಶಿಬಿರ 

ಖಾನಾಪೂರ 08: ಸಾರ್ವಜನಿಕರ ಆರೋಗ್ಯ ಸೇವೆಗೆ ಕೆ ಎಲ್ ಇ ಸಂಸ್ಥೆ ಯಾವತ್ತೂ ಸಿದ್ದ ಎಂದು ಯು ಎಸ್ ಎಮ್  ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಅವರು ಹೇಳಿದರು. 

ಅವರು ಮಂಗಳವಾರ ದಿ. 7ರಂದು ಖಾನಾಪುರ ತಾಲೂಕಿನ ಶಾಸಕ ವಿಠ್ಠಲ ಸೋಮಣ್ಣಾ ಹಲಗೇಕರ ಅವರ 63 ನೇ ಜನ್ಮದಿನದ ಅಂಗವಾಗಿ ಶಾಂತಿನಿಕೇತನ ಅಂತರ್‌ರಾಷ್ಟ್ರೀಯ ಪಬ್ಲಿಕ್ ಶಾಲೆಯ ಆವರಣದಲ್ಲಿ  ಕೆ ಎಲ್ ಇ  ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ತಪಾಸನಾ ಶಿಬಿರವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು.  

ಶಿಕ್ಷಣ ಮತ್ತು  ಆರೋಗ್ಯ ಗಳು ಜೀವನದ ಅವಿಭಾಜ್ಯ ಅಂಗಗಳು ಇವುಗಳನ್ನು ಸಮಾಜಕ್ಕೆ ನೀಡುವಲ್ಲಿ ಮಾನ್ಯ ಶಾಸಕರಾದ ಶ್ರೀ  ವಿಠ್ಟಲ ಹಲಗೇಕರ ಅವರ ಪಾತ್ರ ಮಹತ್ವದ್ದು ಅದರಲ್ಲಿಯೂ ಖಾನಾಪುರ ದಂತಹ ಗುಡ್ಡಗಾಡಿನ ಪ್ರದೇಶದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಸಾರ್ವಜನಿಕರಿಗೆ ಸರಳವಾಗಿ ದೊರಕುವಂತೆ ಮಾಡುವದು ಸಹಜಸಾಧ್ಯವಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಹಾಗೂ ನಿಯಮಿತ ತಪಾಸಣೆಯ ದೃಷ್ಟಿಯಿಂದ ಆರೋಗ್ಯ ಇಲಾಖೆಯನ್ನೂ ಸಹ ಒಟ್ಟುಗೂಡಿಸಿಕೊಂಡಿರುವ ಮಾನ್ಯಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು. ಅಲ್ಲದೇ ವಾಹನ ಸೌಕರ‌್ಯದಿಂದ ವಂಚಿತರಾಗಿರುವ ಹಳ್ಳಿಗಳ ರೋಗಿಗಳ ಹಿತದೃಷ್ಟಿಯಿಂದ ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯಿಂದ ಉಚಿತ ವಾಹನ ಸೇವೆಯನ್ನು ಪ್ರಾರರಂಭಿಸಲಾಗುವದು ಈ ನಿಟ್ಟಿನಲ್ಲಿ ನಾಗರಿಕರು ಹಾಗೂ ಮಾನ್ಯ ಶಾಸಕರು ಸಮರ​‍್ಕ ಪ್ರೋತ್ಸಾಹ ನೀಡಬೇಕೆಂದು  ಎಂದು ಕರೆ ನೀಡಿದರು. 

ಕಾರ್ಯಕ್ರಮದ ಕೆಂದ್ರಬಿಂದುವಾಗಿದ್ದ ಶಾಸಕ ವಿಠ್ಠಲ ಹಲಗೇಕರ ಅವರು ಮಾತನಾಡುತ್ತ ಕೆ ಎಲ್ ಇ ಸಂಸ್ಥೆಯು ಇಂದು ನಮ್ಮ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ನೀಡಲು ಮುಂದೆ ಬಂದಿದೆ. ಇದು ಕೆ ಎಲ್ ಇ ಸಂಸ್ಥೆಯ ಕಾರ್ಯಧಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇವೆಗಳನ್ನು ಸಮರ​‍್ಕವಾಗಿ ಉಪಯೋಗಿಸಿಕೊಂಡು ನಿರೋಗಿಯಾಗಿ ಬಾಳೋಣ  ಎಂದು ಹೇಳಿದರು. 

ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಶ್ರೀಕಾಂತ ರವೂರಿ, ಡಾ. ಸೌರಭ ಕುಲಕರ್ಣಿ,  ಚಿಕ್ಕಮಕ್ಕಳ ವೈದ್ಯ ಡಾ. ಯೋಗೇಶ ರಾವಳ, ನೇತ್ರ ತಜ್ಞೆ ಡಾ. ಸ್ಫೂರ್ತಿ ಮೊರ​‍್ಪನವರ, ಚರ್ಮರೋಗ ತಜ್ಞೆ ಡಾ. ನೀರ್ಮಲಾ ಶೆಟ್ಟರ , ಎಲುಬು ಕೀಲು ವೈದ್ಯ ಡಾ.ಮುರುಘೇಶ ಕುರನಿ, ಮೂತ್ರರೋಗ ತಜ್ಞ        ಡಾ. ಈಶ್ವರ ಕುಂದುರು, ಕಿವಿ ಗಂಟಲು ಹಾಗೂ ಮೂಗಿನ ತಜ್ಞೆ ಡಾ. ವೈ ಸುಶ್ಮಾ, ಹೆಸರಾಂತ ಶಸ್ತ್ರಚಿಕಿತ್ಸಜ್ಞ ಡಾ. ಸುನಿಲ ರೇವನಕರ, ಮಾನಸಿಕ ರೋಗ ಚಿಕಿತ್ಸಜ್ಞೆ ಡಾ. ವಿದ್ಯಾಶ್ರಿ ಹುಬ್ಬಳ್ಳಿ  ಮತ್ತು ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಗೀತಾಂಜಲಿ ತೋಟಗಿ ಮತ್ತು ತಂಡದವರು ನಾಗರಿಕರಿಗೆ  ಆರೋಗ್ಯ ತಪಾಸಣೆ ಮಾಡಿ ಓಷಧ ವಿತರಿಸಿದರು. 

ಶಿಬಿರದಲ್ಲಿ 354 ನಾಗರಿಕರನ್ನು ತಪಾಶಿಸಲಾಯಿತು. ಅದರಲ್ಲಿ 55 ಜನರಿಗೆ ಮೆಡಿಸಿನ ವಿಭಾಗದ ವೈದ್ಯರು ತಪಾಸಣೆ ಮಾಡಿ 15 ಜನರಿಗೆ ಅತಿರಕ್ತದೊತ್ತಡ, 8 ಜನರಿಗೆ ಮಧುಮೇಹದ ಸಮಸ್ಯೆ, 38 ಜನರಿಗೆ ಎಲುಬು ಕೀಲು ವೈದ್ಯರಿಂದ ತಪಾಸಣೆ ಮಾಡಲಾಗಿ ಅದರಲ್ಲಿ 08 ಜನರಿಗೆ ಸಂಧಿವಾತ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, 45 ಜನರಿಗೆ ಕಣ್ಣಿನ ವೈದ್ಯರು ತಪಾಸಣೆ ಮಾಡಲಾಗಿ ಅದರಲ್ಲಿ 06 ಜನರಿಗೆ ಮೋತಿಬಿಂದು ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, 08 ಜನ ಗರ್ಭಿಣಿಯರು ಮತ್ತು ಮಹಿಳೆಯರು ತಪಾಸಣೆಗೊಳಪಟ್ಟರು, ಚಿಕ್ಕಮಕ್ಕಳ ವೈದ್ಯರು 15 ಮಕ್ಕಳನ್ನು ತಪಾಸಣೆ ಮಾಡಿದರು. ಅದರಲ್ಲಿ 4 ಮಕ್ಕಳಿಗೆ ಅಪೌಷ್ಟಿಕತೆ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. 9 ಜನ ಮಾನಸಿಕ ರೋಗ ಚಿಕಿತ್ಸಾ ವಿಭಾಗದಲ್ಲಿ ತಪಾಸಣೆ ಗೊಳಪಟ್ಟರು, 23 ಜನರು ಶಸ್ತ್ರಚಿಕಿತ್ಸಾ ವಿಬಾಗದಲ್ಲಿ ತಪಾಸಣೆಗೊಳಪಟ್ಟರು, 17 ಜನರು ಮೂತ್ರರೋಗವಿಭಾಗದಲ್ಲಿ ತಪಾಸಣೆಗೊಳಪಟ್ಟರು, 25 ಜನರು ಚರ್ಮರೋಗ ವಿಭಾಗದಲ್ಲಿ ತಪಾಸಣೆಗೊಳಪಟ್ಟರು, 28 ಜನರು ಕಿವಿ ಗಂಟಲು ಮೂಗು ವಿಭಾಗದಲ್ಲಿ ತಪಾಸಣೆಗೊಳಪಟ್ಟರುಅವರಲ್ಲಿ 8 ಜನರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದದ್ದು ತಿಳಿದುಬಂದಿತು.  ಈ ಎಲ್ಲ ನಾಗರಿಕರಿಗೆ ಆಸ್ಪತ್ರೆಯ ಅತ್ಯಲ್ಪ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್ ಸಿ ಧಾರವಾಡ ಅವರು ಸೂಚಿಸಿದ್ದಾರೆ. 

ಖಾನಾಪುರ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕಿವಡಸಣ್ಣವರ, ಮಹಾಲಕ್ಷ್ಮಿ ಕೊ ಆಪರೇಟಿವ್ ಸೊಸೈಟಿಯ ಪಧಾದಿಕಾರಿಗಳು ಹಾಗೂ ಖಾನಾಪುರ ವಾಸಿಗಳು ಮುಂತಾದವರು ಉಪಸ್ಥಿತರಿದ್ದರು.