ಹೆಚ್.ಡಿ.ಕುಮಾರಸ್ವಾಮಿ ಹುಟ್ಟು ಹಬ್ಬ ನಿಮಿತ್ಯ ವಿಶೇಷ ಪೂಜೆ

ಲೋಕದರ್ಶನ ವರದಿ

ಕೊಪ್ಪಳ 16: ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ 59 ನೇ ಹುಟ್ಟು ಹಬ್ಬದ ನಿಮಿತ್ಯ ರವಿವಾರದಂದು ಜೆಡಿಎಸ್ ಮುಖಂಡರು ಗವಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಧ್ಯಾನ್ಹ 2 ಗಂಟೆಗೆ ಗವಿಮಠದ ವಿದ್ಯಾಥರ್ಿಗಳ ನಿಲಯದಲ್ಲಿ ವಿದ್ಯಾಥರ್ಿಗಳಿಂದ ಕೆಕ್ ಕತ್ತರಿಸಿ ಸಿಹಿಯನ್ನು ಹಂಚಲಾಯಿತು.

 ಜೆಡಿಎಸ್ ಜಿಲ್ಲಾ ಕಾಯರ್ಾಧ್ಯಕ್ಷ ವಿರೇಶ ಮಹಾಂತಯ್ಯನಮಠ ರವರಿಂದ ವಿದ್ಯಾಥರ್ಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ವಿರೇಶ ಮಹಾಂತಯ್ಯನಮಠ ಮಾತನಾಡಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರ 59 ನೇ ಹುಟ್ಟು ಹಬ್ಬದ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಕುಮಾರಸ್ವಾಮಿರವರಿಗೆ  ಗವಿಸಿದ್ದೇಶ್ವರನು ಆರೋಗ್ಯ ಮತ್ತು ಹೆಚ್ಚಿನ ಆಯಸ್ಸು ಕೊಡಲಿ ರಾಜ್ಯದ ಜನತೆಗೆ ಕುಮಾರಸ್ವಾಮಿರವರು ಒಳ್ಳೆಯದು ಮಾಡಲಿ ರೈತರಿಗೆ ಕೂಲಿ ಕಾಮರ್ಿಕರಿಗೆ ಎಲ್ಲಾ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ಕೊಡಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಕಷ್ಟಕ್ಕೆ ಸ್ಪಂದಿಸಲಿ ದೇವರು ಕುಮಾರಣ್ಣನಿಗೆ ಭಗವಂತನು ಹೆಚ್ಚಿನ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್, ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ, ಮುಖಂಡರಾದ ಸಿ.ಎಂ ಹಿರೆಮಠ, ಮಂಜುನಾಥ್ ಸೊರಟುರ, ಶರಣಪ್ಪ ಕುಂಬಾರ, ವೆಂಕಟೇಶ ಬೆಲ್ಲದ, ಪ್ರಭಾಕರ್ ಬಡಿಗೆರ, ಅಯುಬ ಅಡ್ಡವಾಲೆ, ಮಹೆಮುದ, ಸೊಮಲಿಂಗ , ವಿಠಲ್ , ದೇವಪ್ಪ, ಕುಮಾರ ಮತ್ತಿತರರಿದ್ದರು.