ದಿ. 30 ರಂದು ಪದ್ಮವಿಭೂಷಣ ಕುಮಾರಗಂದರ್ವ ಜನ್ಮಶತಮಾನೋತ್ಸವ

Birth centenary of Padma Vibhushan Kumaragandharva on the 30th

ದಿ. 30 ರಂದು ಪದ್ಮವಿಭೂಷಣ ಕುಮಾರಗಂದರ್ವ ಜನ್ಮಶತಮಾನೋತ್ಸವ 

ಬೆಳಗಾವಿ 26, ;  ಕುಮಾರ ಗಂಧರ್ವ ಪ್ರತಿಷ್ಠಾನದವರು ಕೆ.ಎಲ್‌.ಇ. ಸಂಸ್ಥೆಯ ಸಹಕಾರದೊಂದಿಗೆ ಖ್ಯಾತ ಹಿಂದುಸ್ತಾನಿ ಗಾಯಕ ಪದ್ಮವಿಭೂಷಣ ದಿ. ಕುಮಾರ ಗಂಧರ್ವ ಅವರ ಜನ್ಮಶತಮಾನೋತ್ಸವ ಕಾರ‌್ಯಕ್ರಮವನ್ನು ಇದೇ ದಿ. 30 ಶನಿವಾರದಂದು ನೆಹರು ನಗರದಲ್ಲಿರುವ ಜೆ.ಎನ್‌.ಎಂ.ಸಿ. ಆವರಣದ ಕೆ.ಎಲ್‌.ಇ. ಶತಮಾನೋತ್ಸ ಕನ್ವೆನ್ಷನ್ ಸೆಂಟರದಲ್ಲಿರುವ ಡಾ. ಬಿ. ಎಸ್‌. ಕೋಡ್ಕಿಣಿ ಸಬಾಭವನದಲ್ಲಿ ಹಮ್ಮಿಕೊಂಡಿದ್ದಾರೆ. ಮುಂಜಾನೆ 9-30 ರಿಂದ  ಮ. 1 ಗಂಟೆವರೆಗೆ ಸಿದ್ಧಾರ್ಥ ಬೆಳ್ಮಣ್ಣು, ಕಲಾಪಿಣಿ ಯವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವಿದ್ದು ವಿಶ್ವಮೋಹನ ಭಟ್ ಇವರಿಂದ ವೀಣಾವಾದನವಿದೆ. ಸಾಯಂಕಾಲ 5 ಗಂಟೆಯಿಂದ 9 ವರೆಗೆ ಸುಧಾಕರ ಚವ್ಹಾನ, ಅಂಕಿತಾ ಜೋಶಿ ಮತ್ತು ಭುವನೇಶ ಕೋಮ್ಕಲಿಯವರಿಂದ ಗಾಯನ ಮತ್ತು ಪ್ರವೀಣ ಗೋಡಖಿಂಡಿಯವರಿಂದ ಕೊಳಲು ವಾದನವಿದ್ದು ಅರವಿಂದಕುಮಾರ ಅಝಾದ, ಮಾಯಾಂಕ ಬಿಡೆಕರ, ಶ್ರೀದರ ಮಂದ್ರೆ ತಬಲಾ ಹಾಗೂ ಸುದಾಂಶು ಕುಲಕಣಿ, ಸಾರಂಗ ಕುಲಕರ್ಣಿಹಾಗೂ ಸ್ವಾನಂದ ಕುಲಕರ್ಣಿ ಹಾರ್ಮೋನಿಯಂ ಸಾಥ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬೆಳಗಾವಿ ಆರ್ಟ ಸರ್ಕಲ್‌ದವರ ಪ್ರೋತ್ಸಾಹವಿದೆ. ಪ್ರವೇಶ ಉಚಿತವಿದ್ದು ಆಸಕ್ತರು ಸದುಪಯೋಗ ಪಡೆಯುವಂತೆ ಸಾರಂಗ ಕುಲಕರ್ಣಿ ಮತ್ತು ಭುವನೇಶ ಕೋಮ್ಕಲಿ ಕೇಳಿಕೊಂಡಿದ್ದಾರೆ.