ಕೃಷ್ಣಾ ನದಿಯಲ್ಲಿ ಬೈಕ್ ಪತ್ತೆ

ಕಾಗವಾಡ: ಕೃಷ್ಣಾ ನದಿ ನೀರಿನಲ್ಲಿ ಯಾರೋ ಅಜ್ಞಾತರು ಹೊಸದಾದ ಮೋಟರ ಬೈಕ್ ಎಸೆದಿದ್ದು ಉಗಾರ ಖುರ್ದದಲ್ಲಿ ಪತ್ತೆಯಾಗಿದೆ.

ಶುಕ್ರವಾರರಂದು ಉಗಾರ ಖುರ್ದದಲ್ಲಿ ದಿನನಿತ್ಯ ಮೀನುಗಾರರು ನದಿಯಲ್ಲಿ ಮೀನು ಹಿಡಿಯಲು ಹೋದಾಗ ಅವರು ಬೀಸಿದ ಬಲೆ ತಟ್ಟಿದ್ದರಿಂದ ಮೀನುಗಾರರು ನೀರಿನಲ್ಲಿ ಹೋಗಿ ಪತ್ತೆ ಮಾಡಿದಾಗ ಬೈಕ್ ಕಂಡು ಬಂದಿತು. ಕೂಡಲೆ ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕ ಬೈಕ್ ಹೊರತೆಗೆದರು.

ಹೀರೊ ಹೊಂಡಾ ಕಂಪನಿಯ ಹೊಸದಾದ ಬೈಕ್ ಪತ್ತೆಯಾಗಿದ್ದು, ಎರಡು ಗಾಲಿಗಳು, ಸೆಕ್ಯಾಪ್ಸರ್ ಬಿಚ್ಚಿದ್ದು ಕಂಡು ಬಂತು. ನಂಬರ್ ಪ್ಲೇಟಿನ್ ಮೇಲೆ ಕಂಪನಿಯರು ಎಂ.ಎಚ್.10 ಎಂದು ಬರೆದಿದ್ದಾರೆ. ಅಂದರೆ ಸದರಿ ಬೈಕ್ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ನೆರೆಯ ಗ್ರಾಮಗಳಿಂದ ಆಗಿರಬಹುದೆಂದು ಕಾಗವಾಡ ಪೊಲೀಸ್ ಠಾಣೆ ಅಧಿಕಾರಿಗಳು ಶಂಖೆ ವ್ಯಕ್ತಪಡಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆ ಎ.ಎಸ್.ಐ ರಾಮಣ್ಣಾ ಹೊರಟ್ಟಿ ಬೈಕ್ ಜಪ್ತಿ ಮಾಡಿ, ಠಾಣೆಗೆ ಒಪ್ಪಿಸಿದರು.