ಲೋಕದರ್ಶನ ವರದಿ
ಕೊಪ್ಪಳ 15: ಕೊಪ್ಪಳ ನಗರದ ಕುಡಿಯುವ ನೀರಿನ ಬವಣೆ ನೀಗಿಸುವ ಹುಲಿಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ತುಂಬಿದ ಕೆರೆಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಬಾಗೀನ ಅಪರ್ಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ತೀವ್ರ ಬರಗಾಲ ಕಾಡುತ್ತಿದ್ದರೂ ಸಹ ತುಂಗಭದ್ರೆಯಿಂದ ನೀರನ್ನು ತಂದು ಕೆರೆಯನ್ನು ತುಂಬಿಸಲಾಗಿದೆ. ಹುಲಿಕೆರೆ ಕೊಪ್ಪಳ ಮತ್ತು ಭಾಗ್ಯನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಪ್ರಮುಖವಾಗಿದೆ. ಮಳೆ ಇಲ್ಲದ್ದರಿಂದ ಕೆರೆ ಪೂರ್ಣವಾಗಿ ಒಣಗಿ ಹೋಗಿತ್ತು. ಕೆರೆ ತುಂಬಿಸುವ ಯೋಜನೆಯಲ್ಲಿ ಈ ಪುರಾತನ ಕೆರೆಗೆ ನೀರನ್ನು ತರುವ ಮೂಲಕ ಈ ಭಾಗದಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಅಲ್ಲದೇ ಬೇಸಿಗೆಯಲ್ಲಿಯೂ ಸಹ ಕೊಪ್ಪಳ ಮತ್ತು ಭಾಗ್ಯನಗರಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಕೆರೆ ತುಂಬಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ಸುಮಾರು 25 ಕೋಟಿ ರುಪಾಯಿ ಯೋಜನೆಯನ್ನು ರೂಪಿಸಲಾಗಿದ್ದು, ಶೀಘ್ರವೇ ಕಾಮಗಾರಿಗಳಿಗೆ ಅನುದಾನ ಸಿಕ್ಕು, ಕೆಲಸ ಆರಂಭವಾಗಲಿದೆ ಎಂದು ಶಾಸಕ ಹಿಟ್ನಾಳ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಕೃಷ್ಣಾ ಇಟ್ಟಂಗಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ನಗರಸಭೆ ಸದಸ್ಯರಾದ ಮಹೇಂದ್ರ ಛೋಪ್ರಾ, ಅಕ್ಬರ್ ಪಾಶಾ ಪಲ್ಟನ್, ಅಜೀಮುದ್ದಿನ್ ಅತ್ತಾರ್, ಗುರುರಾಜ ಹಲಗೇರಿ, ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಹೊನ್ನೂರಸಾಬ್ ಭೈರಾಪೂರ, ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದಶರ್ಿ ಕಿಶೋರಿ ಬೂದನೂರ, ಮಾಜಿ ನಗರಸಭೆ ಸದಸ್ಯ ಮಾನ್ವಿ ಪಾಶಾ, ಜಿಲ್ಲಾ ವಕ್ತಾರ ಕುರಗೋಡ ರವಿ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಕಾಮರ್ಿಕ ಘಟಕ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ್ ಪಂಡಿತ್, ಮುಖಂಡರಾದ ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ಅಜರ್ುನ್ಸಾ ಕಾಟವಾ, ಯಮನೂರಪ್ಪ ನಾಯಕ, ಮಾರುತಿ ಕಾರಟಗಿ, ರಮೇಶ ಗಿಣಗೇರಿ, ಗವಿಸಿದ್ದಪ್ಪ ಚಿನ್ನೂರ, ವಾಜೀದ್ ಎಂ.ಎ. ಇತರರು ಇದ್ದರು.