ಹವಾಮಾನ ವೈಪರಿತ್ಯ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ: ತೋಮರ

ನವದೆಹಲಿ, 12   ಹವಾಮಾನ  ಬದಲಾವಣೆ , ಮತ್ತು ನೈಸರ್ಗಿಕ ವಿಪತ್ತುಗಳು ಇಂದು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹಾನಿಯನ್ನುಂಟುಮಾಡುತ್ತಿವೆ  ಎಂದು  ಸರಕಾರ ಲೋಕಸಭೆ ಇಂದು  ತಿಳಿಸಿದೆ. ಆದರೆ ಈ ವಿಚಾರದಲ್ಲಿ ಯಾರೊಬ್ಬರು ರಾಜಕೀಯ ಬೆರಸಬಾರದು ಎಂದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಶ್ನೋತ್ತರ ವೇಳೆಯಲ್ಲಿ ಈ ವಿಷಯ ತಿಳಿಸಿದರು. "ಸ್ವಾತಂತ್ರ್ಯದ ನಂತರದ ಪ್ರತಿಯೊಂದು ಸರ್ಕಾರವು ಈ ವಿಚಾರದಲ್ಲಿ ಮಾಡಬೇಕಾದ ದ ಕೆಲಸವನ್ನು ಮಾಡಿದೆ  ಹಿಂದಿನ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ  ಕೃಷಿ ಕ್ಷೇತ್ರದಲ್ಲಿ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ಎಂದಿಗೂ ಹೇಳಿಲ್ಲ, ದೂರಿಲ್ಲ   ಆದರೆ ಈಗ   ರೈತರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಅವರು ಆತಂಕ ವ್ಯಕ್ತಪಡಿಸಿದರು.  "ಕೃಷಿ ಸಮಸ್ಯೆ ನಿವಾರಣೆ ಬಗ್ಗೆ  ರಾಜಕೀಯ ಬೆರೆಸುವುದನ್ನು ನಿಲ್ಲಿಸುವವರೆಗೆ, ರೈತರ ಸಮಸ್ಯೆಗಳಿಗೆ ನಾವು ನಿಜವಾದ ಪರಿಹಾರ ಹುಡುಕಲು  ಸಾಧ್ಯವಿಲ್ಲ ಎಂದರು.  ಕಾಂಗ್ರೆಸ್ ನಾಯಕ ಆದಿರ್ ರಂಜನ್ ಚೌಧರಿ ಅವರು ಮಾತನಾಡಿ , ಬಿಜೆಪಿ ನಾಯಕರು ಆಗಾಗ್ಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಮೇಲೆ ದಾಳಿ ಮಾಡಿ ಕಾಂಗ್ರೆಸ್  ಸರಕಾರ  ಕೃಷಿ ಅಭಿವೃದ್ದಿಗೆ ಏನು ಮಾಡಿಲ್ಲ ಎಂದು ಬಿಜೆಪಿ ನಾಯಕರು ಪದೆ ಪದೇ  ದೂರುತ್ತಾರೆ ಎಂದು ಸದನಕ್ಕೆ ಮಾಹಿತಿ  ನೀಡಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ಹಸಿರು ಕ್ರಾಂತಿಗೆ ಮುನ್ನಡಿ ಬರೆದವರು ಆದರೆ ಬಿಜಪಿ  ನಾಯಕರು  ಇದನ್ನೆ ಮರೆತು ಮಾತನಾಡುವುದು ಶೋಭೆ   ತರುವುದಿಲ್ಲ  ಎಂದು ಚೌಧರಿ ಹೇಳಿದರು .ಉತ್ತರ ಮುಂದಿವರಿಸಿದ ಸಚಿವರು , ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಹವಾಮಾನವನ್ನು ಹೆಚ್ಚಾಗಿ ದೂಷಿಸಲಾಗುತ್ತದೆಯಾದರೂ, ಹವಾಮಾನ ಬದಲಾವಣೆ  ಸವಾಲಿಗೆ 'ಮಾನವ' ಹೊರತುಪಡಿಸಿ ಬೇರೆ ಯಾರೂ ಕಾರಣವಲ್ಲ ಎಂಬುದು ಅಷ್ಟೆ  ಸತ್ಯ  ಎಂದರು.  ಜನರು ಇದರ ಬಗ್ಗೆ  ಕಾಳಜಿ ವಹಿಸಬೇಕು  ಸರ್ಕಾರವು ಸಹ ಇದರ ಬಗ್ಗೆ ಕಾಳಜಿ ವಹಿಸಲಿದೆ  ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ  ಎಂದೂ  ಸಚಿವರು ಸದನಕ್ಕೆ ಹೇಳಿದರು.