ಕೆ ಆರ್ ಐ ಡಿ ಎಲ್ ಗುತ್ತಿಗೆಯಲ್ಲಿ ದೊಡ್ಡ ಹಗರಣ; ಜಗದೀಶ್ ಶೆಟ್ಟರ್ ಆರೋಪ


ಹುಬ್ಬಳ್ಳಿ, ಏಪ್ರಿಲ್ 29 ನವ ಬೆಂಗಳೂರು ಯೋಜನೆಯಡಿ ಸರ್ಕಾರ ಸ್ವಾಮ್ಯದ ಕರ್ನಾಟಕ  ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆ ಆರ್ ಐ ಡಿ ಸಿಎಲ್)ಕ್ಕೆ   ಕಾಮಗಾರಿಗಳನ್ನು  ವಹಿಸಿ, ಅನುದಾನ ಬಿಡುಗಡಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರದ   ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು  ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಸೋಮವಾರ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ, ಜಗದೀಶ್ ಶೆಟ್ಟರ್,   ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನವ ಬೆಂಗಳೂರು ಯೋಜನೆಯಡಿ ಕಾಮಗಾರಿಗಳ ಗುತ್ತಿಗೆ ಹಾಗೂ ಅನುದಾನ ಮಂಜೂರಾತಿಗೆ ನಿರ್ಧಾರ  ಕೈಗೊಂಡಿದ್ದಾರೆ.  ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ  ಉಲ್ಲಂಘನೆಯಾಗಿದ್ದು,  ಕೇಂದ್ರ  ಚುನಾವಣಾ ಆಯೋಗಕ್ಕೆ  ಈ ಸಂಬಂಧ  ಪಕ್ಷ ದೂರು  ಸಲ್ಲಿಸಿ, ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಿದೆ  ಎಂದರು.  

ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಯಾವುದೇ  ಸಾರ್ವಜನಿಕ ಹಿತಾಸಕ್ತಿ ಇಲ್ಲ,  ಕೇವಲ ಸಿವಿಲ್ ಗುತ್ತಿಗೆದಾರರಿಗೆ  ಲಾಭ ಮಾಡಿಕೊಡುವ  ಉದ್ದೇಶ ಹೊಂದಿದೆ ಎಂದು  ಶೆಟ್ಟರ್ ಆರೋಪಿಸಿದರು 

ಕನರ್ಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ   ಮುಖ್ಯಮಂತ್ರಿ  ಕುಮಾರಸ್ವಾಮಿ ಅವರ ಸಂಬಂಧಿಯಾಗಿದ್ದು, ಸರ್ಕಾರದ ನಿರ್ಧಾರದ ದೊಡ್ಡ ಹಗರಣ ನಡೆದಿದೆ   ಎಂದು ಶೆಟ್ಟರ್ ದೂರಿದ್ದಾರೆ.