ತಿಮ್ಮಕೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ದೇವಸ್ಥಾನದ ಅಭಿವೃದ್ಧಿಗೆ ನಡೆದ ಭೂಮಿ ಪೂಜೆ
ಬ್ಯಾಡಗಿ 19 : ಇತಿಹಾಸ ಪ್ರಸಿದ್ಧ ತಿಮ್ಮಕೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯ ಕೈಕೊಳ್ಳಲು ಸುಮಾರು 2 ಕೋಟಿ ರೂ.ಗಳ ಹಣ ಮಂಜೂರಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ರವಿವಾರ ತಾಲೂಕಿನ ಕುಮ್ಮೂರ ಗ್ರಾಮದಲ್ಲಿ ಕಾಗೆನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಿಮ್ಮಕೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ದೇವಸ್ಥಾನದ ಅಭಿವೃದ್ಧಿಗೆ ನಡೆದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಿಮ್ಮಕೇಶ್ವರನ ದೇವಸ್ಥಾನ ಅಭಿವೃದ್ಧಿಗೆ ಗ್ರಾಮಸ್ಥರು ಈ ಹಿಂದಿನಿಂದಲೂ ನನಗೆ ಒತ್ತಾಯಿಸಿದ್ದು, ನಿಮ್ಮೆಲ್ಲರ ಸಹಕಾರದಿಂದ ಈ ದೇವಸ್ಥಾನದ ಅಭಿವೃದ್ಧಿಗೆ 2 ಕೋಟಿ ರೂ.ಗಳ ಹಣ ಮಂಜೂರಾತಿ ತರಲಾಗಿದ್ದು, ಗ್ರಾಮಸ್ಥರು ದೇವಸ್ಥಾನ ಅಭಿವೃದ್ಧಿ ಕಾಮಗಾರಿಯನ್ನು ಮಾಡುವ ಸಂದರ್ಭದಲ್ಲಿ ಸ್ಥಳೀ ಕರು ದೇವಸ್ಥಾನದ ಬೇಕು ಬೇಡಿಕೆಗಳ ಬಗ್ಗೆ ಆಗಾಗ ದೇವಸ್ಥಾನದ ಕಾಮಗಾರಿಯನ್ನು ಪರೀಶೀಲಿಸಿ ಉತ್ತಮ ಕಾಮಗಾರಿಗೆ ಸಹಕಾರ ನೀಡಬೇಕೆಂದರು.ತಿಮ್ಮಕೇಶ್ವರನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.ಪ್ರತಿಯೊಂದು ಊರಿಗೆ ದೇವಸ್ಥಾನದ ಆವಶ್ಯಕತೆಯಿದೆ. ಭಕ್ತರು ಧಾರ್ಮಿಕ ನೆಲೆಯಲ್ಲಿ ಮಾಡಬಹುದಾದ ಕರ್ತವ್ಯಗಳನ್ನು ತೀರಿಸಬೇಕಿದೆ. ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಸುದೀರ್ಘವಾಗಿ ನಾನು ತೊಡಗಿಸಿಕೊಂಡ ಫಲವಾಗಿ ಇಂದು ದೇವರ ಸೇವೆ ಮಾಡುವ ಅವಕಾಶ ನನಗೆ ದೊರೆತಿರುವುದು ಸೌಭಾಗ್ಯವೆಂದರು.ಗ್ರಾಮದೇವರನ್ನು ಭಯ-ಭಕ್ತಿಯಿಂದ ಪೂಜಿಸಿದರೆ ಎಲ್ಲರಿಗೂ ಒಳ್ಳೆಯದು. ದೇವಸ್ಥಾನ ಜೀರ್ಣೋದ್ಧಾರಗೊಂಡಾಗ ಊರು ಅಭಿವೃದ್ಧಿಯಾಗಿ, ಧರ್ಮ ಜಾಗೃತಿ ಉಂಟಾಗುತ್ತದೆ. ಊರಿನ ಜನತೆಗೆ ದೇವರ ಅನುಗ್ರಹದಿಂದ ಸುಖ, ಶಾಂತಿ ಲಭಿಸುತ್ತದೆ. ಈ ಪುಣ್ಯಕಾರ್ಯಕ್ಕೆ ಜಾತಿ,ಮತ ಮರೆತು ಎಲ್ಲರೂ ಶ್ರಮಿಸೋಣ ಎಂದರು.ಈ ಸಂದರ್ಭದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಬೀರಣ್ಣ ಬಣಕಾರ, ಆಯುಕ್ತರಾದ ಡಾ. ರವಿ, ಡಾ. ಜಗನ್ನಾಥ, ಮಾರುತಿ ಅಚ್ಚಿಗೇರಿ, ಲಕ್ಷ್ಮಣ ಹಾವೇರಿ, ಪುಟ್ಟಪ್ಪ ಫಾಸಿ, ನೀಲಕಂಠಪ್ಪ ಫಾಸಿ, ಮಹೇಶಗೌಡ ಪಾಟೀಲ, ಸುರೇಶಗೌಡ ಪಾಟೀಲ, ನಾಗನಗೌಡ ಪಾಟೀಲ, ಸುಭಾಸ ಮಣ್ಣಪ್ಪನವರ, ಅಬ್ದುಲ್ ಮುನಾಫ್ ಎಲಿಗಾರ, ಬಸನಗೌಡ ನಿಂಗನಗೌಡ್ರ, ನಿರ್ಮಿತಿ ಇಂಜೀನೀಯರ ಶಾಂತಕುಮಾರ ಸೇರಿದಂತೆ ಇತರರಿದ್ದರು.