ಅಕ್ಕೋಳ ಸರಕಾರಿ ಶಾಲೆಯ ಎರಡು ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
ಚಿಕ್ಕೋಡಿ 24: ನಿಪ್ಪಾಣಿ ತಾಲೂಕಿನ ಸರಕಾರಿ ಮಾದರಿ ಕನ್ನಡ ಶಾಲೆಯ 29 ಲಕ್ಷ ರೂ ವೆಚ್ಚದ ಎರಡು ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೇರವೇರಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಇಂದ್ರಜೀತ ಸೋಳಾಂಕುರೆ ಮತ್ತು ಉಪಾಧ್ಯಕ್ಷೆ ಶ್ರೀಮತಿ ಶಾರದಾ ಕೋಳಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮನೋಜ ಮಲಾಬಾದೆ ಅವರು ಶಾಲಾ ಕೊಠಡಿಗಳ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದರು.
ಶಾಲೆಯ ಪ್ರಧಾನ ಗುರುಮಾತೆ ಎಸ್.ಬಿ.ನೇರಲೆ ಮಾತನಾಡಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ವಿಶೇಷ ಅನುದಾನದಲ್ಲಿ 29 ಲಕ್ಷ ರೂ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿದ್ದಾರೆ. ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ಮತ್ತು ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಕೂಡಿಕೊಂಡು ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಿಕೊಳ್ಳುತ್ತೇವೆ. ಇದೇ ರೀತಿ ಪರಿಷತ್ ಸದಸ್ಯರು ಶಾಲೆಗೆ ಹೆಚ್ಚು ಹೆಚ್ಚು ಅನುದಾನ ನೀಡಿ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಯುವರಾಜ ಪಾಟೀಲ, ಹುನ್ನರಗಿಯ ದಾದಾ ಪಾಟೀಲ, ಬಿ.ಬಿ.ಪಾಟೀಲ, ರಾಜು ಪಾಟೀಲ, ನಿಶಿಕಾಂತ ಕುರುಳುಪೆ, ವಿವೇಕಾನಂದ ಸೋಳಾಂಕುರೆ, ದೀಲೀಪ ಮಲಾಬಾದೆ, ಬಾಬಾಸಾಹೇಬ ಕೊಕಾಟೆ, ಧನಾಜಿ ಚೌವ್ಹಾಣ, ಪ್ರಕಾಶ ಮಗದುಮ್ಮ, ಸುಹಾಸ ಪಠಾಡೆ, ಅರುಣ ಮೋಹಿತೆ, ರಾವಸಾಹೇಬ ಜನವಾಡೆ, ಪೋಪಟ ಪಾಟೀಲ, ಸಂತೋಷ ಘವೆ, ಬಾಳು ಘಸ್ತೆ, ಅನೀಲ ಪಾಟೀಲ, ಸುರೇಶ ಮೋಹಿತೆ ಮುಂತಾದವರು ಇದ್ದರು.