ಭೋಗಲಿಂಗೇಶ್ವರ ಜಾತ್ರೆ, ಸಾಮೂಹಿಕ ವಿವಾಹ ಪ್ರಚಾರ ವಾಹನಕ್ಕೆ ಮನಗೂಳಿ ಚಾಲನೆ

Bhogalingeshwara fair, mass marriage promotion vehicle launched with enthusiasm

ಭೋಗಲಿಂಗೇಶ್ವರ ಜಾತ್ರೆ, ಸಾಮೂಹಿಕ ವಿವಾಹ ಪ್ರಚಾರ ವಾಹನಕ್ಕೆ ಮನಗೂಳಿ ಚಾಲನೆ  

ಸಿಂದಗಿ 11: ಆಲಮೇಲ ತಾಲೂಕಿನ ಕಡಣಿ ಗ್ರಾಮದ ಭೋಗಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಾಜಿ ಸಚಿವ ದಿ.ಎಮ್‌. ಸಿ. ಮನಗೂಳಿ ಅವರ ಸ್ಮರಣಾರ್ಥ ಎ 6 ರಂದು ಹಮ್ಮಿಕೊಳ್ಳಲಾದ ಸಾಮೂಹಿಕ ವಿವಾಹದ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಶಾಸಕ ಅಶೋಕ ಎಮ್ ಮನಗೂಳಿ ಚಾಲನೆ ನೀಡಿದರು. 

       ನಂತರ ಮಾತನಾಡಿದ ಅವರು ಕಡಣಿ ಗ್ರಾಮದ ಬ್ಯಾರೇಜು ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಿ ಮಂಜೂರಾತಿ ನೀಡಿದ ದಿ.ಎಂ. ಸಿ.ಮನಗೂಳಿ ಅವರ ಸ್ಮರಣಾರ್ಥ ಸಾಮೂಹಿಕ ವಿವಾಹ ಕಾರ್ಯ ಕ್ರಮ ಗ್ರಾಮಸ್ಥರು ಹಮ್ಮಿಕೊಂಡಿದ್ದು ಸ್ಮರಣೀಯ, ಪರಿಶಿಷ್ಟ ಜಾತಿ, ಪ.ಪಂಗಡದವರಿಗೆ 50 ಸಾವಿರ ಸಹಾಯಧನವೂ ಸಿಗಲಿದೆ ಅಲ್ಲದೆ ಬಡ ಕೂಲಿ ಕಾರ್ಮಿಕರ ಮಕ್ಕಳ ಮದುವೆ ಮಾಡಲು ಸಂಕಷ್ಠ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಸಾಮೂಹಿಕ ಕಾರ್ಯಕ್ರಮ ನೆರವಾಗಲಿದೆ ಎಂದರು. 

       ಆಲಮೇಲದ ಶ್ರೀಶೈಲಯ್ಯ ಸ್ವಾಮಿಗಳು, ಕಡಣಿ ಗ್ರಾಮದ ಮುಖಂಡರಾದ ವೀರಭದ್ರ ಕತ್ತಿ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ಪ್ರಭು ವಾಲಿಕಾರ, ಎಪಿಮಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ರಮೇಶ ಬಂಟನೂರ, ಸುರೇಶ ಕೋರಹಳ್ಳಿ ಬಾಗಪ್ಪಾಗೌಡ ಪಾಟೀಲ, ಅಂಬ್ರೀಶ ಚೌಗಲೆ, ಸಿದ್ದು ಮೇಲಿನಮನಿ, ರಮಜಾನ್ ರಂಜುನಗಿ ಸೇರಿದಂತೆ ಇನ್ನಿತರರು ಇದ್ದರು.