ದೇಶಭಕ್ತಿಯ ಪ್ರತೀಕ ಭಾರತ ಮಾತಾಕಿ ಜೈ : ಡಾ.ಶರಭೇಂದ್ರಸ್ವಾಮಿ

Bharat Mataki Jai, symbol of patriotism : Dr. Sharabendraswamy

ದೇಶಭಕ್ತಿಯ ಪ್ರತೀಕ ಭಾರತ ಮಾತಾಕಿ ಜೈ : ಡಾ.ಶರಭೇಂದ್ರಸ್ವಾಮಿ 

ಧಾರವಾಡ 05: ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷ ಗತಿಸಿದರೂ ಇವತ್ತಿಗೂ ಕೂಡ ಭಾರತಮಾತಾಕಿ ಜೈ ಎಂದರೆ ಅದೊಂದು ಕೋಮುವಾದ ಎಂಬ ಗುಮಾನಿಯಿಂದ ನೋಡುವ ಒಂದು ವರ್ಗ ಒಂದಿಷ್ಟು ರಾಜಕೀಯ ಪಕ್ಷಗಳು ಭಾರತದಲ್ಲಿ ಸಕ್ರಿಯವಾಗಿರುವುದು ದುರದೃಷ್ಟಕರ ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರದ ಸಾಹಿತ್ಯ ವಿಧಾ ಸಂಚಾಲಕ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಅಭಿಪ್ರಾಯ ಪಟ್ಟರು.  

ಸಂಸ್ಕಾರ ಭಾರತಿ ಧಾರವಾಡ ಸಮಿತಿಯ ವತಿಯಿಂದ ವನಿತಾ ಸೇವಾ ಸಮಾಜದ ಪದವಿಪೂರ್ವ ಕಾಲೇಜಿನಲ್ಲಿ ದಿ.3ರಂದು ಏರಿ​‍್ಡಸಿದ್ದ ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಭಾರತ ಮಾತೆಯನ್ನು ಪೂಜಿಸುವುದರೊಂದಿಗೆ ಮಕ್ಕಳು ದೇಶಭಕ್ತಿಯನ್ನು ರಾಷ್ಟ್ರೇ​‍್ರಮವನ್ನು ಜೀವನ ವಿಧಾನವನ್ನಾಗಿ ಅಳವಡಿಸಿಕೊಳ್ಳಲು ಹೇಳಿದರು.  

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ತ್ರೀರೋಗ ತಜ್ಞೆ ಡಾ.ಗೀತಾ ಉತ್ತೂರ ಮಾತನಾಡಿ ಮಕ್ಕಳು ದೇಶಭಕ್ತರ ಜೀವನ ಸಾಧನೆಗಳನ್ನು ಅಧ್ಯಯನ ಮಾಡಬೇಕು, ಅದನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎನ್ನುವುದರೊಂದಿಗೆ ಈಗ ಹದಿಹರೆಯದ ಹೆಣ್ಣುಮಕ್ಕಳಿಗೆ ಸಾಮಾಜಿಕ ಆಪ್ತತೆ ಪ್ರೀತಿಯ ಅವಶ್ಯಕತೆ ಇದೆ, ಅವರಿಗೇನು ಬೇಕು ಅನ್ನುವುದನ್ನು ಸಮಾಜ ಅರಿಯಬೇಕಾಗಿದೆ ಎಂದರು. 

ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಮಾತನಾಡುತ್ತ ಇಂದಿನ ಯುವಕರು ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.   

ಸಂಸ್ಕಾರ ಭಾರತಿ ಧಾರವಾಡ ಮಹಾನಗರ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವನಿತಾ ಸೇವಾ ಸಮಾಜದ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಸಂಸ್ಕಾರ ಭಾರತಿ, ಧಾರವಾಡ ಮಹಾನಗರ ಪ್ರಧಾನ ಕಾರ್ಯದರ್ಶಿ ಪ್ರಸಾದ ಮಡಿವಾಳರ ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ವೈಶಾಲಿ ರಸಾಳಕರ ಧ್ಯೇಯಗೀತೆ, ಡಾ.ವೀಣಾ ಸವದತ್ತಿ ವಂದೇ ಮಾತರಂ ಗೀತೆಯನ್ನು ಪ್ರಸ್ತುತ ಪಡಿಸಿದರು. ವಿಷಯಾ ಜೇವೂರ ಪರಿಚಯಿಸಿದರು. ಶಿಲ್ಪಾ ಪಾಂಡೆ ನಿರೂಪಿಸಿದರು. ಡಾ.ಶ್ರೀಧರ ಕುಲಕರ್ಣಿ ವಂದಿಸಿದರು.   

ಶೋಭಾ ಪರೆಟ್, ಡಾ.ನಾಗೇಂದ್ರ ದೊಡ್ಡಮನಿ, ಅಶೋಕ ಮೊಕಾಶಿ, ವೀರಣ್ಣ ಪತ್ತಾರ, ಸಾಧನಾ ಮಿರಜಕರ್, ಶ್ರುತಿ ಕುಲಕರ್ಣಿ, ಆರತಿ ದೇವಶಿಖಾಮಣಿ ಹಾಜರಿದ್ದರು.