ಕೊಪ್ಪಳ 17: ಕೊಪ್ಪಳ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವತಿಯಿಂದ ಶಿಶು ಅಭಿವೃದ್ಧಿ ಯೋಜನೆ ಫಲಾನಿಭವಿಗಳಿ ನಗರದ ಸಕರ್ಾರಿ ನೌಕರರ ಭವನದಲ್ಲಿ ಸೋಮವಾರದಂದು ಭಾಗ್ಯಲಕ್ಷ್ಮಿ ಬಾಂಡ್ ವಿತಹರಿಸಿದರು.
ಕೊಪ್ಪಳ ಜಿಲ್ಲಾಡಳಿತ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ರವರು ಅಂಗನವಾಡಿ ಫಲಾನುಭವಿಗಳಿಗೆ ಒಟ್ಟು 611 ಭಾಗ್ಯಲಕ್ಷ್ಮೀ ಬಾಂಡ ವಿತಹರಿಸಿ ಮಾತನಾಡಿ, ಮಕ್ಕಳ ವಿದ್ಯಾಬ್ಯಾಸದ ಸಲುವಾಗಿ ಸಕರ್ಾರವು ಮಕ್ಕಳ ಜೀವನೋಪಾಯಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಇಂತಹ ಬಾಂಡ್ಗಳ ಯೋಜನೆ ಜಾರಿಗೆ ತಂದಿದೆ ಎಂದರು.
ಗಭರ್ಿಣಿ ಬಾಣಂತಿಯರ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಬಾಲ್ಯವಿವಾಹದ ಕುರಿತು ತಿಳುವಳಿಕೆಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ವಲಯ ಮೇಲ್ವಿಚಾರಕಿಯರು ತಾಯಂದಿರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.