ಲೋಕದರ್ಶನ ವರದಿ
ಬಾಗಲಕೋಟೆ: ತ್ರಿಶಂಕು ಸ್ಥಿತಿಯಲ್ಲಿರುವ ತಮ್ಮ ಪೂರ್ವಜರಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶಿವನ ಜಟೆಯಲ್ಲಿರುವ ಗಂಗೆಯನ್ನೇ ಧರೆಗಿಳಿಸಿದ ಯೋಗಿ ಭಗೀರಥ ಎಂದು ಉಪವಿಭಾಗಾಧಿಕಾರಿ ಎಚ್.ಜಯಾ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಭಗೀರಥ ಜಯಂತಿ ಕಾರ್ಯಕ್ರಮಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಮಾತನಾಡಿದರು. ಜಗತ್ತಿನ ಉದ್ದಾರಕ್ಕಾಗಿ ಗಂಗಾಮಾತೆಯನ್ನೇ ಭೂಮಿಗೆ ತಂದ ಕೀರ್ತಿ ಭಗೀರಥರದಾಗಿದೆ ಎಂದರು.
ಭಗೀರಥ ಒಬ್ಬ ಶ್ರೇಷ್ಟ ಗುರುಭಕ್ತನಾಗಿ ಪುರಾಣ ಪುರುಷನಾಗಿ, ತನ್ನ ಸಾಹಸ, ಏಕಾಗ್ರ ಮನಸ್ಥಿತಿಗೆ ತಪೋನಿಷ್ಠೆಗೆ ಪ್ರಸಿದ್ದನಾಗಿದ್ದನಿಂದ ಭಗೀರಥ ಪ್ರಯತ್ನ ಎಂಬ ನುಡಿ ಎಲ್ಲೆಡೆ ಪ್ರಸರಿಸಿತು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೋರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡರು ಎಂದರು.
ಸಮಸ್ತ ಮನುಕುಲದ ಉದ್ದಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಒಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸದಕ್ಕು ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಶು ಇಲಾಖೆಯ ಉಪನಿದರ್ೇಶಕ ರವೀಂದ್ರ ಹೆಗಡೆ, ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ಬಾಗಲಕೋಟೆ ತಹಶೀಲ್ದಾರ ಎಂ.ಬಿ.ನಾಗಠಾಣ, ಗ್ರೇಡ್-2 ತಹಶೀಲ್ದಾರ ವಸ್ತ್ರದ, ಕಂದಾಯ ಇಲಾಖೆಯ ಶಿರಸ್ತೆದಾರ ಎಂ.ಬಿ.ಗುಡೂರ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.