ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಗೀರಥ ಮಹಷರ್ಿ ಜಯಂತಿ ಆಚರಣೆ

ಲೋಕದರ್ಶನ ವರದಿ 

ಧಾರವಾಡ 11: ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಶ್ರೀ ಭಗೀರಥ ಮಹಷರ್ಿ ಜಯಂತಿಯನ್ನು ಇಂದು ಬೆಳಿಗ್ಗೆ ಆಚರಿಸಲಾಯಿತು.

         ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಭಗೀರತ ಮಹಷರ್ಿಗಳ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪ ಸಮರ್ಪಣೆ ಮಾಡಿದರು. ರಂಗಾಯಣ ಆಡಳಿತಾಧಿಕಾರಿ ಕೆ.ಎಚ್.ಚನ್ನೂರ ಅವರು ಕಾರ್ಯಕ್ರಮ ನಿರ್ವಹಿಸಿದರು. ಧಾರವಾಡ ಮಹಾನಗರ ಸಹಾಯಕ ಪೋಲಿಸ್ ಆಯುಕ್ತ ಎಮ್.ಎನ್.ರುದ್ರಪ್ಪ, ಶಹರ ಪೋಲಿಸ್ ಠಾಣೆಯ ಸಿಪಿಐ ಲಕ್ಷ್ಮೀಕಾಂತ ತಳವಾರ, ಸಮಾಜದ ಮುಖಂಡರಾದ ಸತೀಶ ಮುರಗೋಡ, ಬಲರಾಮ ಕುಸುಗಲ್ಲ, ಎಸ್.ಬಿ.ಹಾವನ್ನವರ, ತುಕಾರಾಮ ಪಟ್ಟಿಹಾಳ, ಸಮಾಜದ ಮಹಿಳಾ ಮುಖಂಡರು ಹಾಗೂ  ಇತರರು ಭಾಗವಹಿಸಿದ್ದರು