ಬೇಟಿ ಬಚಾವೋ ಬೇಟಿ ಪಡಾವೋ ಗ್ರಾಮ ಮಟ್ಟದ ಜಾಗೃತಿ ಕಾರ್ಯಕ್ರಮ

ಗದಗ 10: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಿ. 08ರಂದು ಬೇಟಿ ಬಚಾವೋ ಬೇಟಿ ಪಡಾವೂ ಯೋಜನೆಯಡಿ ಸಿಂಗಟಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಬತ್ತ ನಾಟಿ ಮಾಡುತ್ತಿರುವ ರೈತ ಮಹಿಳೆಯರು ಮತ್ತು ಪುರುಷರ ಬಳಿ ಅಕ್ಕಮಹಾದೇವಿ ಕೆ ಎಚ್ ಜಿಲ್ಲಾ ನಿರೂಣಾಧಿಕಾರಿಗಳು, ತೆರಳಿ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ (ಬೇಟಿ ಬಚಾವೋ ಬೇಟಿ ಪಡಾವೋ) ಈ ಕುರಿತು ಅರಿವು ಮೂಡಿಸುವುದರೊಂದಿಗೆ ಹೆಣ್ಣು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸುವಂತೆ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು. 

ಹೆಣ್ಣು ಮಕ್ಕಳ ವಿಚಾರದಲ್ಲಿ ಯಾವುದೆ ಸಮಸ್ಯೆಗಳು ಬಂದಲ್ಲಿ ಅಂಗನವಾಡಿ ಕಾರ್ಯಕತರ್ೆಯರಿಗೆ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ 1098ಗೆ ಸಂಪಕರ್ಿಸಲು ತಿಳಿಸಲಾಯಿತು. ಜೊತೆಗೆ ಮಹಿಳೆಯರ ವೇತನದ ಬಗ್ಗೆ ವಿಚಾರಿಸಿದಾಗ ಸಮಾನ ವೇತನ ಪಡೆಯುತ್ತಿರುವುದಾಗಿ ತಿಳಿದು ಬಂದಿತು. ಕಾರ್ಯಕ್ರಮದಲ್ಲಿ ಮೇಲ್ವೀಚಾರಕಿಯಾದ    ಹೊನ್ನಪ್ಪನವರ ಹಾಗೂ ಜಿಲ್ಲಾ ಬಾಲ ಭವನದ ಸಂಯೋಜಕರಾದ ರವಿ ಉಮಚಗಿ, ಅರುಣೋದಯ ಕಲಾ ತಂಡದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.