ಕಲೆಯಲ್ಲಿ ಅತ್ಯಂತ ಶ್ರೇಷ್ಠ ಸಂಗೀತ: ಶಾಂತಾರಾಮ ಹೆಗಡೆ

ಧಾರವಾಡ 26: ಕಲೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ ಸಂಗೀತ, ಗೀತೆಗೆ ವಾದ್ಯವು ಸೇರಿದಾಗ ಸಂಗೀತವಾಗುತ್ತದೆ. ಸಂಗೀತದೊಂದಿಗೆ ನೃತ್ಯವು ಸೇರಿದಾಗ ನಟರಾಜನಿಗೆ ಪ್ರಿಯವಾಗುತ್ತದೆ ಎಂದು ಖ್ಯಾತ ಸಂಗೀತ ವಿದ್ವಾಂಸ ಪ್ರೊ. ಶಾಂತಾರಾಮ ಹೆಗಡೆ ಹೇಳಿದರು.

ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಆಯೋಜಿಸಿದ್ದ 'ತಂತಿ ವಾದ್ಯ ಸ್ಪಧರ್ೆ ಕಾರ್ಯಕ್ರಮಕ್ಕೆ ಸಿತಾರ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಇದೊಂದು ವಿನೂತನವಾದ ಕಾರ್ಯಕ್ರಮ. ಸಂಗೀತ ಅಭ್ಯಾಸ ಮಾಡುವ ವಿದ್ಯಾಥರ್ಿಗಳೇ ಇಂದು ಕಡಿಮೆಯಾಗುತ್ತಿದ್ದಾರೆ. ಅಂಥವರಿಗೆ ಪಠ್ಯದ ಓದಿನ ಜೊತೆಗೆ ಪಠ್ಯಪೂರಕವಾದ ನಮ್ಮ ದೇಶದ ಶ್ರೇಷ್ಠ ಕಲೆಯಾದ ಸಂಗೀತವನ್ನು ಇಂದಿನ ವಿದ್ಯಾಥರ್ಿಗಳು ಅಧ್ಯಯನ ಮಾಡುವುದು ಅವಶ್ಯವಿದೆ. ಎಲ್ಲ ಕಲೆಗಳಿಗೂ ನೆರವನ್ನು ನೀಡುವುದು ವಾದ್ಯ. ವಾದ್ಯ ಕಲಾವಿದರು ಹಿನ್ನೆಲೆಯಲ್ಲಿದ್ದು, ಗೀತ ಗಾಯನಕ್ಕಾಗಲಿ, ನೃತ್ಯಕ್ಕಾಗಲಿ, ಮೆರಗನ್ನು ನೀಡುತ್ತವೆ. ರಂಗ ಕಲೆಗೂ ಕೂಡಾ ಸಂಗೀತ ಅವಶ್ಯಕತೆಯಿದ್ದು ಸಂಗೀತ ಕಲೆಯ ತಾಯಿ ಬೇರು ವಾದ್ಯ ಸಂಗೀತವೆಂದರೆ ತಪ್ಪಾಗಲಿಕ್ಕಿಲ್ಲ. ಸಾಂಸ್ಕೃತಿಕ ಲೋಕದಲ್ಲಿ ಯಾವುದೇ ಕಾರ್ಯಕ್ರಮಕ್ಕೂ ವಾದ್ಯವಿಲ್ಲದೆ ಸಂಪೂರ್ಣಗೊಳ್ಳುವುದಿಲ್ಲ. ಅದಕ್ಕಾಗಿ ಹೆಚ್ಚೆಚ್ಚು ವಾದ್ಯ ಕಲಾವಿದರನ್ನು ಉಳಿಸಿ ಬೆಳೆಸುವುದು ಅವಶ್ಯವಿದೆ. ನಾಡಿನ ವಿವಿಧ ಕಲೆ ಬೆಳೆದು ಉಳಿಯಲು ಸಮಾಜದ ಪ್ರೋತ್ಸಾಹವೂ ಅಷ್ಟೇ ಅವಶ್ಯ ಅಂತಾ ಒಂದು ಕಾರ್ಯವನ್ನು ಕನರ್ಾಟಕ ವಿದಾವರ್ಧಕ ಸಂಘ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ, ಖ್ಯಾತ ನ್ಯಾಯವಾದಿ ಪ್ರಕಾಶ ಉಡಿಕೇರಿಯವರು ಮಾತನಾಡುತ್ತಾ, ಶ್ರೇಷ್ಠ ಕಲಾವಿದರನ್ನು ಸಮಾಜ ಎಂದೂ ಮರೆಯುವುದಿಲ್ಲ. ಅವರ ಸ್ಮಾರಕಗಳನ್ನು ನಿಮರ್ಿಸಿ, ಮುಂದಿನ ಜನಮಾನಸಕ್ಕೆ ದಾಖಲೆಯಾಗಿ ಮಾನವಕುಲ ಎಂದೆಂದಿಗೂ ಅವರನ್ನು ಸ್ಮರಿಸುವಂತೆ ಮಾಡುತ್ತದೆ. ಅದಕ್ಕಾಗಿ ಕಲಾವಿದರಾಗಿ ಬೆಳೆಯುವುವವರಲ್ಲಿ ಸಾಧನೆಯ ಛಲವಿರಬೇಕು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಮ್ಮ ಕಲಾ ಪ್ರೌಢಿಮೆಯನ್ನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿ, ಈ ನಾಡಿನ ಜಗತ್ತೇ ಸ್ಮರಿಸುತ್ತಿರುವ ಶ್ರೇಷ್ಠ ಕಲಾವಿದರಾದ ಡಾ. ಮಲ್ಲಿಕಾಜರ್ುನ ಮನ್ಸೂರ, ಡಾ. ಗಂಗೂಬಾಯಿ ಹಾನಗಲ್ಲರಂತ ಅನೇಕ ದಿಗ್ಗಜರನ್ನು ನಮ್ಮ ಬದುಕಿಗೆ ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. 

ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕ.ವಿ.ವ. ಸಂಘದ ಕೋಶಾಧ್ಯಕ್ಷರಾದ ಕೃಷ್ಣ ಜೋಶಿ, ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಸಲಹಾ ಸಮಿತಿ ಸದಸ್ಯರಾದ ಬಿ. ಮಾರುತಿ, ಎಸ್.ಸಿ. ನೀರಾವರಿ, ಪ್ರಭು ಹಂಚಿನಾಳ, ದೀಪಕ ಆಲೂರ ಉಪಸ್ಥಿತರಿದ್ದರು. ಸಲಹಾ ಸಮಿತಿ ಸದಸ್ಯ ಕೆ.ಎಚ್. ನಾಯಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಶ್ರೇಷ್ಠ ಸಂಗೀತಗಾರ ಮೊಹಸಿನ್ ಖಾನ್, ಗುರು ಪ್ರಸಾದ ಹೆಗಡೆ ಹಾಗೂ ಸುರೇಶ ನಿಡಗುಂದಿಯವರ ನಿಣರ್ಾಯಕರ ನೇತೃತ್ವದಲ್ಲಿ 'ತಂತಿ ವಾದ್ಯ ಸ್ಪಧರ್ೆ ಕಾರ್ಯಕ್ರಮ ಜರುಗಿತು.