ಬೆಳಗಾವಿ 26: ಕರಾಟೆ ಆತ್ಮರಕ್ಷಣೆ ಮಾಡಿಕೊಳ್ಳುವ, ದೈಹಿಕ ಸಾಮಥ್ರ್ಯ ಹೆಚ್ಚಿಸುವ ಒಂದು ಕೌಶಲ. ನಾವು ಹಣ, ಆಸ್ತಿ, ಸಂಪತ್ತು ಏನೇ ಕಳೆದುಕೊಂಡರು ಮರಳಿ ಸಂಪಾದಿಸಬಹುದು. ಆದರೆ ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯುವುದು ಬಹಳ ಕಷ್ಟಕರ. ಸದೃಢ ಶರೀರವನ್ನು ಹೊಂದಲು ವ್ಯಾಯಾಮ, ಯೋಗಾಭ್ಯಾಸ ಹಾಗೂ ಕರಾಟೆ ಅವಶ್ಯಕ ಎಂದು ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಇಂಡಿಯನ್ ಕರಾಟೆ ಕ್ಲಬ್ ವತಿಯಿಂದ ಆಯೋಜಿಸಲಾದ ಬೆಲ್ಟ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವೇದಿಕೆಯ ಮೇಲೆ ಇಂಡಿಯನ್ ಕರಾಟೆ ಕ್ಲಬ್ನ ತರಬೇತುದಾರ ಆನಂದ ಪೂಜಾರಿ, ಡಾ. ಜಿ. ಎಂ. ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ 70 ವಿದ್ಯಾಥರ್ಿಗಳಿಗೆ ಅವರ ಅರ್ಹತೆ ಅನುಗುಣವಾಗಿ ವಿವಿಧ ಬೆಲ್ಟ ವಿತರಿಸಲಾಯಿತು.