ನೀರು ತುಂಬಿಸುವ ಕಾರ್ಯಕ್ಕೆ ಬಳ್ಳಾರಿ ಚಾಲನೆ
ನಿಮರ್ಿಸಲಾದ ಹೊಂಡಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ
ಲೋಕದರ್ಶನವರದಿ
ಬ್ಯಾಡಗಿ01: ತಾಲೂಕಿನಾಧ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಹೊಂಡಕ್ಕೆ ನೀರು ತುಂಬಿಸುವ ಮೂಲಕ ಈಡೇರಿಸಲಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಅಗಸನಹಳ್ಳಿಯಲ್ಲಿ ಕೊಳಚೆ ನಿಮರ್ೂಲನಾ ಮಂಡಳಿ ವತಿಯಿಂದ ನಿಮರ್ಿಸಲಾದ ಹೊಂಡಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಬೇಸಿಗೆಗೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪಿಡಿಓ ಹಾಗೂ ಅಧಿಕಾರಿಗಳ ಸಭೆಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ದ್ದೇನೆ ಎಂದರು.
ಹೊಂಡದಲ್ಲಿ ಕಾರಂಜಿ ನಿಮರ್ಾಣ: ಹೊಂಡತುಂಬಿಸುವುದರಿಂದ ನಿವಾಸಿಗಳಿಗೆ ನೀರಿನ ಬವಣೆ ತಪ್ಪಲಿದೆ ಅಲ್ಲದೇಮುಂದಿನ ದಿನಗಳಲ್ಲಿ ಹೊಂಡದ ಮಧ್ಯದಲ್ಲಿ ಕಾರಂಜಿ ಅಳವಡಿಸಿ ಹೊಂಡವನ್ನುಇನ್ನಷ್ಟು ಆಕರ್ಷಣೀಯವಾಗಿಸಲಾಗುವುದು ಎಂದರಲ್ಲದೇ ನಿವಾಸಿಗಳು ಹೊಂಡದ ಸುತ್ತಮುತ್ತಲಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಮೂಲ ಭೂತ ಸೌಕರ್ಯಕ್ಕೆ ಒತ್ತು: ಪುರಸಭೆಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ,ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿನ ಪ್ರತಿಯೊಂದು ವಾರ್ಡನಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನಒತ್ತು ನೀಡಿ ಮೂಲ ಭೂತ ಸೌಲಭ್ಯಗಳನ್ನ ಒದಿಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಪೈಪ್ ಲೈನ್ ಅಳವಡಿಕೆ: ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಪುರಸಭೆಯಲ್ಲಿಅನುದಾನಕೊರತೆಕಾರಣ ನೀಡಿ ಕಳೆದ ಹಲವಾರು ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಹೊಂಡಕ್ಕೆ, ಕೆಯುಡಿಎಫಸಿ ಅನುದಾನದಲ್ಲಿ ಪೈಪ್ಲೈನಗಳನ್ನು ಅಳವಡಿಸಿ ಪುರಸಭೆ ಒಂದು ರೂಪಾಯಿ ಕೂಡಾ ಖಚರ್ು ಮಾಡದೇಇಂದು ನೀರು ಹರಿಸುವಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಅಲ್ಲದೇ ಸ್ಥಗಿತಗೊಂಡಿದ್ದಅಗಸನಹಳ್ಳಿ ವಾರ್ಡನಲ್ಲಿನ ಶುದ್ಧಕುಡಿಯುವ ನೀರಿನಘಟಕವನ್ನು ಪ್ರಾರಂಭಿಸಲಾಗಿದೆಎಂದರಲ್ಲದೇ ಸಾರ್ವಜನಿಕರು ಇವುಗಳ ಸಬ್ದಳಕೆ ಮಾಡಿಕೊಳ್ಳಬೇಕಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ದುಗರ್ೇಶಗೋಣೆಮ್ಮನವರ, ಶಾಂತಮ್ಮ ಬೇವಿನಮಟ್ಟಿ, ನಾರಾಯಣಪ್ಪಕನರ್ೂಲ, ಪ್ರಶಾಂತಯಾದವಾಡ, ನಜೀರಅಹಮ್ಮದ ಶೇಖ್, ಎಂ.ಆರ್.ಭದ್ರಗೌಡ್ರ, ರಾಮಣ್ಣ ಕೋಡಿಹಳ್ಳಿ, ರಾಮಣ್ಣಉಕ್ಕುಂದ, ಬೀರಪ್ಪ ಬಣಕಾರ, ರವೀಂದ್ರ ಪಟ್ಟಣ ಶೆಟ್ಟಿ, ಮಂಜುನಾಥ ಪೂಜಾರ, ಎಲ್.ಶಂಕರ್ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 