ನಿತ್ಯ ಯೋಗಾಭ್ಯಾಸದಿಂದ ಆಯುಷ್ಯ ವೃದ್ಧಿ: ಚಂದ್ರಶೇಖರ ನಾಗರಬೆಟ್ಟ
Daily yoga practice increases lifespan: Chandrashekar Nagarabetta
ಲೋಕದರ್ಶನ ವರದಿ
ಸಿಂದಗಿ 21 : ಇಂದಿನ ಕುಲಶಿತ ಆಹಾರ ಸೇವನೆಯಿಂದ ಅನಾರೋಗ ಪಿಡಿತರಾಗುತ್ತಿದ್ದೇವೆ ಆದರೆ ಯೋಗದಿಂದ ನಮ್ಮ ದೇಹ ಮತ್ತು ಮನಸ್ಸು ಲವಲವಿಕೆಯಿಂದ ವಿಜೃಂಬಿಸುತ್ತದೆ ನಿತ್ಯ ಯೋಗ ಮಾಡುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೇಟ್ಟ ಹೇಳಿದರು.
ನಗರದ ಕಾವ್ಯ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಆವರಣದಲ್ಲಿ ರವಿವಾರ ಅಂತರಾಷ್ಟ್ರೀಯಯೋಗ ದಿನದ ನಿಮಿತ್ಯ ಹಮ್ಮಿಕೊಂಡ ಯೋಗ ತರಬೇತಿ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಯೋಗಾಭ್ಯಾಸವನ್ನು ಪ್ರತಿದಿನ ರೂಡಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನಗೊಳ್ಳುತ್ತದೆ. ಆರೋಗ್ಯಕರ ಜೀವನ ಶೈಲಿಗೆ ದಾರೀದೀಪವಾಗಿದೆ ಎಂದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಕಾವ್ಯ ರಾವುರ, ಅಂಬಿಕಾ ಕುಲಕರ್ಣಿ, ವಿನಾಯಕ ಬಜಂತ್ರಿ, ಅಶೋಕ ನಾವಿ ಅವರು ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೊರಿಸಿ ಅದರ ಉಪಯೋಗ ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಗಮೇಶ್ಡರ ಪಾರ್ಮಾ ಮಹಾವಿದ್ಯಾಲಯದ ಪ್ರಾಚಾರ್ಯ ಸಂದೀಪ ಚಾಂದಕವಟೆ, ಸುಮಾವಸ್ತ್ರದ, ರೇಣುಕಾ ಬಡಾನುರ, ಮುಬಿನಾ, ಉಮಾ ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 