ಲೋಕದರ್ಶನ ವರದಿ
ಬಳ್ಳಾರಿ 04: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಾರದರ್ಶಿ ಹರ್ಷ ನಾರಾಯಣ್ ರವರು ದಿ: 04 ರಂದು ಬಳ್ಳಾರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ನೀಡಿದ ವಿವರ
ಇತ್ತೀಚೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಇಡೀ ರಾಜ್ಯಾದ್ಯಂತ ವಿ.ವಿ.ಯ ಹೆಸರು ಹರಿದಾಡುತ್ತಿದ್ದರೂ ಯಾವ ಜನ ಪ್ರತಿನಿಧಿಯು ತಲೆಕೆಡಸಿಕೊಂಡಂತೆ ಕಾಣುತ್ತಿಲ್ಲ. ಆದ್ದರಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಹಲವಾರು ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಲವಾರು ಸಂಘಟನೆಗಳು ಈ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ವಿಶ್ವ ವಿದ್ಯಾಲಯ ಧನಸಹಾಯ ಆಯೋಗದ ನೀತಿ ನಿಯಮ ಉಲ್ಲಂಘಿಸಿದ ಅಂಶಗಳು. ವಿಶ್ವವಿದ್ಯಾಲಯವು ನೇಮಕ ಆದೇಶ ಕೊಡುವ ಮುನ್ನ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ರೋಷ್ಟರ್ ಪದ್ಧತಿಯನ್ನು ಪಾಲಿಸಿಲ್ಲ. ಎಲ್ಲಾ ಅಭ್ಯರ್ಥಿಗಳಿಗೂ ಕರ್ತವ್ಯಕ್ಕೆ ಹಾಜರಾಗಲು ನೇಮಕಾತಿ ಆದೇಶ ನೀಡಿದ್ದರೂ, ನೇಮಕಾತಿ ವಿವರಗಳನ್ನು ವೆಬ್ಸೈಟ್ನಲ್ಲಿ ಏಕೆ ಪ್ರಕಟಿಸಿಲ್ಲ. ಮೀಸಲಾತಿ ನಿಯಮ ಪಾಲಿಸದಿರುವುದು ಇದಕ್ಕೆ ಕಾರಣವಾಗಿದೆ. ಸರ್ಕಾರದಿಂದ ಮಂಜೂರಾದ ಮತ್ತು ಅಧಿಸೂಚಿತ ಹುದ್ದೆಗಳನ್ನು ಕುಲಪತಿಗಳು ತಮ್ಮ ವಿವೇಚನೆ ಆಧಾರದಲ್ಲಿ ಬೇರೆ ವಿಭಾಗಕ್ಕ ವರ್ಗಾಯಿಸಿದ್ದರು ಈ ರೀತಿ ವರ್ಗಾಯಿಸುವುದಕ್ಕೆ ಸರ್ಕಾರದ ಅನುಮತಿ ಪಡೆದಿಲ್ಲ. ನೇಮಕ ವಿಚಾರದಲ್ಲಿ ಸಿಂಡಿಕೇಟ್ನ್ನು ಕತ್ತಲಲ್ಲಿ ಇಡಲಾಗಿದೆ. ಆಸ್ತಿತ್ವದಲ್ಲಿ ಇಲ್ಲದೇ ಇರುವ ವಿಭಾಗಗಳಿಗೆ ನೇಮಕಗಳನ್ನು ಮಾಡಲಾಗಿದೆ.
ಬೋಧಕ/ಬೋಧಕೇತರ ನೇಮಕಾತಿಗೆ ಸಂಬಂಧಿಸಿದಂತೆ, ಎ.ಬಿ.ವಿ.ಪಿ. ಆಡಿಯೋ ರಿಲೀಜ್ ಮಾಡಿದ ನಂತರ ಆಡಿಯೋದಲ್ಲಿ ಮಾತನಾಡಿದ ವ್ಯಕ್ತಿಗಳನ್ನು ಮಾನ್ಯ ಭ್ರಷ್ಟ ಕುಲಪತಿಗಳು ತನ್ನ ಛೇಂಬರ್ಗೆ ಕರೆಸಿಕೊಂಡು, ಬೆದರಿಕೆ ಹಾಕಿ, ಆಡಿಯೋಗೆ ನಮಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಮುಚ್ಚಳಿಕೆಯನ್ನು ಬರೆಸಿಕೊಂಡು, ರಮೇಶ ಎಂಬ ವ್ಯಕ್ತಿಯ ಮೇಲೆ ತನ್ನ ಬೆಂಬಲಿಗರಿಂದ ತೀವ್ರವಾಗಿ ಹಲ್ಲೆ ನಡೆಸಿರುವುದು, ಹಲ್ಲೆಗೊಳಾದ ವ್ಯಕ್ತಿ ಮತ್ತು ಕುಟುಂಬಕ್ಕೆ ಬೆದರಿಸಿ, ಈ ಕುರಿತು ಮಾಧ್ಯಮ ಮತ್ತು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿದರೆ ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿರುವುದು ಘನವೆತ್ತ ಕುಲಪತಿ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಇಂತಹ ವಾತಾವರಣದಲ್ಲಿ ವಿ.ವಿ.ಯಲ್ಲಿನ ನೌಕರರು ಕರ್ತವ್ಯ ನಿರ್ವಹಿಸಲು ಭಯಭೀತರಾಗಿದ್ದಾರೆ.
ಅನೇಕ ನೇಮಕಾತಿಗೆ ಸಂಬಂಧಿಸಿದ ಗೊಂದಲಗಳು, ಅನುಮಾನಗಳು ಸಾರ್ವಜನಿಕರಲ್ಲಿ ಚಚರ್ೆಯಾಗುತ್ತಿರುವುದು ತಮಗೆ ತಿಳಿಸಿದ ವಿಷಯ. ಆದರೆ ಕುಲಪತಿಗಳು ನಿಯಮಗಳನ್ನು ಗಾಳಿಗೆ ತೂರಿ, ಎಲ್ಲಾ ಪ್ರಕ್ರಿಯೆಗಳು ಕಾನೂನು ಪ್ರಕಾರ ನಡೆಯುತ್ತಿರುವುದಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸಿ ಸಕರ್ಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಸಕರ್ಾರದಲ್ಲಿನ ಕೆಲವು ಅಧಿಕಾರಿಗಳು ಹಾಗೂ ಸ್ಥಳೀಯ ಹೋರಾಟಗಾರರು, ಜನಪ್ರತಿನಿಧಿಗಳು ಕೂಡ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿವುದರಿಂದ ಕುಲಪತಿಗಳಿಗೆ ನೈತಿಕ ಬಲ ದೊರೆತಂತಾಗಿ, ತಮಗೆ ಇಷ್ಟ ಬಂದ ಹಾಗೆ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿರುವುದು ದುರದುಷ್ಟಕರ ಸಂಗತಿ. ಕೂಡಲೇ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮಧ್ಯ ಪ್ರವೇಶಿಸಿ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವರಾಜ್, ಅಡವಿಸ್ವಾಮಿ, ಶ್ರೀಕಾಂತರೆಡ್ಡಿ, ವೀರನಗೌಡ, ಮತ್ತಿತರು ಉಪಸ್ಥಿತರಿದ್ದರು.