ಬಳ್ಳಾರಿ: ಮೇ.30ರಂದು ತುಂಗಭದ್ರ ಹೂಳಿನ ಜಾತ್ರೆ ಪ್ರಾರಂಭ: ಪುರುಷೋತ್ತಮಗೌಡ

ಲೋಕದರ್ಶನ ವರದಿ

ಬಳ್ಳಾರಿ 13: ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಯಬೇಕು ಎಂದು ಸರಕಾರದ ಮೇಲೆ ಒತ್ತಡ ತರುವ ಕಾರಣ ಈ ತಿಂಗಳ 30ರಂದು ತುಂಗಭದ್ರ ಹೂಳಿನ ಜಾತ್ರೆ ನಡೆಯಲಿದೆ. ಈಗಾಗಲೇ ಸತತ ಎರಡು ವರ್ಷಗಳಿಂದ ಹೂಳಿನ ಜಾತ್ರೆ ನಡೆಸಿದ್ದು ಈ ಬಾರಿಯ ಹೂಳಿನ ಜಾತ್ರೆ ಮೂರನೇ ವರ್ಷದ್ದಾಗಿದೆ. 

ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ 2017ರಲ್ಲಿ ಹೂಲಿನ ಜಾತ್ರೆ ಬೃಹತ್ ಪ್ರಮಾಣದಲ್ಲಿ ನಡೆದಿತ್ತು. ಕಳೆದ ವರ್ಷ ಚುನಾವಣೆ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಮಾಡಿದ್ದೇವು. ಈ ವರ್ಷವು ದಾನಿಗಳು ನೀಡುವ ನೆರವನ್ನು ಆಧರಿಸಿ ಎಷ್ಟುದಿನ ಮಾಡಬೇಕೆಂದು ಯೋಚಿಸಿದ್ದೇವೆ. ಆರಂಭಿಕವಾಗಿ 25 ಟ್ರ್ಯಾಕ್ಟರ್ ಮತ್ತು ಎರಡು ಜೆಸಿಬಿಗಳಿಂದ ಹೂಳು ತೆಗೆಯಲು ನಿರ್ಧರಿಸಿದೆ. ಹೂಳು ತೆಗೆದುಕೊಂಡು ಹೋಗುವ ರೈತರ ಟ್ರ್ಯಾಕ್ಟರ್ಗೆ ಉಚಿತವಾಗಿ ತುಂಬಿ ಕೊಡಲಿದ್ದೇವೆ. ಜೊತೆಗೆ ನಾವು ತೆಗೆದ ಹೂಳನ್ನು ಜಲಾಶಯದ ಹೊರಭಾಗದಲ್ಲಿ ಹಾಕಲಿದೆ. 

ಕಾರ್ಯಕ್ರಮವು ಗುಂಡಾ ಅರಣ್ಯಪ್ರದೇಶ ಸಮಿಪದ ಪ್ರದೇಶದಲ್ಲಿ ಹೂಳು ತೆಗೆಯಲಿದ್ದೇವೆ. ಇದರ ನೇತೃತ್ವವನ್ನು ಕಮ್ಮಚರ್ೆಡು ಮಠದ ಕಲ್ಯಾಣ ಮಹಾಸ್ವಾಮಿಗಳು ಕಾರ್ಯನಿರ್ವಹಿಸುತ್ತಿದ್ದು ಇದರ ವೆಚ್ಚಗಳಿಗಾಗಿ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಾಂಧಿನಗರ ಶಾಖೆಯಲ್ಲಿ ಖಾತೆ ತೆಗೆದಿದೆ. ಖಾತೆ ಸಂಖ್ಯೆ-10605101067783, ಗೆ ದಾನಿಗಳು ಹಣದ ಸಹಾಯವನ್ನು ನೀಡಿದ್ದಲ್ಲಿ ಇನ್ನೂ ಹೆಚ್ಚಿನ ದಿನ ಹೂಳು ತೆಗೆಯುವ ಕಾರ್ಯಕ್ರಮವನ್ನು ಮಾಡಲಿದ್ದೇವೆ. 

ಕಾರ್ಯಕ್ರಮಕ್ಕೆ ಜಿಲ್ಲೆಯ ಕಾಖರ್ಾನೆಗಳು ಮತ್ತು ಶ್ರಿಮಂತ ರೈತರು, ಉದ್ದೇಮಿದಾರರು, ಸಹಕಾರ ಸರಿಯಾಗಿ ನೀಡುತ್ತಿಲ್ಲ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಮತ್ತು ನಾಡಿನ ವಿವಿದ ಮಠಾದೀಶರು ನೆರವಿನ ಬರವಸೆ ನೀಡಿದ್ದಾರೆಂದು ವಿವರಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಜಾಳಿಹಾಳ್ ಶ್ರೀಧರ್, ವೀರಣಗೌಡ, ಶಿವಯ್ಯ, ರಾಮನಗೌಡ, ಶರಣಪ್ಪ, ಶರಣಗೌಡ, ಭೀಮನಗೌಡ ಸೇರಿದಂತೆ ಇನ್ನೂ ಹಲವಾರು ರೈತರು ಉಪಸ್ಥಿತರಿದ್ದರು.