ಬಳ್ಳಾರಿ: ಪ್ರತಿಯೊಬ್ಬರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಇರುತ್ತೆ: ನಾಗೇಂದ್ರ

ಲೋಕದರ್ಶನ ವರದಿ

ಬಳ್ಳಾರಿ 27: ಯಾವುದೇ ವ್ಯಕ್ತಿಯ ಜೀವನದಲ್ಲಿ ತಿರುವುಗಳು ಇರುವುದನ್ನು ಕೇಳಿದ್ದೇವೆ. ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಟನರ್ಿಂಗ್ ಪಾಯಿಂಟ್ ಎನ್ನುವುದು ಇದ್ದೇ ಇರುತ್ತದೆ. ಆ ಟನರ್ಿಂಗ್ ಪಾಯಿಂಟ್ನಿಂದಲೇ ಒಬ್ಬ ವ್ಯಕ್ತಿಯ ಜೀವನವೂ ಸಂಪೂರ್ಣ ಬದಲಾವಣೆ ಹೊಂದಿರುತ್ತದೆ. ಹಾಗಾಗಿ ಜೀವನದಲ್ಲಿ ಟನರ್ಿಂಗ್ ಪಾಯಿಂಟ್ ಎಂಬುದು ತುಂಬಾ ಮುಖ್ಯವಾಗಿ ಪರಿಣಮಿಸುತ್ತದೆ ಎಂದು ಕನ್ನಡ ಚಲನಚಿತ್ರ ರಂಗದ ಚಿತ್ರಸಾಹಿತಿ ಹಾಗೂ ನಿದರ್ೇಶಕ ಡಾ.ವಿ.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು. 

    ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ  ಅಕ್ಕ ಮಹಾದೇವಿ ಸಭಾಂಗಣದಲ್ಲಿ  ಕೃತಿ ಬಿಡುಗಡೆ ಮಾಡಿ ಮಾತನಾಡುತ್ತ,  ತಮ್ಮ ಜೀವನದಲ್ಲಿ ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯರಿ ಎಂಬ ಪುಸ್ತಕವು ಪರಿಣಾಮ ಬೀರಿ ಅಲ್ಲದೆ ಜೀವನದ  ಬದಲಾವಣೆಗೆ ಕಾರಣವಾಗಿದೆ. ಅದೇ ರೀತಿ ಅಂಶಿ ಪ್ರಕಾಶನದ ಟನರ್ಿಂಗ್ ಪಾಯಿಂಟ್ ಎಂಬ ಕೃತಿಯು ಸಹ  ಹಲವು ಜನರ ಯಶೋಗಾಥೆಗೆ ಮುನ್ನುಡಿಯನ್ನು ಬರೆಯುತ್ತದೆ ಎಂದು ಹೇಳಿದರು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿ.ಎಸ್.ಎಸ್.ನ ರಾಜ್ಯಾಧ್ಯಕ್ಷ ವೀರಕ ಪುತ್ರ ಶ್ರೀನಿವಾಸ ಮಾತನಾಡಿ, ಪಂಪಾಪತಿಯವರ ಈ ಕೃತಿ ನಾಡಿನ ಹಲವು ಜನರ ಬದುಕಿನ ಮಜಲುಗಳನ್ನು ಪರಿಚಯ ಮಾಡಿಕೊಡುತ್ತಾ ಬೇರೆಯವರ ಜೀವನಕ್ಕೆ ಮಾರ್ಗದಶರ್ಿಯಾಗಿ ನಿಲ್ಲುತ್ತದೆ ಎಂದರು. 

ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮಕಲ್ಮಠ ಮಾತನಾಡಿ, ನಮ್ಮ ಜಿಲ್ಲೆಯ ಪ್ರಕಾಶನದ ಪುಸ್ತಕವೊಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಷಯ. ಈ ಪ್ರಕಾಶನದಿಂದ ಇಂತಹ ಇನ್ನೂ ಅನೇಕ ಪುಸ್ತಕಗಳು ಬರಲಿ ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರವಿಕೃಷ್ಣರೆಡ್ಡಿ, ಶ್ರೀದೇವಿ ಮಂಜುನಾಥ, ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಂ.ಹಿರೇಮಠ ಅವರಿಂದ ಭಾವಗೀತೆ ಮತ್ತು ಜನಪದ ಗೀತೆ ಮೂಡಿ ಬಂದವು. ಆರಂಭದಲ್ಲಿ ಪ್ರಕಾಶಕ ಸಂಪಾದಕ ಪಂಪಾಪತಿ ಟಿ.ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ದಿವಾಕರ ನಾರಾಯಣ ನಿರೂಪಿಸಿದರು.  ವಿಷ್ಣುಸೇನಾ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಮಂಜುಮಾಣಿಕ್ಯ, ಆನಂದ ರಾಜ್, ತುಮಕೂರಿನ ಕಲ್ಪತರು ಪ್ರಕಾಶನದ ಪ್ರಶಾಂತ, ಈ.ಜಿ.ರೆಡ್ಡಿ, ಕಳಕಪ್ಪಗೌಡ, ವಕೀಲ ಹನುಮಂತ ಅಲ್ಲದೆ ಬೆಂಗಳೂರಿನ ಮತ್ತು ಬಳ್ಳಾರಿಯ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು