ಬಳ್ಳಾರಿ: ಜನಮನ ಸೂರೆಗೊಂಡ ಬೋಧಿಸತ್ಯ ತೊಗಲುಗೊಂಬೆಯಾಟದ ದೃಶ್ಯಕಾವ್ಯ

ಲೋಕದರ್ಶನ ವರದಿ

ಬಳ್ಳಾರಿ 11: "ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತೊಗಲುಗೊಂಬೆಯಾಟ ಪ್ರಾತ್ಯಕ್ಷಿಕೆ, ಕಲಾ ಶಿಬಿರ ನೆರವೇರಿಸಿ, ತೊಗಲುಗೊಂಬೆಯ ಆಟ ಪ್ರದರ್ಶಿಸಿ ಅಂತರರಾಷ್ಟ್ರೀಯ ಖ್ಯಾತಿ-ಜನಪ್ರಿಯತೆ ಗಳಿಸಿದ ಹಿರಿಯ ರಂಗ ಕಲಾವಿದರು ನಾಡೋಜ ಬೆಳಗಲ್ಲು ವೀರಣ್ಣನವರು. ಸ್ವಯಂ ರೂಪಿತ ಹುಟ್ಟು ಪ್ರತಿಭೆಯ ಈ ಮೇರು ಕಲಾವಿದರ ಕುಟುಂಬದ ಮೂರು ತಲೆಮಾರಿನ ಸದಸ್ಯರು ರಂಗಭೂಮಿ ಹಾಗೂ ತೊಗಲುಗೊಂಬೆಯಾಟದಲ್ಲಿ ತಮ್ಮನ್ನು ಸಮಪರ್ಪಿಸಿಕೊಂಡವರು. 

ಸಾಹಿತ್ಯ-ಸಂಗೀತ-ತೊಗಲು ಗೊಂಬೆಯಾಟ ಕಲಾವಂತಿಕೆಯ ಸ್ವಯಂಪ್ರತಿಭೆಯಿಂದ ಬುದ್ಧನ ಜೀವಿತವನ್ನು ಬೆಳ್ಳಿ ಬಟ್ಟೆಯ ಮೇಲೆ ಮೂಡಿಸಿದ ನಾಡೋಜ ಬೆಳಗಲ್ಲು ವೀರಣ್ಣನವರ ಪುತ್ರ ಬೆಳಗಲ್ಲು ಪ್ರಕಾಶ  ತಂದೆಯವರ ಮಾರ್ಗದರ್ಶನ ನಿದರ್ದೇಶನದಲ್ಲಿ ತೊಗಲು ಗೊಂಬೆಯಾಟದಲ್ಲಿ ಬುದ್ಧತ್ವ ಧಮ್ಮತ್ವ ಸಂಘತ್ವಗಳನ್ನು ತ್ರಿಸರಣ-ತ್ರಿಕರಣಪೂರ್ವಕ ರೂಪಿಸಿ, ಕಲಾಸಂವೇದನಾಶೀಲತೆ ಸೃಜನ ಶೀಲತೆ ಕ್ರಿಯಾಶೀಲತೆಗಳ ತ್ರಿವೇಣಿಯಲ್ಲಿ ಸಂಗಮಗೊಳಿಸಿ, ವಿಸ್ಮಯಾದ್ಭುತ ಚಿತ್ತಾಕರ್ಷಕ ದೃಶ್ಯಕಾವ್ಯವಾಗಿಸಿ ಕಲಾ ರಸಿಕ ಪ್ರೇಕ್ಷಕ ಜನಮನಸೂರೆಗೊಳ್ಳುವಲ್ಲಿ ಬೆಳಗಲ್ಲು ಪ್ರಕಾಶ ಯಶಸ್ವಿಯಾಗಿದ್ದಾರೆ" ಎಂದು ಕರ್ನಾಟಕ ಸರ್ಕಾರ ಭಾಷಾಂತರ ಇಲಾಖೆಯ ನಿವೃತ್ತ ನಿದರ್ೆಶಕ, ಲಲಿತ ಪ್ರಬಂಧಕಾರ ಈರಪ್ಪ ಎಂ.ಕಂಬಳಿ ವಿವರಿಸಿದರು.

ಆಗಸ್ಟ್-ಹತ್ತು ಶನಿವಾರ ಸಂಜೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ "ಬೋಧಿಸತ್ಯ-ತೊಗಲುಗೊಂಬೆಯಾಟದಲ್ಲಿ-ಬುದ್ಧ" ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. 

ಡಾ.ವೆಂಕಟಯ್ಯ ಅಪ್ಪಗೆರೆಯವರು ಸ್ವಾಗತ- ಪ್ರಾಸ್ತಾವಿಕ ನುಡಿಗಳನ್ನಾಡುತ್ತ  ಮುಂದಿನ ದಿನಗಳಲ್ಲಿ ಹಿಂದಿ ಹಾಗೂ ಆಂಗ್ಲ ಅವತರಣಿಕೆಗಳನ್ನು ಸಿದ್ಧಗೊಳಿಸಿ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬುದ್ಧನ ತೊಗಲುಗೊಂಬೆಯಾಟ ಪ್ರದರ್ಶಸುವ ಯೋಜನೆಯ ಆಶಯ  ವಿವರಿಸಿದರು. 

ಶಿಕ್ಷಕ ಅಮಾತಿ ಬಸವರಾಜ ಅಚ್ಚುಕಟ್ಟಾಗಿ ನಿರೂಪಿಸಿದ ವೇದಿಕೆಕಾರ್ಯಕ್ರಮ ನಾಡೋಜ ಬೆಳಗಲ್ಲು ವೀರಣ್ಣನವರ ವಂದನಾರ್ಪಣೆಯೊಂದಿಗೆ ಮಂಗಲಗೊಂಡಿತು. ಪೂರ್ವ ಧ್ವನಿಮುದ್ರಿತ ಆಡಿಯೊ, ವೀಡಿಯೊಗಳ ಸುಮಧುರ ಗೀತ-ಗಾಯನ, ದಿವ್ಯಾಭಿವ್ಯಕ್ತಿಯ ಸುಲಲಿತ ಸಂಭಾಷಣೆ, ಸಮರ್ಪಕ ತೊಗಲುಗೊಂಬೆಗಳನ್ನಾಡಿಸುವಿಕೆಯ ನೇರ ಪ್ರದರ್ಶನದಿಂದ ಬುದ್ಧ ಜೀವನಾಮೃತದ ರೂಪಕ ಕಳೆಗಟ್ಟಿತು. ಆದಿಜೀವಿ ಮಾನವಯುಗಾರಂಭದ ಬದುಕು, ಆಹಾರ ಸಂಗ್ರಹ, ಅಧಿಕಾವಧಿಯ ಆಹಾರ ಸಂಗ್ರಹ, ಅದರಿಂದುಂಟಾಗುವ ಪರಸ್ಪರ ಕಾದಾಟ-ಕಲಹ, ಕತ್ತಲೆ-ಕಷ್ಟಕೋಟಲೆ ನಡುವೆ-ಬುದ್ಧೋದಯವನ್ನು ನಯನ ಮನೋಹರ, ಚಿತ್ತಾಕರ್ಷಕ ನೃತ್ಯ ಮಧುರ ಕಂಠದಿಂದ ಹೊಮ್ಮಿ ಬಂದ, "ಎದ್ದು ಬರುತಾನೆ ನೋಡ-ಬುದ್ಧ/ಲೋಕ ಕಾರುಣ್ಯದ ಸಾಕಾರ ಮೂರ್ತ ಲೋಕ ಸಂಗ್ರಹದ ಮುಕ್ತ ಸಂಗಾತಿ. ಸುಶ್ರಾವ್ಯ ಗಾಯನದ ಮೂಲಕ ನಿರೂಪಿಸುವ ನೇರ ಅಭಿವ್ಯಕ್ತಿ ಕಿಕ್ಕಿರಿದು ನೆರೆದ ಪ್ರೇಕ್ಷಕ ಜನಹೃದಯಾಂತರಂಗದಲ್ಲಿ ದಿವ್ಯಾ ನುಭೂತಿಯ ರೋಮಾಂಚನವುಂಟುಮಾಡಿತು. 

ಪಾರದರ್ಶಕ ವರ್ಣರಂಜಿತ ತೊಗಲುಗೊಂಬೆಗಳಾಗಿ ರೂಪಿಸಿದ ಬೆಳಗಲ್ಲು ಮಲ್ಲಿಕಾರ್ಜುನ, ಮಾರುತಿ, ಸುದರ್ಶನರವರು, ಕೆ.ಎಂ.ಶಶಿಧರ್, ರವಿ ಹಡಗಲಿಯವರ ಜೊತೆ ಆಲಾಪಿಸುವುದರೊಂದಿಗೆ ಸಂಗೀತ ಸಂಯೋಜಿಸಿದ ಬೆಳಗಲ್ಲು ಪ್ರಕಾಶ, ಅತ್ಯಂತ ಸಮಂಜಸವಾಗಿ ಧ್ವನಿ ಮುದ್ರಣ ಕಾಯಕ ಮಾಡಿದ-ಜಾನ್ ದಯಾಕುಮಾರ್, ಬೆಳಕು ವಿನ್ಯಾಸದ ಸಿದ್ದೇಶ್ ವೈಎಂ, ಲೀಲಾಜಾಲ ಕೈಚಳಕದೊಂದಿಗೆ ಗೊಂಬೆಗಳನ್ನಾಡಿಸಿದ ಬೆಳಗಲ್ಲು ಪ್ರಕಾಶ್,  ಬಿ.ಜಿ.ಸಾಯಿಕುಮಾರ್, ಬಿ.ಶೇಖರ್, ಶ್ರೀನಿವಾಸ ಗೋಪಾಳ, ಮಹಾಂತೇಶ ಶಾಸ್ತ್ರಿ, ಶ್ರೀಲತ ಎಲ್.ಜಯಶ್ರೀ, ಜಯಶ್ರೀ ಪಾಟೀಲ್,  ಬಿ.ಅಕ್ಷತ, ರುಕ್ಮಿಣಿಬಾಯಿ, ಬೆಳಗಲ್ಲು ಪೂವರ್ಿ, ಧನ್ಯಾ, ಸಂಧ್ಯಾ, ರಂಜನೀಯವಾಗಿ ನೃತ್ಯ ನಿವೇದಿಸಿದ ರಂಜಿತಾ-ರಕ್ಷಿತಾ-ಗಂಗಾಧರ ದುರ್ಗಂ, ಸರ್ವೇಶ ಬೆಳಗಲ್ಲು, ಪ್ರಶಾಂತ ನಾಯ್ಡು  ಈ ಎಲ್ಲರಲ್ಲೂ ಕಲೋತ್ಸಾಹ ತುಂಬಿ, ಮಾರ್ಗದರ್ಶನ ಮಾಡುವ ಮೂಲಕ ನಿದರ್ೆಶನ ಮಾಡಿದವರು ತೊಗಲುಗೊಂಬೆ ಮಾಂತ್ರಿಕ ನಾಡೋಜ ಬೆಳಗಲ್ಲು ವೀರಣ್ಣ. ಒಟ್ಟಾರೆ ವಿಸ್ಮಯಾದ್ಭುತ ತೊಗಲು ಗೊಂಬೆಯಾಟದಲ್ಲಿ ಮೂಡಿಬಂದ ಹೊಸ ಆಯಾಮದ ಹೊಸ ಆವಿಷ್ಕಾರದ ಹೊಸ ತಂತ್ರಜ್ಞಾನದ ಹೊಚ್ಚ ಹೊಸ ಪ್ರದರ್ಶನದ ಯಶಸ್ವೀ