ಲೋಕದರ್ಶನ ವರದಿ
ಬಳ್ಳಾರಿ 08: ಸ್ಲಂ ನಿವಾಸಿ ಮುಗ್ದ ಮಕ್ಕಳಿಗಾಗಿ ಮೂರು ದಿನಗಳ ಬೇಸಿಗೆ ಶಿಬಿರ ಯಶಸ್ವಿಯಾಗಿ ತಾರಾನಾಥಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು. ಸೋದರಿ ನಿವೇದಿತಾ ಪ್ರತಿಷ್ಠಾನ, ಮಾತೃ ಮಹಿಳಾ ಮಂಡಳಿಯ ಸಹಭಾಗಿತ್ವದಲ್ಲಿ ಮಕ್ಕಳಿಗೆ ಆರೋಗ್ಯಕರ ಹವ್ಯಾಸಗಳ ತರಬೇತಿ ನೀಡಲಾಯಿತು. ಯೋಗ, ಶ್ಲೋಕಗಳು ಹಾಗೂ ಅರ್ಥ ಮತ್ತು ಮೌಲ್ಯಗಳು ಸ್ವಚ್ಛತೆಯ ಅರಿವು ಮಕ್ಕಳಿಗೆ ಗಿಡ ನೆಡುವುದರ ಮಹತ್ವ ಮತ್ತು ಗಿಡ ನೆಡೆಸುವ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೈಯದ್ ಅತ್ಹರ್ ಫಾತಿಮಾ, ಸೋದರಿ ನಿವೇದಿತಾ ಜಿಲ್ಲಾ ಸಂಚಾಲಕರಾದ ಚಂದ್ರಿಕಾ ಚಂದ್ರಕಾಂತ್ ಹಾಗೂ ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪಾ, ಸೋದರಿಯತರಾದ ಪಾರ್ವತಿ, ಸುನೀತಾ, ಶ್ರೀದೇವಿ, ವಸಂತ, ಶ್ರೀನಿಧಿ, ಕವಿತಾ ಮತ್ತು ಡಾ.ಅಕ್ಕಮಹಾದೇವಿಯವರೊಡನೆ ಡಾ.ಶ್ಯಾಮ್ ಕಿಶೋರ್ ಸಿಂಗ್ ಮುಂತಾದವರು ಪರಿಸರ ಸಂರಕ್ಷಣೆ ಮಹತ್ವದ ಕುರಿತು ಮಕ್ಕಳಿಗೆ ವಿವರಿಸಿ ಹೇಳಿದರು.
ಈ ಮೂರು ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸತ್ಯವಾಣಿಯವರು ಹಾಗೂ ಚಂದ್ರಕಾಂತ್, ವೆಂಕಟೇಶ್ರವರು ಮಕ್ಕಳಿಗೆ ಹಲವು ವಿಷಯಗಳ ಮಹತ್ವ ಕುರಿತು ಜ್ಞಾನ ನೀಡಿ ಸೋದರಿ ನಿವೇದಿತಾ ಪುಸ್ತಕಗಳನ್ನು ವಿತರಿಸಿದರು. ಕೊನೆಯಲ್ಲಿ ಮಕ್ಕಳಿಗೆ ಹೋಳಿಗೆ ಊಟ ಹಾರೈಸಿ ಹಬ್ಬದ ವಾತಾವರಣ ನಿರ್ಮಿಸಲಾಯಿತು