ಬಳ್ಳಾರಿ: ಶಾರದ ವಿದ್ಯಾಪೀಠ ಪ್ರೌಢ ಶಾಲೆ: ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ

ಬಳ್ಳಾರಿ 06: ನಗರದ ಸತ್ಯನಾರಾಯಣ ಪೇಟೆಯ ಶಾರದ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಗುರುವಾರ ಆಚರಿಸಿದರು.ವಿದ್ಯರ್ಥಿಗಳಿಗೆ ಸಸಿ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ ಕುಮಾರ್ ಸಸಿಗೆ ನೀರು ಹಾಕುವ ಮೂಲ ಕಾರ್ಯಕ್ರಮ ಉದ್ಘಾಟಿಸಿದರು.

ಮುಂದಿನ ಪೀಳಿಗೆಗೆ ಅರಣ ಉಳಿಸಲು ಮುಂದಾಗ ಬೇಕು. ಅರಣ್ಯ ಇಲ್ಲದಿದ್ದರೆ ಪ್ರಕೃತಿ ವಿಕೋಪಕ್ಕೆ ನಾವೆ ಹೊಣೆ ಆಗುತ್ತೆವೆ. ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಸಂಕಲ್ಪ ಮಾಡಿಕೊಳ್ಳಿ. ಅರಣ್ಯದಿಂದ ಕಾಲಕಾಲಕ್ಕೆ ಮಳೆ, ಬೆಳೆ, ಹಾಗೂ ಆರೋಗ್ಯದಿಂದ ಜೀವನ ಕಳೆಯ ಬಹುದು. ಇಲ್ಲವೆಂದರೆ ಉಸಿರಾಟಕ್ಕೂ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ರಂಗಕಲಾವಿದ ಪುರುಷೋತ್ತಮಹಂದ್ಯಾಳು ಮಾತನಾಡಿ, ಮನುಷ್ಯ ಕೂಲ ಪ್ರಕೃತಿಗೆ ವಿರುದ್ಧವಾಗಿ ನಡೆದುಕೂಳ್ಳದೆ ಗಿಡ ಮರಗಳನ್ನು ಬೆಳೆಸದೆ ಇದ್ದರೆ, ತನ್ನ ಅವನತಿಗೆ ತಾನೇ ಕಾರಣನಾಗುತ್ತಾನೆ. ಮುಂದಿನ ದಿನಗಳಲ್ಲಿ ಒಂದು ಮನೆ ಒಂದು ಗಿಡ ಊರಿಗೊಂದು ವನ ಬೆಳೆಸಬೇಕು. ಮಕ್ಕಳು ಈಗಿನಿಂಲೇ ಶಾಲೆಯ ಪ್ರೌವೃತ್ತರಾಗಿ ಎಂದು ಕರೆ ನೀಡಿದರು. 

ಮುಖ್ಯ ಗುರು ಕವಿತಾ ವಾದಿರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರುಶಾಲೆ ಸಹ ಶಿಕ್ಷಕ ಶಿಕ್ಪ್ಷಕ್ಷೀಯರು ಅರಣ್ಯ ಅಧಿಕಾರಿಗಳು ಸಿಬ್ಬಂದಿ ವರ್ಗ, ವಿಧ್ಯಾಥರ್ಿಗಳು ಬಾಗವಹಿಸಿದ್ದರು. ಜ್ಯೋತಿ ಸೌದಿ, ಹಾಗೂ ಕುಮಾರಿ ಭಾರತಿ ಜಿ.ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.