ಬಳ್ಳಾರಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದನಾಮೀಕರಿಸಲು ಮನವಿ

ಬಳ್ಳಾರಿ 02: ಉಲ್ಲೇಖದನ್ವಯ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನಂದರೆ 1 ರಿಂದ 7ನೇ ತರಗತಿಗೆ ನೇಮಕವಾದ ನಾವುಗಳು 2005 ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6-8ನೇ ತರಗತಿಗಳನ್ನು ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಬೋಧಿಸುತ್ತಿದ್ದೇವೆ. 

ರಾಜ್ಯದಲ್ಲಿ 82 ಸಾವಿರಕ್ಕಿಂತ ಅಧಿಕ ಪದವಿ ಪಡೆದ ಅನುಭವಿ ಶಿಕ್ಷಕರು 6-8ನೇ ತರಗತಿಗಳನ್ನು ಕಳೆದ 14 ವರ್ಷಗಳಿಂದ ಬೋಧಿಸುತ್ತಿದ್ದರೂ ಕೂಡ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು (6-8) ಹುದ್ದೆಗಳನ್ನು 2 ಬಾರಿ ನೇರ ನೇಮಕ ಮಾಡಿ ಈಗ ಮತ್ತೆ 3ನೇ ಬಾರಿ ನೇರ ನೇಮಕ ನಡೆಯುತ್ತಿದೆ. 

ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಮಾನ್ಯ ಸಚಿವರನ್ನು ಕೂಡ ಕಂಡು ಮನವರಿಕೆ ಮಾಡಿದೆ. ಅಲ್ಲದೇ ದಿ: 05-02-2018 ರಂದು ಪ್ರೀಡಂ ಪಾಕರ್್ನಲ್ಲಿ 25000 ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರಕಾರಕ್ಕೆ ಬೇಡಿಕೆ ಬಗ್ಗೆ ವಿನಂತಿಸಿ ನ್ಯಾಯಕ್ಕಾಗಿ ಒತ್ತಾಹಿಸಿದ್ದೇವೆ. ಆದರೆ ಈ ವರೆಗೂ ನ್ಯಾಯ ಸಿಕ್ಕಿರುವುದಿಲ್ಲ, ಆದ್ದರಿಂದ ನಾವು ಇಂದು ದಿನಾಂಕ 01-06-2019 ರಂದು ಮನವಿ ಪತ್ರ ಸಲ್ಲಿಸುವುದರ ಮೂಲಕ ಪ್ರಬಲವಾಗಿ ಆಗ್ರಹಿಸುವುದೇನೆಂದರೆ ಅರ್ಹ ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಪದವೀಧರ ಶಿಕ್ಷಕರು (6-8) ಎಂದು ಪರಿಗಣಿಸಿ ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮಗಳಂತೆ 1-5ನೇ ತರಗತಿಗಳನ್ನು ಮಾತ್ರ ದಿನಾಂಕ 01-07-2019 ರಿಂದ ಬೋಧಿಸುತ್ತೇವೆ. 6-8 ನೇ ತರಗತಿಗಳ ಬೋಧನೆಯನ್ನು ಬೇಡಿಕೆ ಈಡೇರುವರೆಗೆ ಬಹಿಷ್ಕರಿಸುತ್ತೇವೆ. ನಮಗೆ ನ್ಯಾಯ ದೊರೆಯುವಂತೆ ನಮ್ಮ ಬೇಡಿಕೆಯನ್ನು ಈಡೇರಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಸಲ್ಲಿಸಿದರು.