ಬಳ್ಳಾರಿ: ನೂತನ ಜವಳಿ ನೀತಿ ಯೋಜನೆ ತರಬೇತಿ ಕಾರ್ಯಗಾರ

ಲೋಕದರ್ಶನ ವರದಿ

ಬಳ್ಳಾರಿ 03: ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರು, ಉತ್ತರ ವಲಯದ ವತಿಯಿಂದ ನೂತನ ಜವಳಿ ನೀತಿ ಯೋಜನೆಯಡಿ 2019-20ನೇ ಸಾಲಿನ ಅಡ್ವಾನ್ಸ್ಡ್ಎಸ್.ಎಂ.ಒ. ತರಬೇತಿ ಕಾರ್ಯಕ್ರಮಗಳನ್ನು ಗುಣಾತ್ಮಕವಾಗಿ ಹಾಗೂ ಕಾಲಬದ್ದವಾಗಿ ಅನುಷ್ಠಾನಗೊಳಿಸಲು ಉತ್ತರ ವಲಯ ವ್ಯಾಪ್ತಿಯಲ್ಲಿ ಬರುವ ಬೀದರ್, ಗುಲ್ಬರ್ಗಾ , ರಾಯಚೂರು, ಯಾದಗಿರಿ, ಕೊಪ್ಪಳ  ಮತ್ತು ಬಳ್ಳಾರಿ ಜಿಲ್ಲೆಗಳ ಎಲ್ಲಾ ಎಸ್ಡಿಸಿ ಸಕರ್ಾರಿ ಖಾಸಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳ ಮುಖ್ಯಸ್ಥರು, ತರಬೇತುದಾರರು ಹಾಗೂ ಇಲಾಖೆಯ ಅಧಿಕಾರಿಗಳಿಗೆ  ಪರಿಷ್ಕೃತ ಉನ್ನತೀಕರಿಸಿದ ಪಠ್ಯಕ್ರಮ ಹಾಗೂ ಹೆಚ್ಚುವರಿ ಯಂತ್ರೋಪಕರಣಗಳ ಅಳವಡಿಕೆ ಕುರಿತು ಅರಿವು ಮೂಡಿಸಲು ಒಂದು ದಿನದ ಕಾರ್ಯಗಾರವನ್ನು ಜಿ.ಆರ್.ಟಿ.ಡಿ.ಸಿ ಕಾಲೇಜು, ನಲ್ಲಚೆರುವು, ಬಳ್ಳಾರಿಯಲ್ಲಿ ದಿ: 03 ರಂದು ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮವನ್ನು ಶ್ರೀಧರ್ ನಾಯಕ್, ಜಂಟಿ ನಿದರ್ೇಶಕರು, ಉದ್ಘಾಟಿಸಿ ಮಾತನಾಡಿ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳ ಮೂಲಕ ಜನ ಸಾಮಾನ್ಯರಿಗೆ ಸೀವಿಂಗ್ ಮಷೀನ್ ಆಪರೇಟರ್ ಹೊಲಿಗೆ  ತರಬೇತಿಯನ್ನು ನೀಡುತ್ತಿದ್ದು ರಾಜ್ಯದಲ್ಲಿ ಪ್ರಸ್ತುತ ಜವಳಿ ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಹೊಲಿಗೆ ತರಬೇತಿಯಲ್ಲಿ ಇತ್ತೀಚಿಗೆ ಆಗಿರುವ ಬದಲಾವಣೆಗಳನ್ನು ಹಾಗೂ ಹೊಸ ಆವಿಷ್ಕಾರಗಳನ್ನೊಳಗೊಂಡಂತೆ ಪರಿಷ್ಕೃತ ಉನ್ನತೀಕರಿಸಿದ ಪಠ್ಯಕ್ರಮ (ಸಿಲಬಸ್)ವನ್ನು ರೂಪಿಸಲಾಗಿದೆ. ಎಂದು ಸೂಚನೆ ನೀಡಿದರು. 

ಹೈದ್ರಾಬಾದ್  ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಾದ ವಿಠ್ಠಲರಾಜು, ಮಜುನಾಥ್, ಅಜಿತ್ ನಾಯಕ್, ಕಾಶಿನಾಥ್ ಬಾವಿಕಟ್ಟಿ, ರಾಘವೇಂದ್ರ ರೊಂದಿಗೆ   ತಾಂತ್ರಿಕ ಸಿಬ್ಬಂದಿಗಳು ಹಾಗೂ ವಿವಿಧ ಎಸ್ಡಿಸಿ ಸರ್ಕಾರಿ  / ಖಾಸಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳ ಮುಖ್ಯಸ್ಥರು, ತರಬೇತುದಾರರು ಭಾಗವಹಿಸಿದ್ದರು. 

ಪರಿಷ್ಕೃತ ಉನ್ನತೀಕರಿಸಿದ ಪಠ್ಯಕ್ರಮದ ಅನುಪಾಲನೆ ಕುರಿತು ಐ.ಐ.ಜಿ.ಎಂ ಸಂಸ್ಥೆ, ಬೆಂಗಳೂರು ತರಬೇತುದಾರರಾದ ರಾಘವೇಂದ್ರ ಮತ್ತು ಪದ್ಮನಾಭ ಕಾರಂತ್ ತರಬೇತಿ ನೀಡಿದರು. ಉತ್ತಮ ತರಬೇತಿ ನೀಡುವುದರಿಂದ ಕೌಶಲ್ಯಭರಿತ ಯುವ ಸಮೂಹ ನಿಮರ್ಿಸಿ ನಿರುದ್ಯೋಗ ಸಮಸ್ಯೆ ಹತ್ತಿಕ್ಕುವಲ್ಲಿ ತರಬೇತಿ ಕೇಂದ್ರಗಳ ಪಾತ್ರ ಅತಿ ಮುಖ್ಯ ಎನ್ನುವ ಕುರಿತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ಮಂಜುನಾಥ ಜೆ.ಸಿ, ಹೆಚ್.ಒ.ಡಿ. ಮೇಧಾ ಕಾಲೇಜ್ ಪ್ರೇರಣಾ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸುಮಾರು 150 ಜನ ಬಾಗವಹಿಸಿದ್ದರು. ವಿಠಲ್ರಾಜು ಸ್ವಾಗತಿಸಿದರು ಮಲ್ಲಿಕಾರ್ಜುನ  ನಿರೂಪಿಸಿದರು.