ಲೋಕದರ್ಶನ ವರದಿ
ಬಳ್ಳಾರಿ 07: ನಗರದ ಇಂದಿರಾನಗರದ ವಿಯಾನ್ನಾ ಶಾಲೆಯಲ್ಲಿ 8, 9 ಮತ್ತು 10ನೇ ತರಗತಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕೂಟದ ವ್ಯವಸ್ಥಾಪಕ ನಿದರ್ೇಶಕರಾದ ಬುಕ್ಕಾ ಮಲ್ಲಿಕಾಜರ್ುನ ರವರು ಮಾತನಾಡಿ ಬಳ್ಳಾರಿ ಪಟ್ಟಣದಲ್ಲಿ ಹಲವಾರು ಕಲಬೆರಕೆ ಖಾಸಗಿ ಹಾಲಿನ ಬ್ರಾಂಡ್ಗಳು ಬರುತ್ತಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ಹನಿಕರವಾಗುವುದಲ್ಲದೇ ಹಲವಾರು ರೋಗ ರುಜಿಗಳು ಬರುತ್ತವೆ. ಆದ್ದರಿಂದ ಬಳ್ಳಾರಿ ಜಿಲ್ಲಾ ರೈತರ ಜಿವಾನಾಡಿಯಾದ ಬಳ್ಳಾರಿ ಹಾಲು ಒಕ್ಕೂಟವು ಪ್ರತಿಯೊಂದು ಹಳ್ಳಿಗಳಲ್ಲಿ ಸಹಕಾರ ಸಂಘದ ಮೂಲಕ ಪರೀಕ್ಷೆಗೊಳಪಟ್ಟ ಹಾಲನ್ನು ಶೇಖರಿಸಿ ಬಳ್ಳಾರಿ ಮುಖ್ಯ ಡೇರಿಯಿಲ್ಲಿ ಪಾಶ್ಚೀಕರಿಸಿದ ಶುದ್ದವಾದ ನಂದಿನಿ ಹಾಲನ್ನೇ ಬಳಸಬೇಕೆಂದು ವಿದ್ಯಾಥರ್ಿಗಳಿಗೆ ಮನವರಿಕೆ ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಚಚರ್್ ಫಾದರ್ ರವರು, ವ್ಯವಸ್ಥಾಪಕರುಗಳಾದ ಜಿ.ಬಿ. ಉದಯಕುಮಾರ್(ಮಾರುಕಟ್ಟೆ), ರಂಗನಾಥ (ಡೇರಿ), ಚಂದ್ರಶೇಖರ ರೆಡ್ಡಿ, ಉ.ವ್ಯ.(ಮಾ), ಕೆ.ಎಸ್. ಎರ್ರಿಸ್ವಾಮಿ ರೆಡ್ಡಿ, ಸ.ವ್ಯ.(ಮಾ), ಎಸ್.ವೆಂಕಟೇಶ್ ಗೌಡ, ಸ.ವ್ಯ.(ಮಾ), ಟಿ.ಮಲ್ಲಿಕಾರ್ಜುನ, ಸ.ವ್ಯ.(ಗು.ನಿ.), ಕೆ.ಆರ್. ಇಂದುಕಲಾ, ಮಾ.ಅ. ಹಾಗೂ ಇತರೆ ಮಾರುಕಟ್ಟೆ ಸಿಬ್ಬಂದಿಗಳು ಭಾಗವಹಿಸಿದರು.