ಬಳ್ಳಾರಿ 16: ಸರಕು ಸಾಗಾಣಿಕೆ ಮತ್ತು ಕನ್ ಸ್ಟ್ರಕ್ಷನ್ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಕಾನೂನು ಬಾಹಿರ ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ತಿಳಿಸಿದರು.
ಬಳ್ಳಾರಿ ತಾಲೂಕು ಸಿಡಿಗಿಮೊಳ ಗ್ರಾಮದಲ್ಲಿ ಇತ್ತಿಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಮರ್ಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಾನಕಿ ಕ್ರಾಪರ್್ ಲಿ. ಕಂಪನಿ ಇವರ ಸಂಯುಕ್ತಾಶ್ರದಲ್ಲಿ ಸರಕು ಸಾಗಾಣಿಕೆ ಮತ್ತು ಕನ್ಸುಸ್ಟ್ರಕ್ಷನ್ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದನ್ನು ತಡೆಗಟ್ಟುವ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಹನಗಳಲ್ಲಿ ಕೇವಲ ಸರಕು ಸಾಗಾಣಿಕೆ ವಸ್ತುಗಳಾದ ತರಕಾರಿ, ಹಾಲು ಹಾಗೂ ಅಗತ್ಯ ಇತರೆ ಸಾಮಾಗ್ರಿಗಳನ್ನು ಮಾತ್ರ ಸಾಗಾಣಿಕೆಗೆ ಬಳಸಿಕೊಳ್ಳಬೇಕು. ಆದರೆ, ಇತ್ತೀಚ್ಚಿನ ದಿನಗಳಲ್ಲಿ ಆ ವಾಹನಗಳಲ್ಲಿ ಜನಸಾಮಾನ್ಯರು ಮತ್ತು ಕಾರ್ಮಿಕರನ್ನು ಕರೆದೊಯ್ಯುವುದು ಕಂಡುಬಂದಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲದೆ ಕಾನೂನು ಬಾಹಿರ ಚಟುವಟಿಕೆ ಕಾರ್ಯವಾಗಿದ್ದು, ತಪ್ಪಿಸ್ಥ ವಾಹನ ಚಾಲಕ ಮತ್ತು ಮಾಲಿಕರಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕಾಧಿಕಾರಿ ಚಂದ್ರಶೇಖರ ಐಲಿ, ಕಾಮರ್ಿಕ ನಿರೀಕ್ಷಕ ರವಿದಾಸ್, ಯೋಜನಾ ನಿದರ್ೇಶಕ ಮೌನೇಶ್ ಸೇರಿದಂತೆ ಇತರರು ಇದ್ದರು.