ಬಳ್ಳಾರಿ: ಹೆಚ್ಚಾದ ರಸ್ತೆ ಅಪಘಾತ: ಬೈಪಾಸ್ ರಸ್ತೆ ವಿರೋಧ ವ್ಯಕ್ತ

ಲೋಕದರ್ಶನ ವರದಿ

ಬಳ್ಳಾರಿ 28: ನಗರದ ಸಿರುಗುಪ್ಪ ರಸ್ತೆಯಿಂದ ಅನಂತಪುರ ರಸ್ತೆಗೆ ತಾಳೂರು ರಸ್ತೆ, ಕಪ್ಪಗಲ್ ರಸ್ತೆ, ಸಂಗನಕಲ್ಲು  ರಸ್ತೆ ಹಾಗೂ ಬಿಸಿಲಹಳ್ಳಿ ರಸ್ತೆ ಮೂಲಕ ಹಾದು ಹೋಗುವ ಬೈಪಾಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಮಾಸ್ಟರ್ ಪ್ಲ್ಯಾನ್ ಹಾದುಹೋಗಿರುತ್ತದೆ. ಇದರಿಂದ ಅನೇಕ ತೊಂದರೆಗಳಾಗುವ ಸಾದ್ಯತೆ ಇದ್ದು ಈ ವ್ಯಾಪ್ತಿಯಲ್ಲಿಯೇ ವರ್ತುಲ  ರಸ್ತೆ ಯೂ ಕೂಡ ಹಾದು ಹೋಗಿದೆ. ಈ ರಾಷ್ಟ್ರೀಯ   ಹೆದ್ದಾರಿ ಸಿರುಗುಪ್ಪ ರಸ್ತೆಯ ಲಕ್ಷ್ಮಿ ನಗರ ಕ್ಯಾಂಪ್ ಹಾಗೂ ಬೆಂಗಳೂರು ರಸ್ತೆಯ  ಹಲಕುಂದಿ ಗ್ರಾಮ ನಗರದಿಂದ 8-10 ಕಿ.ಮೀ.  ದೂರದಲ್ಲಿದೆ. ಆದರೆ ಸಂಗನಕಲ್ಲು ರಸ್ತೆಯು ಕೇವಲ 3 ಕಿ.ಮೀ/ ವ್ಯಾಪ್ತಿಯಲ್ಲಿ ಬರುತ್ತದೆ. ಈ ಯೋಜನೆಯು ನಗರಕ್ಕೆ ಬಹಳ ಹತ್ತಿರವಿದೆ ಬೈಪಾಸ್ ರೋಡ್ ಸಿಟಿ ಲಿಮಿಟ್ಸನಲ್ಲಿದೆ ಇದಕ್ಕೆ ಕಾರಣವೇನು? 

ಇದರಿಂದ  ಅನೇಕ ರಸ್ತೆ  ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿ ಇದ್ದು ಈ ರಸ್ತೆ ಹಾದುಹೋಗುವ ಮಾರ್ಗದ ಅಕ್ಕಪಕ್ಕದಲ್ಲಿ ನಿವೇಷನಗಳು ಮತ್ತು ನೂತನ ಕಟ್ಟಡಗಳು ಇವೆ. ಇದರಿಂದ ಇಲ್ಲಿ  ವಾಸಮಾಡುವ  ಜನರಿಗೂ ಬಹಳ ತೊಂದರೆಯಾಗುತ್ತದೆ.  ಇದೆ ಮಾರ್ಗದಲ್ಲಿ  ವಿಜಡಮ್ಲ್ಯಾಂಡ್ ಎಂಬ ಶಾಲೆ ಇದೆ. ಇಲ್ಲಿ ಇಂದು ಒಂದು ಸಾವಿರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಇಲ್ಲಿಗೆ ಶೇಖಡ 70% ಬಡ ವಿದ್ಯಾರ್ಥಿಗಳು  ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆ ಬರುತ್ತಾರೆ.   

ಈ ಹಾದಿಯಲ್ಲಿ ಶಂಕರಾಚಾರ್ಯ ಶೃಂಗೇರಿ ಶಾರದ ಮಠ ಎಂಬ ದೈವಿಕ ಆಶ್ರಮವಿದ್ದು, ಆ ಆಶ್ರಮಕ್ಕೆ ಬರುವ ಭಕ್ತಾದಿಗಳಿಗೂ ಹಾಗೂ ದೈವಿಕ ಪೂಜಾ ಕಾರ್ಯಕ್ರಮಗಳಿಗೂ ತುಂಬ ತೊಂದರೆಯಾಗುತ್ತದೆ. ಇದೆ ಹಾದಿಯಲ್ಲಿ ರಾಜಯೋಗ ಆಶ್ರಮವಿದ್ದು, ಅಲ್ಲಿ ಅನೇಕ ವೃದ್ದರು ಆಶ್ರಯ ಪಡೆದುಕೊಂಡಿದ್ದಾರೆ. 

ಸಂಗನಕಲ್ಲು  ಜನತೆಗೆ ಕುಡಿಯುವ ನೀರನ್ನು  ಇಲ್ಲಿಂದ ಸರಬರಾಜು ಮಾಡಲಾಗುತ್ತಿದೆ  ಈ ನೀರು  ಕಲುಷಿತಗೊಳ್ಳುವ ಸಾದ್ಯತೆ ಇದ್ದು, ಇದರಿಂದ ಇಲ್ಲಿನ ಜನತೆಗೆ ರೋಗ-ರುಜಿನಗಳು ಬರುತ್ತವೆ.  ಪ್ರಮುಖವಾಗಿ ಇಲ್ಲಿನ ಜನರು ಚಿಕ್ಕ ಭೂಹಿಡುವಳಿಗಳನ್ನು ಹೊಂದ್ದಿದ್ದು ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ದಯಾಳುಗಳಾದ ತಾವು ಈ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆಯನ್ನು ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ತುಂಬ ಅನುಕೂಲವಾಗುತ್ತದೆ. 

ಆದ್ದರಿಂದ ಈ ಯೋಜನೆಯನ್ನು ಬೇರೆ ಕಡೆ ಬದಲಾವಣೆ ಮಾಡಲು ವಿನಂತಿ ಮಾಡಿಕೊಳ್ಳುತ್ತೇವೆ