ಲೋಕದರ್ಶನ ವರದಿ
ಬಳ್ಳಾರಿ 03: ಮಹಿಳೆಯರು ಸ್ವಾವಲಂಬನೆಯಾಗಲು ಟೈಲರಿಂಗ್ ಸಹಾಯವಾಗುವುದು ಎಂದು ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು, ನೀವು ಗಳಿಸಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಮೀಸಲಿಡಬೇಕೆಂದು ಹಾಗೂ ಮಹಿಳೆಯರು ವಿದ್ಯೆ ಕಲಿತರೆ ಕುಟುಂಬ ಉದ್ದಾರವಾಗುವುದು ಎಂದು ಕಲ್ಯಾಣ ಮಹಾಸ್ವಾಮಿಗಳವರು ಇಂದು ಕೌಲ್ಬಜಾರ್ನ ಮಹಾನಗರ ಪಾಲಿಕೆ ಸದಸ್ಯರಾದ ಗೋವಿಂದರಾಜುಲು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ 90 ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಲು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಾಗೂ ಗೋವಿಂದರಾಜುಲು ಅವರು ಪಾಲಿಕೆಯ ಸದಸ್ಯರಾದ ಅಂದಿನಿಂದಲೂ ಇಂದಿನವರೆಗೆ 3 ತಿಂಗಳಿಗೊಮ್ಮೆ ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು, ಅವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಮಾಜಿ ಸಂಸದರಾದ ಫಕ್ಕೀರಪ್ಪನವರು ಮಾತನಾಡಿ, ಬಳ್ಳಾರಿ ನಗರದ 35 ವಾಡರ್ುಗಳಲ್ಲಿ ಇಂತಹ ಸಮಾಜ ಸೇವೆ ಮಾಡುವ ಸದಸ್ಯರು ಸಿಗುವುದಿಲ್ಲವೆಂದು, ಮುಂದಿನ ಚುನಾವಣೆಯಲ್ಲೂ ಇವರನ್ನೇ ಆಯ್ಕೆ ಮಾಡಬೇಕೆಂದು ಆಶಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದರಾಜುಲು ಅವರು, ಗುರುಗಳು ಮತ್ತು ಹಿತೈಷಿಗಳು ನಾವು ನಂಬಿದ ಎಲ್ಲಾ ಮುಖಂಡರುಗಳ ಆಶೀವರ್ಾದದಿಂದ ನಾವು ಈ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದೇವೆ ಎಂದು, ಇದರ ಸದುಪಯೋಗಪಡಿಸಿಕೊಂಡು ಎಲ್ಲಾ ನಾಗರಿಕರ ಜೀವನ ಸುಗಮವಾಗಬೇಕೆಂದು ಆಶಿಸಿದರು.
ಈ ಸಂದರ್ಭದಲ್ಲಿ ಓಬಳೇಶ್, ನೂರ್ ಅಹ್ಮದ್, ಶೀನ ಹಾಗೂ ನೂರಾರು ಕೌಲ್ಬಜಾರ್ನ ಕಾರ್ಯಕರ್ತರು ಗೋವಿಂದರಾಜುಲು ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿದರು.