ಲೋಕದರ್ಶನ ವರದಿ
ಬಳ್ಳಾರಿ 22: ನಗರದ ಕನಕ ದುರ್ಗಮ್ಮ ದೇವಸ್ಥಾನ ಹತ್ತಿರ, ಸರ್ಕಾರಿ ಪ್ರೌಢ ಶಾಲೆ (ಕಸ್ತೂರಿ ಬಾಯಿ ಶಾಲೆ)ಯಲ್ಲಿರುವ 300 ಜನ ವಿದ್ಯಾರ್ಥಿಗಳಿಗೆ ಕಪ್ಪಗಲ್ಲು ರಸ್ತೆಯ ವೀರಭ್ರಮಯ್ಯ ದೇವಸ್ಥಾನದ ಶರಣಂ ಅಯ್ಯಪ್ಪ ಸೇವಾ ಟ್ರೆಸ್ಟ್ನ ಅಧ್ಯಕ್ಷರಾದ ಕೆ.ಹನುಮಂತು ಇವರ ನೇತೃತ್ವದಲ್ಲಿ 4ನೇ ವರ್ಷದ ನೋಟ್-ಪುಸ್ತಕ ವಿತರಣೆ ಪ್ರಯುಕ್ತವಾಗಿ ಬಳ್ಳಾರಿ ನಗರ ಶಾಸಕಾರದ ಜಿ.ಸೋಮಶೇಖರರೆಡ್ಡಿಯವರ 54 ಜನ್ಮದಿನದ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್-ಪುಸ್ತಕ ಪೆನ್ಸಿಲ್ ಸೆಟ್ ಪೌಚ್ ಹಾಗೂ ಇತರೆ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಯಿತು,
ಈ ಸಂದರ್ಭದಲ್ಲಿ ಪುಸ್ತಕ ವಿತರಣೆ ಮಾಡಿರುವ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿಯವರು ಮಾತನಾಡುತ್ತಾ ಬಡ ವಿದ್ಯಾರ್ಥಿಗಳಿಗೆ ನೋಟ್-ಪುಸ್ತಕ ವಿತರಣೆ ಮಾಡಿರುವುದರಿಂದ ಎಷ್ಟೋ ಬಡ ವಿದ್ಯಾಥರ್ಿಗಳಿಗೆ ಅನುಕೂಲವಾಗುತ್ತದೆ, ನಾನು ಸರ್ಕಾರಿ ಮುನ್ಸಿಪಾಲ್ ಶಾಲೆಯಲ್ಲಿ ಓದಿಕೊಂಡೆ ಬಳ್ಳಾರಿ ಜನರ ಆಶ್ರಿವಾದದಿಂದ ಬಳ್ಳಾರಿ ನಗರ ಶಾಸಕನ್ನಾಗಿದ್ದೇನೆಂದು ಶಾಲೆಯ ವಿದ್ಯಾರ್ಥಿಗಳಿಗೆ ಉಪದೇಶವನ್ನು ನೀಡಿರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ತಂದೆ-ತಾಯಿಯಾಗಿ ಹಾಗೂ ಶಾಲೆಯ ಮುಖ್ಯ ಗುರುಗಳಿಗೆ ಪ್ರತಿ ನಿತ್ಯ ನಮಸ್ಕರ ಮಾಡಬೇಕೆಂದು ಈ ಒಂದು ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೇಳಿರುತ್ತಾರೆ.
ಈ ಒಂದು ಸಂದರ್ಭದಲ್ಲಿ, ವಾಲ್ಮೀಕಿ ಸಮಾಜದ ಮುಖಂಡರು ರುದ್ರಪ್ಪ, ವೀರಶೇಖರರೆಡ್ಡಿ, ಶ್ರೀನಿವಾಸಮೋತ್ಕರ್, ಮಲ್ಲನಗೌಡ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಸವಿತಬಾಯಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ರತ್ನಮ್ಮ, ಶರಣಂ ಅಯ್ಯಪ್ಪ ಸೇವಾ ಟ್ರೆಸ್ಟ್ ಅಧ್ಯಕ್ಷರು ಹನುಮಂತು, ಬಿ.ಎಂ.ಎರ್ರಿಸ್ವಾಮಿ, ಬಿ.ನಾಗರಾಜು, ರಾಮಾಂಜಿನಿ, ದುರುಗಣ್ಣ, 21ನೇ ವಾರ್ಡ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.