ಲೋಕದರ್ಶನ ವರದಿ
ಬಳ್ಳಾರಿ 19: ಲೋಕಸಭಾ ಚುನಾವಣಾ-2019ರಲ್ಲಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ನಿಧನ ಹೊಂದಿದ 3 ಜನ ನೌಕರರ ಕುಟುಂಬದ ವಾರಸುದಾರರಿಗೆ ಪ್ರಭಾರ ಜಿಲ್ಲಾಧಿಕಾರಿ ಕೆ.ನಿತೀಶ್ ಅವರು ಪರಿಹಾರಧನ ವಿತರಿಸಿದರು.
ಸಿರಗುಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ರಮೇಶ ಗುರುಸಿದ್ದಪ್ಪ ನಿಧನರಾದ ಪ್ರಯುಕ್ತ ಸದರಿಯವರ ಪತ್ನಿ ಬಿ.ಮಂಜುಳಾ ಅವರಿಗೆ 15ಲಕ್ಷ ರೂ.ಗಳ ಪರಿಹಾರಧನವನ್ನು ಪ್ರಭಾರ ಜಿಲ್ಲಾಧಿಕಾರಿಗಳಾದ ಜಿಪಂ ಸಿಇಒ ಕೆ.ನಿತೀಶ್ ಅವರು ವಿತರಿಸಿದರು.
ಗುಡೇಕೋಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಎಚ್.ದೇವಿಂದ್ರಪ್ಪ ಅವರು ಚುನಾವಣಾ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ಹಿನ್ನೆಲೆ ಅವರ ವಾರಸುದಾರರಾದ ಪತ್ನಿ ಚನ್ನಮ್ಮ ತಿಮ್ಮನಹಳ್ಳಿ ಅವರಿಗೆ 10 ಲಕ್ಷ ರೂ.ಪರಿಹಾರ ಧನವನ್ನು ವಿತರಿಸಲಾಯಿತು.
ಚುನಾವಣಾ ಸಂದರ್ಭದಲ್ಲಿದ್ದಾಗಲೇ ನಿಧನರಾದ ಕಲ್ಲಹಳ್ಳಿ ಗ್ರಾಪಂ ಪಿಡಿಒ ವೆಂಕಟಲಕ್ಷ್ಮೀ ಅವರ ವಾರಸುದಾರರಾದ ಪತಿ ಜೆ.ಬಸವರಾಜು ಮತ್ತು ಮಕ್ಕಳಿಗೆ ರೂ.15ಲಕ್ಷಗಳ ಪರಿಹಾರ ಧನವನ್ನು ಪ್ರಭಾರ ಜಿಲ್ಲಾಧಿಕಾರಿಗಳು ವಿತರಿಸಿದರು. ಇದೇ ಸಂದರ್ಭದಲ್ಲಿ ಸಾಂತ್ವಾನ ಸಹ ಹೇಳಿದರು.