ಬಳ್ಳಾರಿ 04: ತುಂಗಾಭದ್ರ ಜಲಾಶಯದ ಕಾಲುವೆಗಳ ನವೀಕರಣ ಮಾಡಲಾಗುತ್ತಿದ್ದು, ಇದಕ್ಕಾಗಿ ತಾಂತ್ರಿಕ ಅಧಿಕಾರಿಗಳನ್ನು ನೇಮಕ ಮಾಡಿ ಗುಣಮಟ್ಟವನ್ನು ಪರಿಶೀಲಿಸಲಾಗುವುದು ಮತ್ತು ರೈತರಿಗೆ ನೀರಿನ ವಿಷಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತುಂಗಾಭದ್ರ ಮಂಡಳಿಯ ಸಲಹಾ ಸೂಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1953ರ ತುಂಗಾಭದ್ರ ವಿನ್ಯಾಸವನ್ನು ಇದುವರೆಗೆ ಬದಲಾವಣೆ ಮಾಡಿರುವುದಿಲ್ಲ, ಅಂತರಾಜ್ಯ ಜಲಾಶಯವಾಗಿರುವುದರಿಂದ ಸದ್ಯ ನೂತನ ವಿನ್ಯಾಸದಂತೆ ರೈತರಿಗೆ ಸಮರ್ಪಕವಾಗಿ ನೀರು ಕೊಡಿಸಲು ಪ್ರಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ಅವರು ನೀಡಿದರು.
ರೈತರ ಜಮೀನಿಗೆ ಕಾಲುವೆ ಹಾಗೂ ಉಪ ಕಾಲುವೆಗಳ ಮೂಲಕ ಸಮರ್ಪಕವಾಗಿ ನೀರು ಹರಿಸಲು ಕ್ರಮಕೈಗೊಳ್ಳವಂತೆ ಸಂಬಂಧಪಟ್ಟ ತುಂಗಾಭದ್ರ ಮಂಡಳಿ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ರೈತರಿಗೆ ನೀರು, ಕಾಲುವೆ ಹಾಗೂ ನೂತನ ವಿನ್ಯಾಸದ ಬಗ್ಗೆ ಯಾವುದೇ ತಕರಾರು ಇಲ್ಲ, ಈ ವಿನ್ಯಾಸವು ಸಕರ್ಾರದ ನಿದರ್ೇಶನದಂತೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಹಾಗಾಗೀ ರೈತರು ನಮ್ಮ ಜೊತೆ ಕೈಜೋಡಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ, ವಿಜಯನಗರ ಕಾಲವೆ ಹಾಗೂ ಕಂಪ್ಲಿ ವಿಭಾಗದ ಕಾಲುವೆಗಳ ಕಾಮಗಾರಿ ಸದ್ಯ ಪ್ರಾರಂಭಿಸಲಾಗಿದೆ. ಈ ಕಾಲುವೆಗಳ ಹೂಳು ತೆರವುಗೊಳಿಸಲಾಗುತ್ತಿದ್ದು, ಕಾಂಕ್ರೇಟ್ ಹಾಕುವ ಕೆಲಸವನ್ನು ಸದ್ಯದಲ್ಲೆ ಪ್ರಾರಂಭಿಸಿ ಕಾಲುವೆಗಳಿಗೆ ನೀರು ಬರುವುದರೊಳಗೆ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಕೊಡಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.
ಕಳೆದ ಎಂಟು ವರ್ಷಗಳಿಂದ ಸರಿಯಾದ ಮಳೆಯಿಲ್ಲದೇ ಈ ಭಾಗದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಜಲಾಶಯದಲ್ಲಿ ಸಿಗುವಷ್ಟು ನೀರನ್ನು ನಮ್ಮ ಅಸ್ತಿ ಎಂದುಕೊಂಡು ಸಂರಕ್ಷಿಸಿ ಉಪಯೋಗಿಸೋಣ, ಮುಂದೆ ಬರುವ ಸಮಸ್ಯೆಗಳನ್ನು ರೈತರ ಅಧಿಕಾರಿಗಳು ಸೇರಿ ಸೌಹಾರ್ದಯುತವಾಗಿ ಎದುರಿಸಿ ತುಂಗಾಭದ್ರ ಜಲಾಶಯವನ್ನು ಅಭಿವೃದ್ಧಿಗೊಳಿಸೋಣ ಎಂದರು.
ವಿವಿಧ ರೈತಪರ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ್ ನಿಂಬರಗಿ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ತುಂಗಾಭದ್ರ ಜಲಾಶಯದ ಮುಖ್ಯ ಅಭಿಯಂತರ ಮಂಜಪ್ಪ ಸೇರಿದಂತೆ ತುಂಗಾಭದ್ರ ಜಲಾಶಯದ ಅಧಿಕಾರಿಗಳು ಹಾಗೂ ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.