ಬಳ್ಳಾರಿ : ಅಡ್ಡಪಲ್ಲಕ್ಕಿ ಮಹೋತ್ಸವ: ಉಚಿತ ಸಾಮೂಹಿಕ ವಿವಾಹ

ಲೋಕದರ್ಶನ ವರದಿ

ಬಳ್ಳಾರಿ 22: ಅಭಿನವ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿಗಳಿಂದ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ನೀಡಲಾಯಿತು. ರಂಭಾಪುರಿಶ್ರೀ, ಉಜ್ಜೆಯಿನಿಶ್ರೀ, ಶೈಲಾಶ್ರೀ, ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವವು ಮಂಗಳ ವಾದ್ಯಗಳೊಂದಿಗೆ ನೂರಾರು ಮಹಿಳೆರ ಕಳಸ ಕುಂಭಗಳೊಂದಿಗೆ ಅಸಂಖ್ಯಾತ ಭಕ್ತ ಸಮೂಹದಲ್ಲಿ ಜರಿಗಿತು. ನಂತರದಲ್ಲಿ 19 ಜೋಡಿ ವಧು-ವರರಿಗೆ ಅಭಿಜಿನ್ ಲಗ್ನದ ಶುಭ ಮೂಹುರ್ತದಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ವಿವಾಹಗಳು ಜರಿಗಿದವು.

ನಂತರದಲ್ಲಿ ಧಾರ್ಮಿಕ  ಸಭೆಯನ್ನು ಕಾಪು ರಾಮಚಂದ್ರ ರೆಡ್ಡಿ ಶಾಸಕರು ರಾಯದುರ್ಗ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾದ ಅಧ್ಯಕ್ಷರು ಆಂಧ್ರ ಪ್ರದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ ವಧು- ವರರು ಪರಸ್ಪರ ಅತ್ತೆ ಮಾವದಿರನ್ನು ತಂದೆ ತಾಯಿಗಳತೆ ಕಾಣಬೇಕು ಕುಟುಂಬ ನಿಯಂತ್ರಣ ಅನುಸರಿಸಿ ಎಂದು ಸಲಹೆ ನೀಡಿದರು. 

ಪ್ರಸ್ತಾವಿಕವಾಗಿ ಸಂಘಟನೆ ಅಧ್ಯಕ್ಷರಾದ ಜೆ.ಎಮ್. ಬಸವರಾಜ ಸ್ವಾಮಿ ಮಾತಾನಾಡುತ್ತಾ ಕಳೆದ 7 ವರ್ಷಗಳಿಂದಲು ಉಚಿತ ಸಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದು ಪಂಚ ಪೀಠಾಧೀಶ್ವರನ್ನು ಈ ಗ್ರಾಮಕ್ಕೆ ಕರಿಸಿ  ಅಡ್ಡ ಪಲ್ಲಕ್ಕಿ ಮಹೂತ್ಸವದೊಡನೆ ಜಗದ್ಗುರುಗಳ ಸಮ್ಮುಖದಲ್ಲಿ ವಿವಾಹಗಳನ್ನು ಮಾಡಬೇಕೆಂಬ ಮಹಾದಾಸೆ ಎಂದರು.  

ಸಾನಿಧ್ಯವಹಿಸಿದ ರಂಭಾಪುರಿ ವೀರ ಸೋಮೆಶ್ವರ ಜಗದ್ಗುರುಗಳು ಮಾತನಾಡಿ ಇಂದಿನ ದಿನ ಬೆಳಗಲ್ ಗ್ರಾಮದಲ್ಲಿ ಸುವರ್ಣಕ್ಷರದಲ್ಲಿ ಬರೆದಿಡುವ ದಿನ 4 ಜನ ಪಂಚ ಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೂತ್ಸವ ಇ ಪುಟ್ಟ ಗ್ರಾಮದಲ್ಲಿ ನಡೆದಿರುವುದು ಎಲ್ಲಾ ಜಗದ್ಗುರುಗಳಿಗೆ ಬಹಳ ಸಂತೋಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಯಾಣಸ್ವಾಮಿಗಳು ನಂದಿಪುರ ಕೆ.ಅಯ್ಯನಹಲ್ಲಿ ಶಾನವಾಸಪುರ ಕುರುಗೂಡು ಹಚ್ಚೂಳ್ಳಿ ಹರಗಿನಡೋಣಿ ಜಂಗಮರ ಹೊಸಳ್ಳಿ ಮುಂತಾದ ಸ್ವಾಮೀಜಿಗಳು.

ಹಾಗೂ ಅಲ್ಲಂ ಪ್ರಶಾಂತ ಮಸಿದಿಪುರ ಸಿದ್ದರಾಮನಗೌಡ, ಉಮಾಶಂಕರ ಷಡಕ್ಷರಿಸ್ವಾಮಿ ಕೆ.ಎಮ್. ಪಾರ್ವತಮ್ಮ, ಎಸ್ ಮಲ್ಲನಗೌಡ,ಬಲಗುಡ್ಡ ಬಸವರಾಜಪ್ಪ, ಮಲ್ಲಯ್ಯ ಸ್ವಾಮಿ,ಭೋಜನಾಯ್ಕ, ಡಾ.ಸತೀಶ ಹೀರೆಮಠ ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಕೆ.ಎಮ್ ವಸಂತಮ್ಮ ಕೊಟ್ರೆಶ್ ಸ್ವಾಮಿ ಉಪಸ್ಥಿತರಿದ್ದರು.

ಡಾ.ವಿಕ್ರಮ್ ಪಿ.ಹೀರೆಮಠ ಸಹಾಯಕ ಪ್ರಾಧ್ಯಾಪಕರು ಕೊಟ್ಟೂರು ಸ್ವಾಮಿ ಬಿ.ಇಡಿ ಕಾಲೇಜು ಕಾರ್ಯಕ್ರಮವನ್ನು ನಿರೂಪಿಸಿದರು. ಶಿವಾನಂದ ಕೆ.ಎಮ್ ಸಹಾಯಕ ಪ್ರಾಧ್ಯಾಪಕರು ಶ್ರೀ ಸತ್ಯಂ ಬಿ.ಇಡಿ ಕಾಲೇಜು ಸ್ವಾಗತಿಸಿದರು.