ಬಳ್ಳಾರಿ 14: ಕೊನೆಯ ಉಸಿರುವ ತನಕ ಕಲಿಕೆ ನಿಲ್ಲಬಾರದು ಇಂದು ಜ್ಞಾನವು ಇಂಟರ್ನೆಟ್ ಮೂಲಕ, ಲ್ಯಾಪ್ಟಾಪ್ ಮತ್ತು ಮೋಬಲ್ನಲ್ಲಿ ದೊರೆಯುತ್ತದೆ. ಅದನ್ನು ಉತ್ತಮವಾಗಿ ಬಳಕೆ ಮಾಡಬೇಕು. ಆ ಮೂಲಕ ಇತ್ತೀಚಿನ ಸಂಗತಿಗಳೊಂದಿಗೆ ಸದಾ ನಿವು ನವಿಕರಿಸಿಕೊಳ್ಳುತ್ತಿರಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣಮಂಡಳಿ ನವದೆಹಲಿಯ ಪ್ರೋ.ಅನಿಲ್.ಡಿ.ಸಹಸ್ರಬುಧೆ ತಿಳಿಸಿದರು.
ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಕಾರ್ಯಕ್ರಮ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘಟಕೋತ್ಸವದ ಭಾಷಣವನ್ನು ಮಾಡಿದರು. ಜಗತ್ತಿನ ಇತರ ರಾಷ್ಟ್ರಗಳಿಗಿಂತ ಯುವ ಶಕ್ತಿಗಳಲ್ಲಿ ಭಾರತ ಮುಂದೆ ಇದ್ದು ಉನ್ನತ ಶಿಕ್ಷಣದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದ್ದು ಸಮಾನತೆ ಮತ್ತು ಗುಣಮಟ್ಟದ ಶಿಕ್ಷಣದ ಯೋಜನೆ ಹೊಂದಬೇಕಾಗಿದೆ. ಪ್ರತಿಯೊಬ್ಬ ಪದವಿದರರಿಗೆ ಉದ್ಯೋಗ ಸಿಗುವ ಶಿಕ್ಷಣ ನೀಡುವುದು ವಿ.ವಿಗಳ ಗುರಿಯಾಗಿರಬೇಕೆಂದರು.
ಉತ್ತಮ ಸಂವಾಹನ ಕೌಶಲ್ಯ, ಶಿಸ್ತು, ಸಮಸ್ಯೆ ಪರಿಹಾರ ಮಾಡುವ ಸಾಮಥ್ರ್ಯ ನಿರ್ಣಾಯಕ ಚಿಂತನೆ, ವಿಶ್ಲೇಷಣೆಯಂತಹ ಸಾಮಥ್ರ್ಯದ ಶಿಕ್ಷಣ ಇನ್ನು ದೊರೆಯುತ್ತಿಲ್ಲ. ಇದುವೇ ಶಿಕ್ಷಣದ ಬಹುದೊಡ್ಡ ಕೊಡುಗೆಯಾಗಿದೆ. ಅದಕ್ಕಾಗಿ ಕಲಿಕೆ ಸಂದರ್ಭದಲ್ಲಿಯೇ ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆಯ ನಡುವೆ ಸಂವಾಹನ ಮತ್ತು ಸಹಭಾಗಿಕತ್ವದ ಕಲಿಕೆಯಾಗಬೇಕು.
ಈ ಮೂಲಕ ಕೇಂದ್ರ ಸರಕಾರದ ಮೆಕ್ ಇನ್ ಇಂಡಿಯಾ, ಸ್ಮಾರ್ಟ ಆಫ್ ಇಂಡಿಯಾ ಯೋಜನೆಗಳ ಪ್ರಯೋಜನಗಳಾಗಲಿವೆ ಎಂದರು. ಇಂದು ಉಪಕರಣಗಳು ಮತ್ತು ತಂತ್ರಗಳ ಬಳಕೆ ಇನ್ನು ಸಮರ್ಪಕವಾಗಿಲ್ಲ. ಅದಕ್ಕಾಗಿ ನಿರಂತರ ಕಲಿಕೆಯ ಮೂಲಕ ತಂತ್ರಜ್ಞಾನ ಸಂಪೂರ್ಣ ಬಳಕೆಗೆ ವಿ.ವಿಗಳು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸಬೇಕು. ಜಗತ್ತಿನಲ್ಲಿ ಕ್ರಾಂತಿ ಸೃಷ್ಟಿಸುವ ಆರ್ಥಿಕ ಬೆಳವಣಿಗೆಗೆ ಜ್ಞಾನವೇ ಮೂಲ ಆಧಾರವಾಗಿದೆ. ಅದಕ್ಕಾಗಿ ನೀವು ಕನಸು ಮತ್ತು ಆಕಾಂಕ್ಷಗಳನ್ನು ಕೈಬಿಡದೇ ಯಶಸ್ಸನ್ನು ಪಡೆಯಬೇಕು ನಿಮ್ಮ ಗುರಿಯನ್ನು ಉತ್ಸಾಹ ಮತ್ತು ಬದ್ದತೆಯೊಂದಿಗೆ ಅನುಸರಿಸಿ ಉತ್ತಮ ಆರೋಗ್ಯದೊಂದಿಗೆ ಕೆಲಸ ಮಾಡುವ ಸಾಮಥ್ರ್ಯ, ನಿಮ್ಮ ದೇಹ ಮತ್ತು ಆತ್ಮಗಳಲ್ಲಿ ಸಾಮರಸ್ಯ ಮತ್ತು ಪರಿಪೂರ್ಣತೆ ಪಡೆಯಿರಿ. ಆಗ ಮಾತ್ರ ನಿಮ್ಮ ಕನಸುಗಳು ಹೀಡೆರಲು ಸಾದ್ಯ. ಈ ದೇಶದ ಅಭಿವೃದ್ದಿ ಹೊಂದಲು ನಿಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು. ಬಾರದ
ರಾಜ್ಯಪಾಲರು, ಸಚಿವರು:
ವಿಶ್ವವಿದ್ಯಾಲಯದ ಘಟಿಕೋತ್ಸವ ಆರಂಭಕ್ಕೂ ಮುನ್ನ ಕುಲಪತಿಗಳಾಗಿ ಎಲ್ಲರೂ ವಿಜಯ ನಗರ ಅರಸರ ಪೇಟವನ್ನು ದರಿಸಿ ಕುಲಸಚಿವರು ದಂಡವನ್ನು ಇಡಿದುಕೊಂಡು ಘಟಿಕೋತ್ಸವದ ಮೆರವಣಿಗೆ ಸಾಗಿಬಂತು. ಮೌಲ್ಯಮಾಪನ ಕುಲಸಚಿವ ಪ್ರೋ.ರಮೇಶ್ ಅವರು ಸ್ವಾಗತ ಅಥಿತಿಗಳ ಪರಿಚಯದಿಂದ ಆರಂಭಗೊಂಡ ಸಮಾರಂಭದಲ್ಲಿ ಕುಲಪತಿ ಡಾ.ಸುಬಾಸ್ ಅವರು ವಿ.ಎಸ್.ಕೆ.ವಿ.ವಿಯ ಬೆಳವಣಿಗೆಯ ಬಗ್ಗೆ ವರದಿವಾಚನ ಮಾಡಿ ಇನ್ನೂ ಕೆಲವೇ ದಿನಗಳಲ್ಲಿ ಯು.ಜಿ.ಸಿಯಿಂದ ತಜ್ಞರ ಸಮಿತಿ ವಿ.ವಿಗೆ ಭೇಟಿ ನೀಡಲಿದ್ದು ವಿ.ವಿಗೆ 12ಬಿ ಮಾನ್ಯತೆ ದೊರೆಯಲಿದೆ. ಆ ಮೂಲಕ ವಿ.ವಿ ಅಭಿವೃದ್ದಿಗೆ ಹೆಚ್ಚಿನ ದನ ಸಹಾಯ ದೊರೆಯಲಿದೆ ಎಂದು ತಿಳಿಸಿದರು. ಆರು ವರ್ಷಗಳಲ್ಲಿ ವಿ.ವಿ ಸ್ಥಾಪನೆಯಿಂದ ಸ್ನಾತಕೊತ್ತರ ಶಿಕ್ಷಣ ಪಡೆದವರ ಸಂಖ್ಯೆಯಲ್ಲಿ ಶೇ.89 ರಷ್ಟು ಹೆಚ್ಚಿದೆ ಎಂದು ವಿವರಿಸಿರು.
ರಾಜ್ಯಪಾಲರಿಲ್ಲದ ಕಾರಣ ಅವರ ಸ್ಥಾನ ಅಲಂಕರಿಸಿದ ಕುಲಪತಿಗಳು ಪಿ.ಹೆಚ್.ಡಿ ಮತ್ತು ವಿವಿದ ಪದವಿಗಳಲ್ಲಿ ರ್ಯಾಂಕ್ ಚಿನ್ನದ ಪದಕ ಪಡೆದ ವಿದ್ಯಾಥರ್ಿಗಳಿಗೆ ಪದವಿ ಪ್ರಧಾನ ಮಾಡಿದರು. ಜೊತೆಗೆ ರಾಜಯೋಗಿನಿ ಪರವಾಗಿ ಗೌರವ ಡಾಕ್ಟರೆಟ್ ಪಡೆದ ಬಿ.ಕೆ.ಮೃತ್ಯುಂಜಯ ಅವರು ಮಾತನಾಡುತ್ತಾ ಆಧ್ಯಾತ್ಮಿಕತೆಯಿಂದ ಜನರು ದೂರವಾಗುತ್ತಿರುವುದು ಮಾತಲ್ಲಿ ಮೌಲ್ಯಗಳಿಲ್ಲದಂತಾಗಿದೆ. ಅದಕ್ಕೆ ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ ಮುಖಂಡರುಗಳು ಆಡುತ್ತಿರುವ ಮಾತುಗಳೇ ಸಾಕ್ಷಿಗಳಾಗಿವೆ. ಮೌಕಿಕ ಮೌಲ್ಯಗಳು ಕುಸಿಯುತ್ತಿದ್ದು. ವಿ.ವಿಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಪ್ರಯೋಗಾಲಯಗಳಾಗ ಬೇಕೆಂದರು. ಈ ಸಂದರ್ಭದಲ್ಲಿ ಕುಲಸಚಿವೆ ಪ್ರೋ.ತುಳಸಿಮಾಲ ಮತ್ತು ಸಿಂಡಿಕೇಟ್ ಸದಸ್ಯರು ಹಾಗೂ ವಿವಿದ ವಿಭಾಗದ ಡೀನ್ಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.