ಬಳ್ಳಾರಿ: ಸಂಭ್ರಮದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗದಿಂದ ಆರೋಗ್ಯಗಳಿಸಿದರೆ ಸಂಪತ್ತು ಗಳಿಸಿದಂತೆ: ಶಿವಪ್ರಸಾದ

ಲೋಕದರ್ಶನ ವರದಿ

ಬಳ್ಳಾರಿ 21: ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಇಂದು 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ ಸಭಾಂಗಣದಲ್ಲಿ ಮುಂಜಾನೆ 7 ಗಂಟೆಗೆ ಕಾರ್ಯಕ್ರಮವನ್ನು ಪ್ರಭಾರ ಕುಲಪತಿ ಪ್ರೊ.ಕೆ.ಅರ್.ವೇಣುಗೋಪಾಲ ರೆಡ್ಡಿ, ಜ್ಯೋತಿ ಬೆಳಗಿಸುವದರ ಮೂಲಕ ಪ್ರಾರಂಭಿಸಿದರು. 

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಪ್ರೊ.ಎಚ್.ಕೆ.ಶಿವಪ್ರಸಾದ ರಸಾಯನಶಾಸ್ತ್ರ ವಿಭಾಗ ಅತಿಥಿಗಳಾಗಿ ಭಾಗವಹಿಸಿ ಇಂದಿನ ಪ್ರಸ್ತುತತೆಯಲ್ಲಿ ಆರೋಗ್ಯ ಪ್ರತಿಯೊಬ್ಬರಿಗೆ ಅಮೂಲ್ಯವಾಗಿದೆ ಅದನ್ನು ಗಳಿಸಿದರೆ ದೊಡ್ಡ ಸಂಪತ್ತು ಗಳಿಸಿದಂತೆ ಎಂದು ಹೇಳಿದರು. 

ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ರಾಜಶೇಕರ್ ಜೆ.ಸಿ. ರಾಮಕೃಷ್ಣ ಆಶ್ರಮ ಇವರು ಆಹಾರ, ಆರೋಗ್ಯ ಹಾಗೂ ಜೀವನ ಶೈಲಿಯ ಕುರಿತು ಮಾತನಾಡಿ ವಿಧ್ಯಾಥರ್ಿಗಳಿಗೆ ಆಹಾರದಿಂದ ಆರೋಗ್ಯ ಆರೋಗ್ಯದಿಂದ ಜೇವನದ ಸಾರ್ಥಕತೆ ಗಳಿಸುವ ಮಾತುಗಳನ್ನು ಹೇಳಿದರು. 

ಕಾರ್ಯಕ್ರಮ ಸಂಯೋಜನೆಯನ್ನು ಇದೇ ಮೊದಲನೇ ಬಾರಿಗೆ ಆರಂಭವಾಗಿರುವ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ ದವರು ಸಂಯೋಜಿಸಿದವರು. ಸಂಯೋಜಕರಾದ ಡಾ.ಹನುಮಂತಯ್ಯ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನು ಹೇಳುತ್ತಾ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿರುವ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮೂಲಕ ವಿದ್ಯಾರ್ಥಿಗಳಿಗೆ  ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ ಹಾಗೂ ಸರ್ವತೋಮುಖ ವ್ಯಕ್ತಿತ್ವ ವಿಕಾಸ ವಾಗುವಂತೆ ಶಿಕ್ಷಣ ನೀಡಲು ಬಯಸುವದಾಗಿ ತಿಳಿಸಿದರು ಮತ್ತು ಮುಂದಿನ ದಿನಗಳಲ್ಲಿ 'ಯೋಗ' ಒಂದು ವಿಷಯವನ್ನಾಗಿ ಬೇರೆಬೇರೆ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಸುವದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿತ್ತಧಿಕಾರಿಗಳು    ಭಾಗವಹಿಸಿದರು,       ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗ ಪ್ರದರ್ಶನವು ಈ ವಿಶ್ವವಿದ್ಯಾಲಯದ ಪ್ರಾದ್ಯಾಪಕರಿಗೆ, ವಿದ್ಯಾರ್ಥಿಗಳಿಗೆ  ಬೋಧಕೇತರ ಸಿಬ್ಬಂದಿಯವರಿಗೆ ದೈಹಿಕ ಶಿಕ್ಷಣ ವಿಭಾಗ  ಸಹಾಯಕ ಪ್ರದ್ಯಾಪಕ ಶಶಿಧರ ಕೆಲ್ಲುರ ನಡೆಸಿಕೊಟ್ಟರು. 

ಪ್ರಾರ್ಥನಾ ಗೀತೆಯನ್ನು ಆಂಗ್ಲ ಅಧ್ಯಯನ ವಿಭಾಗದ ವಿದ್ಯಾರ್ಥಿನಿ  ಶಾಂತವ್ವ ನಡೆಸಿಕೊಟ್ಟರು, ಸಂಪತ ಕುಮಾರ, ಸಹಾಯಕ ಪ್ರಾದ್ಯಾಪಕರು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿಕೊಟ್ಟರು, ಡಾ. ಕವಿತಾ ಸಂಗನಗೌಡ ಎಮ್, ಅತಿಥಿ ಉಪನ್ಯಾಸಕರು ದೈಹಿಕ ಶಿಕ್ಷಣ ಮತ್ತು  ಕ್ರೀಡಾ ವಿಜ್ಞಾನ ವಿಭಾಗ ವಂದಿಸಿದರು.