ಬಳ್ಳಾರಿ 07: ಬಳ್ಳಾರಿ ಲೋಕಸಭಾ ಚುನಾವಣೆ ಅತ್ಯಂತ ಶಾಂತಿಯುತವಾಗಿ ಜರುಗುವ ನಿಟ್ಟಿನಲ್ಲಿ ಸಕಲ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರೊಂದಿಗೆ ನಡೆದ ಸಭೆಯಲ್ಲಿ ಅವರು ತಮ್ಮ ಇಲಾಖೆ ಕೈಗೊಂಡಿರುವ ಸಿದ್ಧತೆಗಳನ್ನು ವಿವರಿಸಿದರು.
ನಮ್ಮ ಜಿಲ್ಲೆಯಲ್ಲಿ 6 ಸಬ್ ಡಿವಿಜನ್, 12 ಸರ್ಕಲ್ಸ್, 39 ಪೊಲೀಸ್ ಸ್ಟೇಶನ್ಗಳು ಬರುತ್ತವೆ. ಚುನಾವಣೆಗೆ ಡಿಎಸ್ಪಿ, ಸಿಪಿಐ,ಪಿಐ, ಪಿಎಸ್ಐ, ಪೊಲೀಸ್ ಮುಖ್ಯ ಪೇದೆ, ಹೋಮ್ಗಾಡ್ಸರ್್ ಸೇರಿದಂತೆ ಒಟ್ಟು 3496 ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಆದರೇ ನಮಗೆ 1204 ಸಿಬ್ಬಂದಿ ಕೊರತೆಯಾಗಲಿದ್ದು, ಅದನ್ನು ಮೊದಲ ಹಂತದಲ್ಲಿ ಚುನಾವಣಾ ನಡೆಯಲಿರುವ ಪ್ರದೇಶಗಳಿಂದ ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಈಗಾಗಲೇ ಸ್ಥಾಪಿಸಲಾಗಿರುವ 35 ಚೆಕ್ಪೋಸ್ಟ್ಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. 2013ರಿಂದ ಇತ್ತೀಚೆಗೆ ನಡೆದ ಲೋಕಸಭಾ ಉಪಚುನಾವಣೆಯವರೆಗೆ ದಾಖಲಾದ ಪ್ರಕರಣಗಳಲ್ಲಿ ಯಾವುದೂ ಕೂಡ ಪೆಂಡಿಂಗ್ ಉಳಿದಿಲ್ಲ ಎಂದು ವಿವರಿಸಿದ ಅವರು,ಭಯಗ್ರಸ್ಥ ಪ್ರದೇಶಗಳಲ್ಲಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಮತದಾರರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಭಯವುಂಟು ಮಾಡುತ್ತಿದ್ದ ವ್ಯಕ್ತಿಗಳಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಸಿಅರ್ಪಿಎಫ್ ತಂಡ ಭಯಗ್ರಸ್ತ ಪ್ರದೇಶಗಳಲ್ಲಿ ರೂಟ್ ಮಾಚರ್್ ಪ್ರತಿನಿತ್ಯ ಮಾಡುತ್ತಿದೆ ಎಂದರು.
11.70 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 47.76ಲಕ್ಷ ರೂ.ಗಳ ಮೌಲ್ಯದ ಕಾರ್,ಮೊಬೈಲ್, ಗೋಲ್ಡ್ ಸೇರಿದಂತೆ ಇನ್ನೀತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಿಕ್ಕರ್ಗೆ ಸಂಬಂಧಿಸಿದಂತೆ ಇದುವರೆಗೆ 88 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಜಿಪಂ ಸಿಇಒ ಕೆ.ನಿತೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಶೇಕಡವಾರು ಮತದಾನ ಹೆಚ್ಚಳ ಹಾಗೂ ನೈತಿಕ ಮತದಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸಂಕಲ್ಪ ಪತ್ರ, ಮನರಂಜನಾ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ, ಜಾಥಾ, ಕವಿಗೋಷ್ಠಿ/ನಗೆ ಚಟಾಕಿ, ಜಿಂಗಲ್ಸ್ , ಕಾಲೇಜುಗಳಲ್ಲಿ ಮತದಾನ ಜಾಗೃತಿ, ಕರಪತ್ರಗಳ ವಿತರಣೆ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.