ಲೋಕದರ್ಶನ ವರದಿ
ಬಳ್ಳಾರಿ (ಹಂಪಿ) 22: ವಿಭಾಗಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಚರ್ಚಾ ಮತ್ತು ಸಂವಾದಗಳನ್ನು ಮಾಡುವ ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಲು ಸಾಧ್ಯ, ಆ ಮೂಲಕ ಭವಿಷ್ಯದಲ್ಲಿ ಉತ್ತಮ ವಾಗ್ಮಿಗಳಾಗಬಹುದು ಮತ್ತು ಉತ್ತಮ ಸಂಶೋಧಕರಾಗಲು ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ.ಸ.ಚಿ.ರಮೇಶ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಹಾಲುಮತ ಮಂಟಪ-1 ಉದ್ಘಾಟನಾ ಕಾರ್ಯಕ್ರಮವನ್ನು ಮಾನ್ಯ ಕುಲಪತಿ ಡಾ.ಸ.ಚಿ.ರಮೇಶ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಂಟಪ ಎನ್ನುವ ವಿಚಾರಧಾರೆಯನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದರು. ಅವರು ವಚನ ಸಾಹಿತ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾಯಕದಲ್ಲಿ ಅನ್ಯ ಜಾತಿಗಳ ಜನರನ್ನು ಒಗ್ಗೂಡಿಸಿ ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಹಾಗೂ ಸಮಾನತೆಯನ್ನು ಕಾಪಾಡಲು ಶ್ರಮಿಸಿದರು. ಎಂದು ನುಡಿದರು.
ಹಾಲುಮತ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಕುರುಬ ಸಮುದಾಯ: ಸಾಂಸ್ಕೃತಿಕ ಅನನ್ಯತೆ ಎನ್ನುವ ವಿಷಯ ಮಂಡನೆ ಮಾಡಿದ ದಾವಣಗೆರೆಯ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಪಾಟೀಲ್ ಮಾತನಾಡಿ ಹಾಲುಮತ ಸಮುದಾಯದ ಜನರು ಒಂದು ನಿರ್ದಿಷ್ಟ ಸ್ಥಳದ ವಾಸಿಗರಲ್ಲ, ಇವರು ಅಲೆಮಾರಿ ಜೀವನ ಸಾಗಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅನೇಕ ಕಸುಬು(ವೃತ್ತಿ)ಗಳನ್ನು ಮಾಡುವ ಮೂಲಕ ಹೊಸ ಹೊಸ ಉಪಜಾತಿಗಳಾದ ಅಂಬಿಗ, ಗಂಗಾಮತ, ಹಾಲುಮತ, ಕುರುಬ, ಕುಂಚಿಟಿಗ, ಪಂಚಮಸಾಲಿ ಸೇರಿದಂತೆ ಇತರೆ 40ಕ್ಕೂ ಹೆಚ್ಚು ಉಪಜಾತಿಗಳು ಹುಟ್ಟಿಕೊಂಡವು ಎನ್ನುವ ವಿಚಾರವನ್ನು ತಿಳಿಸಿದರು. ಇಂತಹ ವಿಚಾರಗಳನ್ನು ಚರ್ಚಾ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹೊರತು ಬೇರೆ ಯಾವ ವಿಚಾರಗಳಿಂದಲ್ಲ. ಹಾಲುಮತ ಸಮುದಾಯ ಒಂದು ಬುಡಕಟ್ಟು ಸಮುದಾಯ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡುತ್ತ ಸಮುದಾಯಗಳ ಅಧ್ಯಯನವು ಭಾರತದಲ್ಲಿ ಅನೇಕ ಅಧ್ಯಯನ ಶಿಸ್ತಿನ ಮೂಲಕ ನಡೆಯುತ್ತದೆ. ಸಮುದಾಯಗಳ ಅಧ್ಯಯನವು ಭಾಷಿಕವಾಗಿ, ಸಾಂಸ್ಕೃತಿಕವಾಗಿ, ಕಲೆ ಹಾಗೂ ಧಾಮರ್ಿಕ ಹಿನ್ನೆಲೆಯಲ್ಲಿ ಸಾಗುತ್ತಿದ್ದು, ಸಮುದಾಯದ ಮಹತ್ವ ಹಾಗೂ ಮೂಲವನ್ನು ತಿಳಿಯಲು ಪ್ರಯತ್ನಿಸುತ್ತಿವೆ. ಇಂತಹ ಅಧ್ಯಯನಗಳಿಗೆ ಚಚರ್ಾ ವೇದಿಕೆಗಳು ದಿಕ್ಸೂಚಿಯಾಗಿವೆ. ಚರ್ಚಾ ಕಾರ್ಯಕ್ರಮಗಳು ನಿಂತ ನೀರಾಗದೆ ನಿರಂತರವಾಗಿ ಜರಗುವ ಮೂಲಕ ಯಶಸ್ವಿಯಾಗಲೆಂದು ಹಾರೈಸಿದರು.
ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ಕಳೆದ 10 ವರ್ಷಗಳಿಂದ ಹಾಲುಮತ ಅಧ್ಯಯನ ಪೀಠವು ಚರ್ಚೆ ಕಾರ್ಯಕ್ರಮ, ಸಂವಾದ, ಪ್ರಕಟಣೆಗಳ ಮೂಲಕ ಜನರಿಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು
ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿ ಬಾಣದ ಬೀರಪ್ಪ ಪ್ರಾಥರ್ಿಸಿದರು. ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂತೋಷ್ ಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸ್ವಾಮಿಲಿಂಗ ಹಾವಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ.ಕೇಶವನ್ ಪ್ರಸಾದ್, ಉಪಕುಲಸಚಿವ ಡಾ.ಎ. ವೆಂಕಟೇಶ, ಹಾಲುಮತ ಸಲಹಾ ಸಮಿತಿಯ ಸದಸ್ಯರಾದ ಎನ್.ಎಂ. ಅಂಬಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.