ಬಳ್ಳಾರಿ: ಬಸವರಾಜಗೆ ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ

ಲೋಕದರ್ಶನ ವರದಿ

ಬಳ್ಳಾರಿ 01: ಕರ್ನಾಟಕ  ಜಾನಪದ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಾಂಸ್ಕೃತಿಕ ಸಲಹಾ ಸಮಿತಿಯ ಮಾಜಿ ಸದಸ್ಯರು,ಕರ್ನಾಟಕ  ಇತಿಹಾಸ ಅಕಾಡಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕರ್ನಾಟಕ  ಏಕೀಕರಣ ಹೋರಾಟಗಾರ ಮನೆತನದಿಂದ ಬಂದಂತಹ ಟಿ.ಹೆಚ್.ಎಂ.ಬಸವರಾಜ ರವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು, ಕೇರಳ ರಾಜ್ಯ ಇವರು ದಿ: 08-06-2019 ಶನಿವಾರ ಪೂರ್ವಾಹ್ನ  10.00 ಗಂಟೆಗೆ ಜೋಡುಕಲ್ಲು ಜೆ.ಕೆ.ವಿ. ಸಭಾಂಗಣದಲ್ಲಿ ಪ್ರಧಾನ ಮಾಡುವರು. ಅಂದು ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾರ 104 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಟಿ.ಹೆಚ್.ಎಂ.ಬಸವರಾಜ ರವರಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ ಆಗುತ್ತಿರುವುದು ಇಡೀ ಬಳ್ಳಾರಿ ಜಿಲ್ಲೆಗೆ ಮತ್ತು ಕನ್ನಡ ನಾಡಿಗೆ ಸಂದ ಗೌರವ. ಇವರನ್ನು ಎಲ್ಲರೂ ಅಭಿನಂದಿಸೋಣ. ಸಾಹಿತ್ಯ ಕ್ಷೇತ್ರದಲ್ಲಿ, ಜಾನಪದ ಕ್ಷೇತ್ರದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ ಇನ್ನೂ ಅನೇಕ ಸಂಘ ಸಂಸ್ಥೆಗಳಿಗೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇರಳ ರಾಜ್ಯದ ಕಾಸರಗೋಡುನಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿರುವುದು ಸಂತಸ ತಂದಿದೆ