ಬಳ್ಳಾರಿ 15: ನಗರದ ನಲ್ಲಚರುವು ಪ್ರದೇಶದಲ್ಲಿರುವ ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಎಂಬ ಹೆಸರಿನೊಂದಿಗೆ ಆರಂಭವಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದ ನಲ್ಲಚೆರವು ಪ್ರದೇಶದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಹಿಂಭಾಗದಲ್ಲಿ ತನ್ನದೇ ಸ್ವಂತ ಕಟ್ಟಡವನ್ನು ಹೊಂದಿದೆ ಎಂದರು.
ಕಾಲೇಜಿನಲ್ಲಿ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಕಾಮಸರ್್ ವಿಭಾಗದ ಪದವಿ ಕೋರ್ಸಗಳಾದ ಬಿ.ಕಾಂ.(ಜನರಲ್), ಬಿ.ಕಾಂ. (ಕಂಪ್ಯೂಟರ್ಸ್), ಬಿ.ಕಾಂ (ಟಿಪಿಪಿ), ಕಲಾ ವಿಭಾಗದ ಕೋರ್ಸಗಳಾದ ಬಿ.ಎ. (ಹೆಚ್.ಇ.ಕೆ.),(ಹೆಚ್.ಇ.ಪಿ.), (ಹೆಚ್.ಪಿ.ಎಸ್.), (ಹೆಚ್.ಪಿ.ಇ), (ಹೆಚ್.ಇ.ಎಸ್), ವಿಜ್ಞಾನ ವಿಭಾಗದ ಕೋಸರ್್ಗಳಾದ ಬಿ.ಎಸ್.ಸಿ (ಪಿಸಿಎಂ) (ಪಿ.ಎಂ.ಸಿಎಸ್.), (ಸಿ..ಬಿ.ಝಡ್), (ಇ.ಎಂ.ಎಸ್ಟಿ) ಬಿ.ಸಿ.ಎ ಹಾಗೂ ಬಿ.ಬಿ.ಎ. ಕೋರ್ಸಗಳು ಲಭ್ಯವಿದ್ದು, ಹಾಗೆಯೇ ಈ ವರ್ಷದಿಂದ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ ಸಹ ಪ್ರಾರಂಭಿಸಲಾಗಿದೆ ಎಂದರು.
ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳು:
18 ತರಗತಿ ಕೊಠಡಿಗಳು ಈಗಾಗಲೇ ಲಭ್ಯವಿದ್ದು. 90ಥ45 ಅಡಿಗಳ ವಿಸ್ತೀರ್ಣದಲ್ಲಿ ಗ್ರಂಥಾಲಯ ಸೌಲಭ್ಯವಿದೆ. 50 ಕಂಪ್ಯೂಟರ್ಗಳನ್ನು ಒಳಗೊಂಡ ಹವಾನಿಯಂತ್ರ (ಎಸಿ) ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಇದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 50 ಜನ ಬಾಲಕರಿಗೆ ಹಾಸ್ಟೆಲ್ ಸೌಲಭ್ಯವಿದೆ ಎಂದರು.
ಅಭಿವೃದ್ಧಿ ಕಾರ್ಯಗಳು:
ಶೈಕ್ಷಣಿಕ ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೆಳಕಂಡಂತೆ ಪ್ರಾರಂಭವಾಗಲಿವೆ. ಹೆಚ್.ಕೆ.ಡಿ.ಬಿಯಿಂದ ಮಂಜೂರಾದ ರೂ.96 ಲಕ್ಷಗಳ ಅನುದಾನದಲ್ಲಿ 6 ತರಗತಿ ಕೊಠಡಿಗಳನಿರ್ಮಾಣ ಕರ್ನಾಟಕ ಸರ್ಕಾರದಿಂದ ಮಂಜೂರಾದ 75 ಲಕ್ಷ ರೂ. ಅನುದಾನದಲ್ಲಿ ಕರ್ನಾಟಕ ಗೃಹ ಮಂಡಳಿ ಮೂಲಕ ಕಾಲೇಜಿನ ಕಾಂಪೌಂಡ್ ಗೋಡೆ, ಕ್ಯಾಂಟೀನ್ ಮತ್ತು ಜಿಮ್ಗಳ ನಿರ್ಮಾಣ , ಕರ್ನಾಟಕ ಸರ್ಕಾರದಿಂದ ಮಂಜೂರಾದ ರೂ.1.15 ಕೋಟಿ ವೆಚ್ಚದಲ್ಲಿಕರ್ನಾಟಕ ಗೃಹಮಂಡಳಿಯವರ ಮೂಲಕ 7 ತರಗತಿ ಕೊಠಡಿಗಳನಿರ್ಮಾಣ ಕರ್ನಾಟಕ ಸರ್ಕಾರ ಮಂಜೂರಾದ ರೂ. 80 ಲಕ್ಷಗಳ ವೆಚ್ಚದಲ್ಲಿ 3 ತರಗತಿ ಕೊಠಡಿಗಳು, ಶೌಚಾಲಯಗಳ ನಿರ್ಮಾಣ ಕಾಮಗಾರಿಯನ್ನು ರೈಟ್ಸ್ ಸಂಸ್ಥೆಯವರು ಪ್ರಾರಂಭಿಸಲಿದ್ದಾರೆ ಎಂದರು. ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.
ಪ್ರತ್ಯೇಕ ಗ್ರಂಥಾಲಯ:
ಬಹುತೇಕ ಸಕರ್ಾರಿ ಕಾಲೇಜುಗಳಲ್ಲಿ ಪ್ರತ್ಯೇಕ ಗ್ರಂಥಾಲಯನಿರ್ಮಾಣವಾಗಿರುವುದು ಅಪರೂಪ. ಆದರೆ ಈ ಕಾಲೇಜಿನಲ್ಲಿ ಪ್ರತ್ಯೇಕವಾದ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕುಳಿತು ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಲು ಸುಸಜ್ಜಿತವಾದ ಗ್ರಂಥಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕುಳಿತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಇದೊಂದು ಅತ್ಯಂತ ಅನುಕೂಲಕರವಾದ ಸ್ಥಳವಾಗಿದೆ. ಗ್ರಂಥಾಲಯದಲ್ಲಿ ಅಗತ್ಯವಾದ 10 ಸಾವಿರಕ್ಕೂ ಅಧಿಕ ಪಠ್ಯಪುಸ್ತಕ:
ಜೊತೆಗೆ ಎಲ್ಲಾ ಸ್ಪಧರ್ಾತ್ಮಕ ಪರೀಕ್ಷೆಯ ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸಹ ಲಭ್ಯವಿವೆ ಎಂದರು. ಉಪಾಹಾರ ಗೃಹ(ಕ್ಯಾಂಟೀನ್):- ಕಾಲೇಜು ಆವರಣದಲ್ಲಿ ವಿದ್ಯಾರ್ಥಿ -ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಶುಚಿ-ರುಚಿಯಾದ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಉಪಾಹಾರ ಗೃಹ(ಕ್ಯಾಂಟೀನ್) ಅವಶ್ಯಕವಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪತ್ರ ವ್ಯವಹಾರವನ್ನು ಮಾಡಿದ್ದರಿಂದ ಸಕರ್ಾರವು ಅನುದಾನವನ್ನು ಮಂಜೂರು ಮಾಡಿದೆ. ಇದರಿಂದ ವಿದ್ಯಾರ್ಥಿಗಳು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಯವರಿಗೆ ಅನುಕೂಲವಾಗಿದೆ.
ಉದ್ಯೋಗ ಮೇಳ:
ವೃತ್ತಿ ಶಿಕ್ಷಣ ನೀಡುತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಂತರ ರಾಜ್ಯದ ಪ್ರಸಿದ್ಧ ಕಾಲೇಜುಗಳಲ್ಲಿ ಮಾತ್ರ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ. ಆದರೆ ಈ ವರ್ಷದಲ್ಲಿ ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಅವರಿಗೆ ಜೀವನದಲ್ಲಿ ಉದ್ಯೋಗವನ್ನು ಪಡೆಯಲು ಸಂಬಂಧಿಸಿದ ಇಲಾಖೆಯೊಂದಿಗೆ ಪತ್ರ ವ್ಯವಹಾರವನ್ನು ಮಾಡಿ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಉದ್ಯೋಗವನ್ನು ದೊರಕಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಧಕೃಷ್ಣಾ ವಿವರಿಸಿದರು