ಲೋಕದರ್ಶನ ವರದಿ
ಬಳ್ಳಾರಿ 16: ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಲೆಂದು ಯಡಿಯೂರಪ್ಪ ಅಭಿಮಾನಿಗಳು ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಖಂಡ ಪೂಜೆ, ಕುಂಕುಮಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್, ಡಾ.ಎಸ್.ಜೆ.ವಿ ಮಹಿಪಾಲ್, ಬಿ.ರಾಮಚಂದ್ರಯ್ಯ. ಪಲ್ಲೇದ ದೊಡ್ಡಪ್ಪ, ಆನಂದೆಶ್ವರಿ, ಗೊವರ್ಧನ, ಜನಾರ್ಧನ, ಚಂದ್ರಮೌಳಿ, ರಾಜೇಶ್, ಸುರೇಶ, ಬಸವರಾಜ, ಬಾಬಣ್ಣ ಸೇರಿದಂತೆ ಇನ್ನು ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.