ಬಳ್ಳಾರಿ: ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೀಕ್ಷಕರು

ಬಳ್ಳಾರಿ 07: ಬಳ್ಳಾರಿ ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಹಾಗೂ ಮಾಧ್ಯಮ ಪ್ರಮಾಣೀಕರಣ ಕೇಂದ್ರಕ್ಕೆ ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಆಗಮಿಸಿದ ಸಾಮಾನ್ಯ ವೀಕ್ಷಕರಾದ ಶಿಯೋ ಶೇಖರ್ ಶುಕ್ಲಾ, ಅಶುತೋಷ ಅವಸ್ತಿ ಹಾಗೂ ಪೊಲೀಸ್ ವೀಕ್ಷಕರಾದ ಎಸ್.ಎಂ.ನರ್ವನೆ, ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹಾಗೂ ಇನ್ನೀತರ ಅಧಿಕಾರಿಗಳು ಗುರುವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಧ್ಯಮ ಕಣ್ಗಾವಲು ಹಾಗೂ ಮಾಧ್ಯಮ ಪ್ರಮಾಣೀಕರಣ ಕೇಂದ್ರದ ಕಾರ್ಯವೈಖರಿಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಅವರು ವೀಕ್ಷಕರಿಗೆ ಅಗತ್ಯ ಮಾಹಿತಿ ನೀಡಿದರು.

    ಪತ್ರಿಕಾ ತುಣುಕುಗಳ ಬುಕ್ಲೇಟ್, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಳ್ಳಾರಿ ಜಿಲ್ಲೆಯ ಸುದ್ದಿಗಳು ಬಂದಾಗ ರಿಕಾಡರ್ಿಂಗ್ ಮಾಡುವ ವ್ಯವಸ್ಥೆ, ಸೋಶಿಯಲ್ ಮಿಡಿಯಾ ಕಾರ್ಯವೈಖರಿ, ಮಾಧ್ಯಮಗಳಿಗೆ ಜಾಹೀರಾತು ಅನುಮತಿ ನೀಡುವ ವ್ಯವಸ್ಥೆ, ವಿವಿಧ ಚಚರ್ಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದರ ಬಗೆ ಹಾಗೂ ಇದುವರೆಗಿನ ವಿವರ ತಿಳಿದುಕೊಂಡರು.

     ಪತ್ರಿಕೆಗಳು, ಟಿವಿ, ರೇಡಿಯೋ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತುಗಳ ಮೇಲೆ ನಿಗಾವಹಿಸುವಂತೆ ವೀಕ್ಷಕರು ಈ ಸಂದರ್ಭದಲ್ಲಿ ಸೂಚಿಸಿದರು.

     ಚುನಾವಣಾ ಜಾಹೀರಾತುಗಳು ಅಥವಾ ಪೇಡ್ ನ್ಯೂಸ್ಗಳು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡುಬಂದರೇ ಅದರ ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಗಳು  ವೆಚ್ಚಕ್ಕೆ ಸೇರ್ಪಡೆ ಮಾಡಿ ಎಂದು ಹೇಳಿದರು.

    ನಂತರ ಅವರು ಕರ್ನಾಟಕ   ಲೋಕಸಭಾ ಚುನಾವಣಾ ಇತಿಹಾಸ ಹಾಗೂ ಮತದಾನದ ಮಹತ್ವ, ಚುನಾವಣಾ ಆಯೋಗದ ಸಿದ್ಧತೆಗಳ ಕುರಿತು ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಮಾಚರ್್ ಆಫ್  ಕರ್ನಾಟಕ   ಹಾಗೂ ಜನಪದ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಿದರು.

ನಂತರ ಅವರು ಸಣ್ಣ ಉಳಿತಾಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ದೂರು ನಿರ್ವಹಣಾ ಕೋಶ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಹಾಗೂ ಇನ್ನೀತರ ಅಧಿಕಾರಿಗಳು ಇದ್ದರು.