ಲೋಕದರ್ಶನ ವರದಿ
ಬಳ್ಳಾರಿ 04: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ದಿ: 3 ಮತ್ತು 4ಜೂನ್ 2019 ರಂದು ಆದಿವಾಸಿಗಳ ಬರವಣಿಗೆ ಮತ್ತು ನಿರ್ಬಂಧಿತ ಧ್ವನಿ ಈ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಜರುಗಿತು. ಉದ್ಘಾಟನೆ ಮಾಡಿ ಮಾತನಾಡಿದ ಡಾ. ಸುರಜ್ ಬಡ್ತ್ಯ ನಾಗರಿಕ ಸಮಾಜ ಆದಿವಾಸಿ ಜನರಿಗೆ ಅನ್ಯಾಯ ಮಾಡಿದೆ, ಆದಿವಾಸಿಗಳು ಕೇವಲ ಭೂಮಿ, ನೀರು, ಕಾಡು ಇವುಗಳ ನಡುವೆ ಕಳೆದು ಹೋಗಿದ್ದಾರೆ. ಮೂಲಭೂತ ಹಕ್ಕುಗಳ ಕುರಿತು ಜ್ಞಾನವನ್ನು ಹೊಂದದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.
ಮುಖ್ಯ ಅಥಿತಿ ಮಾತುಗಳಾನ್ನಾಡಿದ ಪ್ರೊ. ರಮೇಶ್ ಆದಿವಾಸಿಗಳು ಬದುಕನ್ನು ಕಟ್ಟಿಕೊಳ್ಳುವುದು ಇವತ್ತಿನ ಅನಿವಾರ್ಯತೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕುಲಪತಿ ಎಂ.ಎಸ್. ಸುಭಾಸ್ ಆದಿವಾಸಿ ಜೀವನ ಒಂದು ನಿಗೂಢ ಪ್ರಶ್ನೆಯಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಎನ್. ಶಾಂತನಾಯ್ಕ್ ವಿಚಾರ ಗೋಷ್ಠಿಯ ಮೂಲ ಆಶಯವನ್ನು ಪ್ರಸ್ತುತ ಪಡಿಸುತ್ತಾ ಆದಿವಾಸಿಗಳು ಬದುಕಿರುವ ಬದುಕು ಅವರದಲ್ಲಾ, ಇದು ನಾಗರಿಕ ಸಮಾಜ ಹೇರಿರುವ ಒತ್ತಡ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಲ ಭಾಷಣ ಮಾಡಿದ ಬಾಬುರಾವ್ ಹರಿಶ್ರೀ, ಭೂತನ್ ರಾಯಲ್ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕ ಮಾತನಾಡಿ ಪಾಶ್ಚತ್ತೋತ್ತರ ಭಾರತದಲ್ಲಿ ಆದಿವಾಸಿಗಳು ಎಲ್ಲಾ ಮೂಲ ನೆಲೆಗಳನ್ನು ಕಳೆದುಕೊಂಡು ದಿಕ್ಕಿಲ್ಲದಂತೆ ಆಗಿದ್ದಾರೆ ಎಂದರು.
ಕಾರ್ಯಕ್ರಮವು ರಾಹುಲ್ ನಾಗಪ್ಪ ತಂಡದವರ ಉರುಮಿಯೊಂದಿಗೆ ಆರಂಭವಾಗಿದ್ದು ವಿಶಿಷ್ಟ. ಕಾರ್ಯಕ್ರಮದಲ್ಲಿ ಹೈದರಾಬಾದಿನ ಡಾ.ರಾಜುನಾಯ್ಕ್, ಡಾ.ವಿಜಯ, ಮುತಾಂದ ಅನೇಕ ಸಂಶೋಧಕರು ಹಾಜರಾಗಿದ್ದರು. ಮಾನಸ.ಕೆ ಪ್ರಾರ್ಥನೆ ಮಾಡಿದರು ಫರಾನಾಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.