ಬಳ್ಳಾರಿ: ಗ್ರಾಮ ಲೆಕ್ಕಾಧಿಕಾರಿಗಳ ಸಾಂಕೇತಿಕ ಮುಷ್ಕರ

ಲೋಕದರ್ಶನ ವರದಿ

ಬಳ್ಳಾರಿ 17: ಅನ್ಯ ಇಲಾಖೆಗಳ ಕೆಲಸಗಳಿಂದ ಕೈಬಿಡಬೇಕು. ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕನರ್ಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದಿಂದ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿಗಳು ಒಂದು ದಿನದ ಧರಣಿ ಮತ್ತು ಸಾಂಕೇತಿಕ ಮುಷ್ಕರ ನಡೆಸಿದರು. 

ರಾಜ್ಯಾಧ್ಯಂತ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಇದೇ ರೀತಿ ಧರಣಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಯಲಿದೆ ಎಂದರು. ಸಂಘದ ರಾಜ್ಯಾಧ್ಯಕ್ಷ ಅಂದನಗೌಡ ದಾನಪ್ಪಗೌಡ, ಜಿಲ್ಲಾಧ್ಯಕ್ಷ ದೊಡ್ಡಬಸಪ್ಪ ರೆಡ್ಡಿ, ಕೆ.ನಾಗರಾಜ ಇನ್ನೂ ಮೊದಲಾದವರ ನೇತೃತ್ವದಲ್ಲಿ ನೂರಾರು ಗ್ರಾಮಲೆಕ್ಕಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆಗಳ ಈಡೇರಿಕೆಗೆ ಘೋಷಣೆಗಳನ್ನು ಕೂಗಿದರು. ಸಿ.ಆಂಡ್.ಆರ್ ಕಾನೂನು ತಿದ್ದುಪಡಿ ಮಾಡಬೇಕು. 

ಎಫ್.ಡಿ.ಎಗೆ 1 ಸಾವಿರ ರೂಗಳನ್ನು ನೀಡಬೇಕು, ಅನ್ಯ ಇಲಾಖೆಗಳ ಕೆಲಸಗಳಿಂದ ಕೈಬಿಡಬೇಕು. ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. 2017ರ ಅಗಷ್ಟ್ 11 ರಂದು ಸಭೆ ನಡೆಸಿ ಮುಷ್ಕರವನ್ನು ಕೈಬಿಡುವಂತೆ ಹಾಗೂ ಬೇಡಿಕೆಗಳನ್ನು ಈಡೇರಿಸುವುದಾಗಿ ಕಂದಾಯ ಇಲಾಖೆಯ ಕಾರ್ಯದಶರ್ಿಗಳು ಲಿಖಿತ ರೂಪದಲ್ಲಿ ಅಂದು ಬರವಸೆ ನೀಡಿದ್ದರು. 

ಆದರೆ ಈ ವರೆಗೆ ಆ ಬರವಸೆಗಳು ಈಡೇರಿಸಿಲ್ಲ. ಇಂದಿನ ಈ ಮುಷ್ಕರಕ್ಕೆ ಸಕರ್ಾರ ಸ್ಪಂಧಿಸದಿದ್ದರೇ ಮುಂದಿನ ದಿನದಲ್ಲಿ ಬೆಂಗಳೂರಿನ ಫ್ರಡಂ ಫಾರ್ಕನಲ್ಲಿ ಅನಿಧರ್ಿಷ್ಟವದಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.