ಬಳ್ಳಾರಿ: ಮತದಾನ ಕೇಂದ್ರದ ಸುತ್ತ 200 ಮೀಟರ್ ನಿರ್ಬಂಧಿತ ಪ್ರದೇಶ

ಬಳ್ಳಾರಿ 17: ಬಳ್ಳಾರಿ ಜಿಲ್ಲೆಯ 06 ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳಿಗೆ ಮೇ 29ರಂದು ನಡೆಯುವ ಉಪಚುನಾವಣೆಯ ಅಂಗವಾಗಿ ಮತದಾನ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ ರಾಮ್ ಪ್ರಸಾತ್ ಮನೋಹರ್ ಆದೇಶ ಹೊರಡಿಸಿದ್ದಾರೆ. 

ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ-30, ಸಿರುಗುಪ್ಪ ತಾಲೂಕಿನ ಶಾನವಾಸಪುರ-20, ಸಂಡೂರು ತಾಲೂಕಿನ ವಡ್ಡು-18, ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ -11, ಹಡಗಲಿ ತಾಲೂಕಿನ ಸೋವೇನಹಳ್ಳಿ-5, ಹೊಸಪೇಟೆ ತಾಲೂಕಿನ ಮಲಪನಗುಡಿ-2ರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಮತದಾನ ನಡೆಯಲಿರುವ ದಿನದ 48 ಗಂಟೆಗಳ ಪೂರ್ವದಿಂದ ಅಂದರೆ ಮೇ 27 ರ ಸಂಜೆ 6 ರಿಂದ ಮೇ 29ರ ರಾತ್ರಿ 8 ಗಂಟೆಯವರೆಗೆ ಅನ್ವಯವಾಗುವಂತೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನಿಯಮಬಾಹಿರ ಚಟುವಟಿಕೆ ರಾಜಕೀಯ ಸಭೆ-ಸಮಾರಂಭ, ಮೆರವಣಿಗೆ ನಡೆಸುವುದು, ಛಾಯಗ್ರಹಣ, ದೂರದರ್ಶನ ಅಥವಾ ಇತರೆ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದಶರ್ಿಸುವುದು ಮುಂತಾದವುಗಳಿಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 126ರಡಿ ನಿರ್ಬಂಧವಿರುತ್ತದೆ ಹಾಗೂ ಆಯಾ ವ್ಯಾಪ್ತಿಯಲ್ಲಿನ ಅಥವಾ ಕ್ಷೇತ್ರದಲ್ಲಿನ ಚುನಾವಣೆ ನಡೆಯುವ ಮತಗಟ್ಟೆಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಆದೇಶಿಲಾಗಿದೆ. ಮದ್ಯಪಾನ ಸಾಗಣಿಕೆ, 

ಮಾರಾಟ ನಿಷೇಧ: 

ಜಿಲ್ಲೆಯ 6 ಗ್ರಾಪಂ ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆಯು ನಡೆಯಲಿದ್ದು, ಚುನಾವಣಾ ನಡೆಯುವ ಕ್ಷೇತ್ರಗಳಲ್ಲಿ ಮೇ 13 ರಿಂದ 31ರವರೆಗೆ ಎಲ್ಲಾ ಮದ್ಯಪಾನ, ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅವರ ಮಾಲೀಕರು, ಅಧಿಭೋಗದಾರರು ಮತ್ತು ಸಂಧರ್ಭನುಸಾರ ವ್ಯವಸ್ಥಾಪಕರು ಮುಚ್ಚಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.