ಚಟಗಳಿಗೆ ದಾಸರಾಗದೆ ಕಾಯಕವನ್ನು ನಂಬಿ ಬದುಕಿ : ಕೃಷ್ಣಪೂರ

Believe in kayaking without being a slave to addictions : Krishnapura

ಚಟಗಳಿಗೆ ದಾಸರಾಗದೆ ಕಾಯಕವನ್ನು ನಂಬಿ ಬದುಕಿ : ಕೃಷ್ಣಪೂರ      

ಶಿಗ್ಗಾವಿ 19 : ಮಕ್ಕಳನ್ನು ಶೈಕ್ಷಣಿಕವಾಗಿ ಸಂಸ್ಕೃತಿ ಆಚಾರ್ಯ ವಿಚಾರಗಳ ಬಗ್ಗೆ ಸಮರ​‍್ಕವಾಗಿ ಅರಿವು ಮೂಡಿಸುವ ಕಾರ್ಯ ಮಾಡಿ ಚಟಗಳಿಗೆ ದಾಸರಾಗದೆ ಕಾಯಕವನ್ನು ನಂಬಿ ಬದುಕಿ ಎಂದು ಮಹಾನ ತಪಸ್ವೀ ಡಾ ಕುಮಾರ ಮಹಾರಜರು ಆದ್ರಳ್ಳಿ ಹಾಗೂ ಬಂಜಾರ ಗುರುಪೀಠ ಕೃಷ್ಣಪೂರ ಹೇಳಿದರು.  ತಾಲೂಕಿನ ಯತ್ತಿನಹಳ್ಳಿ ತಾಂಡಾದಲ್ಲಿ ನಡೆದ ಗೌರಿ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗುತ್ತಿದ್ದಾರೆ ಬಡವರ ಮಕ್ಕಳು ಬಡವರಾಗಿ ಉಳಿಯುತ್ತಿದ್ದಾರೆ ನಾವೆಲ್ಲ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಸಮಾಜವನ್ನ ಮುಂಚೂಣಿಯಲ್ಲಿ ತರುವ ಮೂಲಕ ಕೆಳಮಟ್ಟದಿಂದ ಮೇಲೆ ಬೆಳೆಯಲು ಸಮುದಾಯಕ್ಕೆ ಸಾಧ್ಯವಾಗುತ್ತದೆ ಎಂದರು.  

ಭಾಕ್ಸ ಸುದ್ದಿ : ಇದೇ ತಿಂಗಳ 14 ರಂದು ಸಂತ ಸೇವಾಲಾಲರ ಜಯಂತೋತ್ಸವ ಕಾರ್ಯಕ್ರಮ ದಾವಣಗೇರಿ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಸರಕಾರಿ ಕಾರ್ಯಕ್ರಮವಾಗಿ ನಡೆಯಿತು ಆದರೆ ಸಂತ ಸೇವಾಲಾಲರ ಕಾರ್ಯಕ್ರಮಕ್ಕೆ ಸಮಾಜದ ಯಾವೊಬ್ಬ ಸ್ವಾಮೀಜಿಗಳಿಗೆ ಅವ್ಹಾನ ನೀಡಿಲ್ಲ ಕಾರಣ ಸ್ವಾಮೀಜಿಗಳನ್ನ ಕಾರ್ಯಕ್ರಮಕ್ಕೆ ಅವ್ಹಾನಿಸಿದರೆ ಸರಕಾರದಿಂದ ಮಂಜೂರಾದ ಹಣದ ಲೆಕ್ಕಪತ್ರ ಕೇಳುತ್ತಾರೆ ಎಂಬ ಭಯ ರಾಜಕಾರಣಿಗಳಿಗೆ, ಸೂರಗೊಂಡನಕೊಪ್ಪದ ಸಮಿತಿಗೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.್ಷ ಸರಕಾರದಿಂದ ಸೇವಾಲಾಲರ ಜಯಂತೋತ್ಸವಕ್ಕೆಂದೆ ಸುಮಾರು ಎಂಟು ಕೋಟಿಗೂ ಹೆಚ್ಚು ಹಣ ಬಂದಿದೆ ಕಾರಣ ಸಮಿತಿಯವರು ರಾಜಕಾರಣಿಗಳು ಜಯಂತೋತ್ಸವದ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿದ್ದಾರೆ ಆದ್ದರಿಂದ ಈ ಹಣದ ಬಗ್ಗೆ ಸೂಕ್ತ ತನಿಖೆ ಹಾಗೂ ಅದರ ಖರ್ಚುವೆಚ್ಚದ ಬಗ್ಗೆ ಬಹಿರಂಗಪಡಿಸಬೇಕು ಎಂದರು.  

 ಶಶಿಧರ ಪಾಟೀಲ ಮಾತನಾಡಿ ಲಂಬಾಣಿ ಸಮುದಾಯವು ಸ್ವಾವಲಂಬಿ ಬದುಕು ನಡೆಸುವ ಜನ, ದಿನನಿತ್ಯ ಹೆಣ್ಣು ಗಂಡು ಸಮನಾಗಿ ದುಡಿದು ಜೀವನ ಸಾಗಿಸುತ್ತಾ ಗುಣಮಟ್ಟದಲ್ಲಿ ಬದುಕಲು ಸಾಕಷ್ಟು ಕಷ್ಟ ಪಟ್ಟು ಬೆಳೆಯಲು ಪ್ರಯತ್ನಿಸುತ್ತಿರುವ ಸಮಾಜ ಇದು ಎಂದರು.   ಈ ಸಂದರ್ಭದಲ್ಲಿ ಗ್ರಾಮದ ಈರಣ್ಣ ನಾಯ್ಕ, ರಾಮಣ್ಣ ಡಾವ್, ಮಲ್ಲೇಶ ಕಾರಬಾರಿ, ಮಹಾಂತೇಶ ಬಿದರಗಡ್ಡಿ, ಪ್ರಭು ಬಿದರಗಡ್ಡಿ, ನಾಗರಾಜ ಲಮಾಣಿ ಸೇರಿದಂತೆ ಯುವಕರು ಗ್ರಾಮಸ್ಥರು ಮಹಿಳೆಯರು ಇದ್ದರು.