ಲೋಕದರ್ಶನ ವರದಿ
ಬೆಳಗಾವಿ, 3: ಯುವಜನರ ಕೌಶಲ್ಯಾಭಿವೃದ್ಧಿಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ವರ್ಗ ಶ್ರಮಿಸಬೇಕು. ಇದರಿಂದಾಗಿ ಸಮಾಜದ ಎಲ್ಲ ವಿಭಾಗಗಳ ಏಳಿಗೆಯಾಗುವುದೆಂದು ಎಸ್.ಎ.ಇ.ಎಫ್. ಸಂಸ್ಥೆಯ ಚೇರಮನ್ ಹಾಗೂ ಸಂಸದ ಸುರೇಶ ಅಂಗಡಿ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಪುಣೆಯ ಫ್ರೇಂಡ್ಸ ಯುನಿಯನ್ ಫಾರ್ ಎನಜರ್ಾಯಜಿಂಗ್ ಲೈವ್ಸ ಎನ್.ಜಿ.ಓ. ಸಹಯೋಗದಲ್ಲಿ ನಡೆದ ಬೆಳಗಾವಿ ವಲಯದ ಎಲ್ಲ ಅನುದಾನ ಹಾಗೂ ಅನುದಾನರಹಿತ ಪದವಿಪೂರ್ವ ಶಿಕ್ಷಣ ಕಾಲೇಜುಗಳ ಪ್ರಾಚಾರ್ಯರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪುಣೆಯ ಫ್ಯೂಯೆಲ್ನ ಚೇರಮನ್ ಕೇತನ ದೇಶಪಾಂಡೆಯವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ಕೌಶಲ್ಯಾಭಿವೃದ್ಧಿ ಎಲ್ಲ ಸಮಾಜದ ಯುವಜನರಿಗೆ ಸಿಗುವಂತಾಗಬೇಕೆಂದು ಕರೆ ನೀಡಿದರು ಹಾಗೂ ಎಸ್.ಎ.ಇ.ಎಫ್. ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆಯೆಂದು ಹೇಳಿದರು.
ಹುಬ್ಬಳ್ಳಿಯ ಎನ್.ಎಸ್. ಇನ್ಫೋಟೆಕ್ನ ಸಿ.ಇ.ಓ. ಹಾಗೂ ಚೀಫ್ ಮೆಂಟರ್ ಆಫ್ ಫ್ಯೂಯಲ್ ಸಂತೋಷ ಹುರಳಿಕೊಪ್ಪಿ, ಬೆಳಗಾವಿ ವಲಯದ ಡಿ.ಡಿ.ಪಿ.ಯು ವಿ.ಜಿ. ರಜಪೂತ, ಆಡಳಿತಾಧಿಕಾರಿ ರಾಜು ಜೋಶಿ, ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಪ್ರೊ. ವಿಶಾಲಕೀತರ್ಿ ಪಾಟೀಲ ಸ್ವಾಗತಿಸಿದರು. ಪ್ರೊ. ವಿಜಯ ಕುಂಬಾರ ಪರಿಚಯಿಸಿದರು. ಪ್ರೊ. ಅನುರಾಧಾ ಹೂಗಾರ ಹಾಗೂ ಪ್ರೊ. ವಷರ್ಾ ದೇಶಪಾಂಡೆ ನಿರೂಪಿಸಿದರು. ಪ್ರೊ. ಪ್ರಿಯಾಂಕಾ ಪೂಜಾರಿ ವಂದಿಸಿದರು.