ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ ಆರಂಭ

ಲೋಕದರ್ಶನ ವರದಿ

ಬೆಳಗಾವಿ 20: ದಕ್ಷಿಣ ಮತಕ್ಷೇತ್ರದಲ್ಲಿ ಅಭಯ ಪಾಟೀಲರು ಶಾಸಕರಾದ ಬಳಿಕ ಇಂದಿನಿಂದ ಅಭಿವೃದ್ಧಿ ಕಾಮಗಾರಿಗಳ ಪರ್ವ ಆರಂಭವಾಗಿದೆ.

ಶಾಸಕರಾದ ಬಳಿಕ ಅಭಯ ಪಾಟೀಲ ತಮ್ಮ ಕ್ಷೇತ್ರದ ಎಲ್ಲ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ, ಕಾಮಗಾರಿಗಳ ಪಟ್ಟಿಮಾಡಿ ಯೋಜನೆ ರೂಪಿಸಿ ಪ್ರಸ್ತಾವಣೆ ಸಲ್ಲಿಸಿ, ಈಗ ಒಟ್ಟು ಹದಿನೈದು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿಸಿ, ಇಂದು 5 ಒಳಚರಂಡಿ (ಡ್ರೈನೇಜ್)  ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಹದಿನೈದು ಕಾಮಗಾರಿಗಳ ಪೈಕಿ ಅತ್ಯಂತ ಅಗತ್ಯವಾಗಿರುವ ಮತ್ತು ಹೆಚ್ಚು ತೊಂದರೆ ಎದುರಿಸುತ್ತಿರುವ ದಕ್ಷಿಣ ಮತಕ್ಷೇತ್ರದ ಸಂಭಾಜಿ ನಗರ, ಜ್ಞಾನೇಶ್ವರ ನಗರ, ಅಣ್ಣಪೂಣರ್ೆಶ್ವರಿ ನಗರ, ಓಂ ನಗರ, ಹಾಗೂ ಸಾಯಿ ನೇಕಾರ ಕಾಲೋನಿಯಲ್ಲಿ ಡ್ರೈನೇಜ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ಕಾಮಗಾರಿಗಳಿಂದ ಸುಮಾರು 20 ಸಾವಿರ ಜನರಿಗೆ ಅನಕೂಲವಾಗಲಿದ್ದು, ಉಳಿದ ಹತ್ತು ಡ್ರೈನೇಜ್  ಕಾಮಗಾರಿಗಳನ್ನು ಮುಂದಿನ ವಾರ ಚಾಲನೆ ನೀಡಲಾಗುವುದು ಡಿಸೆಂಬರ್ ಮತ್ತು ಜನೇವರಿ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿ ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಮಹಾನಗರಕ್ಕೆ ಆಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಅದಕ್ಕು ಮೊದಲು ಅವಶ್ಯಕತೆ ಇದ್ದಲ್ಲಿ, ಬೋರ್ವೆಲ್ ಹಾಕಿಸಲು ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ ನೀಡುವಂತೆ ಮನವಿ

ಬೆಳಗಾವಿ ಮಹಾನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ನಗರದ ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಶಾಸಕ ಅನೀಲ ಬೆನೆಕೆ ಜೊತೆಗೆ ಸಿ.ಎಂ. ಭೇಟಿಯಾಗಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಕೊಡುಗೆಯಾಗಿ ನಗರದ ಅಭಿವೃದ್ಧಿ 200 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ಒತ್ತಾಯ ಮಾಡುವುದಾಗಿ ಅಭಯ ಪಾಟೀಲ ತಿಳಿಸಿದ್ದಾರೆ.